ಸಿಡಿಲು ಬಡಿದು ಯುವಕ ಸಾವು

| Published : Apr 24 2025, 11:46 PM IST

ಸಾರಾಂಶ

ಸಿಡಿಲು ಬಡಿದು ತಾಲೂಕಿನ ಸವಡಿ ಗ್ರಾಮದ ಯುವಕ ಕೊಟೇಶ ನರೇಗಲ್ಲ ( 25) ಸಾವನ್ನಪ್ಪಿದ ಘಟನೆ ಗುರುವಾರ ಸಾಯಂಕಾಲ‌ ಸಂಭವಿಸಿದೆ.

ರೋಣ: ಸಿಡಿಲು ಬಡಿದು ತಾಲೂಕಿನ ಸವಡಿ ಗ್ರಾಮದ ಯುವಕ ಕೊಟೇಶ ನರೇಗಲ್ಲ ( 25) ಸಾವನ್ನಪ್ಪಿದ ಘಟನೆ ಗುರುವಾರ ಸಾಯಂಕಾಲ‌ ಸಂಭವಿಸಿದೆ.

ಮೃತನು ಸವಡಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆ ಹತ್ತಿರ ಇರುವ ಮನೆಯ ನಿವಾಸಿಯಾಗಿದ್ದು, ತಮ್ಮ ಮನೆ ಮುಂದಿನ ಗಿಡದಲ್ಲಿನ ಟೊಂಗೆ‌ಗೆ ವಿದ್ಯುತ್ ವೈರ್ ತಾಗುತ್ತದೆಂದು, ಟೊಂಗೆಯನ್ನು ಕತ್ತರಿಸುವಾಗ ಸಿಡಿಲು ಬಡಿದಿದೆ.

ಗಂಭೀರ ಸ್ವರೂಪದ ಗಾಯಗೊಂಡು, ಚಿಕಿತ್ಸೆಗೆಂದು ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.