ಈಜಲು ಹೋದ ಯುವಕ ಸಾವು

| Published : Apr 08 2025, 12:31 AM IST

ಸಾರಾಂಶ

ಈಜಲು ಹೋದ ಯುವಕನೋರ್ವ ನೀರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಜುಮ್ಮೊಬನಹಳ್ಳಿ ಹೊರವಲಯದ ಅರಣ್ಯ ಪ್ರದೇಶದ ಓಬಯ್ಯನಗುಡ್ಡದ ಹಳ್ಳದಲ್ಲಿ ಭಾನುವಾರ ಜರುಗಿದೆ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಈಜಲು ಹೋದ ಯುವಕನೋರ್ವ ನೀರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಜುಮ್ಮೊಬನಹಳ್ಳಿ ಹೊರವಲಯದ ಅರಣ್ಯ ಪ್ರದೇಶದ ಓಬಯ್ಯನಗುಡ್ಡದ ಹಳ್ಳದಲ್ಲಿ ಭಾನುವಾರ ಜರುಗಿದೆ.

ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದಲ್ಲಿ ವಾಸಸವಾಗಿರುವ ತುಮಕೂರ್ಲಹಳ್ಳಿ ಶ್ರೀಧರ (22) ಮೃತರು.

ಘಟನೆ ವಿವರ:

ಜುಮ್ಮೊಬನಹಳ್ಳಿ ಗ್ರಾಮದ ಸಮೀಪ ಇರವ ಓಬಯ್ಯನಗುಡ್ಡದ ಹಳ್ಳದಲ್ಲಿ ಆಗಾಗ ಈಜಾಡಲು ಹೋಗುತ್ತಿದ್ದ. ಅದರಂತೆ ಶನಿವಾರ ಮುಂಜಾನೆ ಶ್ರೀಧರ 11 ಗಂಟೆಗೆ ಮನೆಬಿಟ್ಟು ಹೋಗಿದ್ದಾನೆ ರಾತ್ರಿಯಾದರೂ ಮನೆಗೆ ಬಾರದ ಮಗನನ್ನು ಕುಟುಂಬದವರು ಹುಡುಕಾಡಿದರೂ ಸಿಗಲಿಲ್ಲ. ಪೋಷಕರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜುಮ್ಮೊಬನಹಳ್ಳಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಈಜಾಡಲು ಹೋಗಿರಬಹುದು ಎಂದು ಅಂದಾಜು ಮಾಡಿಕೊಂಡು ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಶರಣಬಸವ ರೆಡ್ಡಿ, ಸಹಾಯಕ ಠಾಣಾಧಿಕಾರಿ ಪಾಷಾ, ಸಿಬ್ಬಂದಿ ಹರಿಕೃಷ್ಣ, ಭಾಷಾ, ಕಾಶೀನಾಥ್ ತೋಟದ್, ರಮೇಶನಾವಿ ಹಾಗೂ ಚಾಲಕ ದೇವೇಂದ್ರ ಚೌದರಿ ಸೇರಿ ಅವರ ತಂಡ ಒಂದು ತಾಸು ಕಾರ್ಯಾಚರಣೆ ನಡೆಸಿ ಸ್ಥಳೀಯರ ಸಹಾಯದಿಂದ ನೀರಿನಲ್ಲಿ ಮುಳುಗಿದ್ದ ಶ್ರೀಧರ್ ಶವ ಹೊರತೆಗೆಯಲಾಯಿತು. ಮೃತನ ತಂದೆ ತಿಪ್ಪೇಸ್ವಾಮಿ ನೀಡಿದ ದೂರಿನಂತೆ ತಾಲೂಕಿನ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅನಾಮಧೇಯ ವ್ಯಕ್ತಿಯ ಶವ ಪತ್ತೆ:

ಹೊಸಪೇಟೆ ಮತ್ತು ಮುನಿರಾಬಾದ್ ರೈಲು ನಿಲ್ದಾಣಗಳ ಮಧ್ಯೆಭಾಗದಲ್ಲಿ ಏ.5ರಂದು ರೈಲು ಹಳಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿ ಚಹರೆ ವಿವರ:5.6 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಉದ್ದ ಮೂಗು, ಅಗಲವಾದ ಹಣೆ, ಸುಮಾರು 02 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಮತ್ತು ಸುಮಾರು ಸಣ್ಣ ಮೀಸೆ ಬಿಟ್ಟಿರುತ್ತಾರೆ. ಆಕಾಶ ತಿಳಿ ನೀಲಿ ಕಲರ್ ಪುಲ್ ಅಂಗಿ, ಕಾಲರ್‌ನಲ್ಲಿ ಎಂಆರ್ ಎಂದು ಇದೆ. ಬಿಳಿಯ ಬಣ್ಣದ ಹಾಫ್ ಬನಿಯನ್, ಕಂದು ಬಣ್ಣದ ಪ್ಯಾಂಟ್, ಒಂದು ಹಸಿರು ಬಣ್ಣದ ಗೆರೆಗಳುಳ್ಳ ಕೈ ವಸ್ತ್ರ, ಕಂದು ಬಣ್ಣದ ಅಂಡರವೇರ್, ಸೊಂಟಕ್ಕೆ ಬ್ರೌನ್ ಕಲರ್ ಬೆಲ್ಟ್ ಇರುತ್ತದೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ರೈಲ್ವೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು ಮೊ.: 9480802131, ರೈಲ್ವೆ ಪೊಲೀಸ್ ವೃತ್ತ, ಪೊಲೀಸ್ ವೃತ್ತ ನಿರೀಕ್ಷಕರು 9480800471 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು.