ಸಾರಾಂಶ
ಶಿಗ್ಗಾಂವಿ -ಸವಣೂರು ಕ್ಷೇತ್ರ ನನ್ನ ತವರು ಮನೆ, ನನಗೆ ರಾಜಕೀಯವಾಗಿ ಎರಡನೇ ಜನ್ಮ ನೀಡಿದ ಕ್ಷೇತ್ರ ಇದು. ನನ್ನ ಜೀವನದ ಕೊನೆವರೆಗೂ ಈ ಕ್ಷೇತ್ರ ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ: ಶಿಗ್ಗಾಂವಿ -ಸವಣೂರು ಕ್ಷೇತ್ರ ನನ್ನ ತವರು ಮನೆ, ನನಗೆ ರಾಜಕೀಯವಾಗಿ ಎರಡನೇ ಜನ್ಮ ನೀಡಿದ ಕ್ಷೇತ್ರ ಇದು. ನನ್ನ ಜೀವನದ ಕೊನೆವರೆಗೂ ಈ ಕ್ಷೇತ್ರ ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಶಿಗ್ಗಾಂವಿ ಸವಣೂರು ಕ್ಷೇತ್ರದ ಶೀಲವಂತ ಸೋಮಾಪುರ, ದುಂಢಸಿ, ಅರಟಾಳ ತಾಂಡಾ, ಹೊಸೂರು ಯತ್ನಳ್ಳಿ, ತಾಂಡಾ, ಜಕ್ಕನಕಟ್ಟಿ ಗ್ರಾಮಗಳಲ್ಲಿ ಜನರಿಗೆ ಏರ್ಪಡಿಸಿರುವ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷವೇ ನನ್ನನ್ನು ಅಭೂತಪೂರ್ವ ಬೆಂಬಲದೊಂದಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಿರಿ, ಈಗ ನಾನೇ ಮಾಜಿ ಶಾಸಕನಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನೀವು ನನ್ನನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದಿರಿ, ನಾನು ಇಂತಹ ಪರಿಸ್ಥಿತಿಯಲ್ಲಿ ಬಂದು ನಿಮ್ಮ ಮುಂದೆ ನಿಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದರು.
ನನ್ನ ಸೌಭಾಗ್ಯ: ನಾನು ಬಿಜೆಪಿ ಸೇರಿದಾಗ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ ನಾನು ಧಾರವಾಡ ಅಥವಾ ಕುಂದಗೋಳ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತ ಪಡಿಸಿದೆ. ಆದರೆ, ಬಿಜೆಪಿ ವರಿಷ್ಠರು ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರು. ನಾನು ಐದು ನಿಮಿಷ ಯೋಚನೆ ಮಾಡಿ ವಿಧಾನಪರಿಷತ್ ಸದಸ್ಯನಾಗಿ ಹನ್ನೆರಡು ವರ್ಷ ಸೇವೆ ಮಾಡಿದ್ದು ನೆನಪಿಸಿಕೊಂಡು ಇಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆ. ಅದು ದೈವಿಚ್ಚೆಯಾಗಿತ್ತು ಎಂದು ಹೇಳಿದರು.ಈ ನಿಮ್ಮ ಸಹೋದರ ದೆಹಲಿಯಲ್ಲಿ ಇದ್ದಾನೆ ಎಂದು ತಿಳಿದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡು ಹೋಗಿ, ಇದೇ ಪ್ರೀತಿ ವಿಶ್ವಾಸ ನಿರಂತರ ಇರಲಿ ಎಂದು ಹೇಳಿದರು.