ಸಾರಾಂಶ
ಬಾಳೆಹೊನ್ನೂರು: ಗೊಬ್ಬರದ ಮೂಟೆ ಮೈ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಗುರುವಾರ ಸಮೀಪದ ಗೇರುಬೈಲು ಗ್ರಾಮದಲ್ಲಿ ನಡೆದಿದೆ.
ಬಾಳೆಹೊನ್ನೂರು: ಗೊಬ್ಬರದ ಮೂಟೆ ಮೈ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಗುರುವಾರ ಸಮೀಪದ ಗೇರುಬೈಲು ಗ್ರಾಮದಲ್ಲಿ ನಡೆದಿದೆ.ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಪೂರ್ಣೇಶ್ (27) ಮೃತಪಟ್ಟ ಯುವಕ. ಈತ ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿಕೊಂಡಿದ್ದು, ಗುರುವಾರ ಕೃಷಿ ಸಂಘದಿಂದ ಗೇರುಬೈಲಿನ ಖಾಸಗಿ ಎಸ್ಟೇಟ್‌ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಬಳಿಕ ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್‌ನಿಂದ ಅನ್‌ಲೋಡ್ ಮಾಡುವಾಗ ಆಕಸ್ಮಿಕ ಕಾಲು ಜಾರಿ ಕುಸಿದು ಬಿದ್ದಿದ್ದು, ಈ ವೇಳೆ ಆತ ಹೊತ್ತಿದ್ದ ಗೊಬ್ಬರದ ಮೂಟೆ ಆತನ ಕುತ್ತಿಗೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಸಹೋದರಿ ಪೂರ್ಣಿಮಾ ದೂರು ನೀಡಿದ್ದಾರೆ. ಪಿಎಸ್‌ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.೦೫ಬಿಹೆಚ್‌ಆರ್ ೩: ಪೂರ್ಣೇಶ್