ಸಾರಾಂಶ
- ೬೦ನೇ ಜನ್ಮದಿನಾಚರಣೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್
- - -ಕನ್ನಡಪ್ರಭ ವಾರ್ತೆ ಜಗಳೂರು
ಮಾಜಿ ಶಾಸಕ ಎಚ್.ಪಿ.ರಾಜೇಶ್ ತಮ್ಮ ೬೦ನೇ ಜನ್ಮದಿನೋತ್ಸವವನ್ನು ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಸಂತೇಮುದ್ದಾಪುರ ಬಳಿಯ ಬೇಡಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಬಿಜೆಪಿ ಕಾರ್ಯಕರ್ತರು, ಅಪಾರ ಅಭಿಮಾನಿಗಳ ಮಧ್ಯೆ ಆಚರಿಸಿದರು.ಬಿದರಕೆರೆ ಗ್ರಾಮದಿಂದ ಶನಿವಾರ ಬೆಳಗ್ಗೆ ಕುಟುಂಬದೊಂದಿಗೆ ಆಗಮಿಸಿದ ಮಾಜಿ ಶಾಸಕ ಎಚ್.ಪಿ.ರಾಜೇಶ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಅನಂತರ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರಿಯುವ ಮೂಲಕ ೬೦೦ ಸಸಿಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ೬೦ನೇ ವಸಂತವನ್ನು ಪರಿಸರ ಜಾಗೃತಿ ಮೂಡಿಸುವ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಎಚ್.ಪಿ.ರಾಜೇಶ್ ಅವರು, ನನ್ನ ೬೦ನೇ ವಸಂತದ ಜನ್ಮದಿನವನ್ನು ಅಭಿಮಾನಿಗಳು ಇಷ್ಟೊಂದು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಾರೆ ಎಂದು ಭಾವಿಸಿರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದೀರಿ, ನಿಜಕ್ಕೂ ಖುಷಿಯಾಗಿದೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು.ನನ್ನ ಹುಟ್ಟುಹಬ್ಬದ ಅಂಗವಾಗಿ ದೇವಸ್ಥಾನ ಆವರಣದಲ್ಲಿ ವಿವಿಧ ಸಭೆಯ ಸಸಿಗಳನ್ನು ನೆಟ್ಟಿದ್ದೇವೆ. ಶುಭ ಕೋರಲು ಆಗಮಿಸಿದ ಎಲ್ಲ ಅಭಿಮಾನಿಗಳಿಗೂ, ಬಿಜೆಪಿ ಮುಖಂಡರು, ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿವೆ. ನಿಮ್ಮ ಪ್ರೀತಿ ಅಭಿಮಾನ, ಆಶೀರ್ವಾದ ಯಾವಾಗಲೂ ಹೀಗೆಯೇ ಇರಲಿ. ನಾನು ಸಹ ಯಾವಾಗಲೂ ನಿಮಗೆ ಸೇವಕನಾಗಿ ಕೆಲಸ ಮಾಡುವೆ ಎಂದರು.
ಅಭಿಮಾನಿಗಳು ರಾಜೇಶ್ ಜನ್ಮದಿನಕ್ಕಾಗಿ ೬೦ ಕೆಜಿ ತೂಕದ ಕೇಕ್ ತಯಾರಿಸಿ ತಂದಿದ್ದರು. ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್, ಎಚ್.ಸಿ. ಮಹೇಶ್, ಎಸ್.ಕೆ.ಮಂಜುನಾಥ್ ಸೇರಿದಂತೆ ಅಪಾರ ಜನಸ್ತೋಮದ ಜೊತೆಗೂಡಿ ಕೇಕ್ ಕತ್ತರಿಸಿ ಹಂಚಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಜಯಘೋಷಗಳನ್ನು ಕೂಗಿದರು. ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿಸಲಾಗಿತ್ತು.ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ:
ಜಗಳೂರು ಪಟ್ಟಣದ ಸಂತೆಪೇಟೆ ಸರಕಾರಿ ಶಾಲೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅಭಿಮಾನಿಗಳು ಬಿ.ಲೋಕೇಶ್, ರೇವಣ್ಣ, ನೇತೃತ್ವದಲ್ಲಿ ಎಚ್ಪಿಆರ್ ೬೦ನೇ ಹುಟ್ಟು ಹಬ್ಬ ಪ್ರಯುಕ್ತ ೧೨೦ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ಬುಕ್, ಪೆನ್ ವಿತರಿಸಿದರು.ಈ ವೇಳೆ ಬೇಡಿ ಆಂಜನೇಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಬಸವರಾಜ್, ಎಚ್.ಪಿ.ರಾಜೇಶ್ ಪುತ್ರ ಕೆ.ಆರ್.ಪೂರ್ವಜ್, ತಾ.ಪಂ. ಮಾಜಿ ಸದಸ್ಯ ಇ.ಎನ್. ಪ್ರಕಾಶ್, ಜಗಳೂರು ಕ್ಯಾಂಪ್ ರೇವಣ್ಣ, ಎಸ್‌ಟಿ ಸಂಘದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಬಿಜೆಪಿ ಮುಖಂಡರಾದ ನಾಗರಾಜ್, ಜಿಪಂ ಮಾಜಿ ಸದಸ್ಯ ಪಲ್ಲಾಗಟ್ಟೆ ಮಂಜುನಾಥ್, ನಿಬಗೂರು ರೇವಣಸಿದ್ದಪ್ಪ, ಮರುಳಾರಾಧ್ಯ, ಇ.ಎನ್.ಪ್ರಕಾಶ್, ದೇವಿಕೆರೆ ಶಿವಕುಮಾರ ಸ್ವಾಮಿ, ಬಾಲರಾಜ್, ಬಡಯ್ಯ, ಬಾಲಕೃಷ್ಣ, ಹಿರೇಮಲ್ಲನಹೊಳೆ ರೇವಣ್ಣ, ಬಸವಾಪುರ ರವಿಚಂದ್ರ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದು ಮಾಜಿ ಶಾಸಕರಿಗೆ ಶುಭ ಕೋರಿದರು.
- - --೧೨ಜೆ.ಎಲ್.ಆರ್.ಚಿತ್ರ೧: ಜಗಳೂರು ತಾಲೂಕಿನ ಸಂತೇಮುದ್ದಾಪುರ ಗ್ರಾಮದ ಬಳಿ ಇರುವ ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಜನ್ಮದಿನವನ್ನು ೬೦ ಕೆಜಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.