ಚನ್ನಗಿರಿ ತಾಲೂಕಿನ ಸಾರಥಿ- ಹೊಸೂರು ಗ್ರಾಮದ ಹನುಮಂತಪ್ಪ ಎಂಬವರ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದು, ಆತ ಮಗಳ ಕೈ ಬಿಟ್ಟನೆಂಬ ವಿಚಾರಕ್ಕೆ ಮನನೊಂದು ಗುರುವಾರ ಗ್ರಾಮದ ತನ್ನ ಅಡಕೆ ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
- ಚನ್ನಗಿರಿ ಠಾಣೆ ಬಳಿ ಹನುಮಂತಪ್ಪನ ಶವ ತಂದು ಪ್ರತಿಭಟಿಸಲು ಸಂಬಂಧಿಗಳ ಯತ್ನ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಸಾರಥಿ- ಹೊಸೂರು ಗ್ರಾಮದ ಹನುಮಂತಪ್ಪ ಎಂಬವರ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದು, ಆತ ಮಗಳ ಕೈ ಬಿಟ್ಟನೆಂಬ ವಿಚಾರಕ್ಕೆ ಮನನೊಂದು ಗುರುವಾರ ಗ್ರಾಮದ ತನ್ನ ಅಡಕೆ ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಹನುಮಂತಪ್ಪನ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಗಳು ಆರೋಪಿಸಿ ಠಾಣೆ ಬಳಿ ಶವ ತಂದು ಪ್ರತಿಭಟಿಸಲು ಯತ್ನಿಸಿದ್ದೂ ನಡೆಯಿತು.
ದೂರು ನೀಡಿದರೂ ಸ್ಪಂದಿಸಿಲ್ಲ:ಪ್ರೀತಿಸಿ ಮದುವೆಯಾಗದೇ ಮಗಳ ತೊರೆದ ಸದರಿ ಯುವಕನ ವಿರುದ್ಧ ಯುವತಿ ಕಡೆಯವರು ಚನ್ನಗಿರಿ ಪೊಲೀಸ್ ಠಾಣೆಗೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ನೀಡಿದ್ದರು. ಆದರೆ, ಪೊಲೀಸರು ಯುವಕನನ್ನು ಇಲ್ಲಿಯವರೆಗೆ ಬಂಧಿಸಿರಲಿಲ್ಲ. ತಮ್ಮ ವಿರುದ್ಧವೇ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನೊಂದ ಯುವತಿ ತಂದೆ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಸಂಬಂಧಿಗಳಾದ ರಂಗಸ್ವಾಮಿ, ಷಣ್ಮುಖ ದೂರಿದ್ದಾರೆ.
ಯುವತಿ ತಂದೆಯ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಹನುಮಂತಪ್ಪನ ಶವವನ್ನು ಸಂಬಂಧಿಗಳು ಪೊಲೀಸ್ ಠಾಣೆಗೆ ತಂದು ಪ್ರತಿಭಟಿಸಲು ಮುಂದಾದರು. ಆಗ ಪೊಲೀಸರು ಗೇಟ್‌ನ ಬಳಿಯೇ ತಡೆದು ಶವವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಿದರು.ಘಟನೆ ಬಗ್ಗೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರವೀಶ್ ಪ್ರತಿಕ್ರಿಯಿಸಿದ್ದು, ಪೋಕ್ಸೋ ಕೇಸು ದಾಖಲಾದಾಗ ಯುವಕನ ಕಡೆಯವರು ಹೈಕೋರ್ಟ್‌ನಿಂದ ಜಾಮೀನು ತಂದಿದ್ದಾರೆ. ಈ ಬಗ್ಗೆ ವಿಚಾರಣೆಯನ್ನು ಈ ತಿಂಗಳ 10ನೇ ತಾರೀಖು ನಿಗದಿ ಮಾಡಿದ್ದರು. ವಿಚಾರಣೆ ಮಾಡುವವರೆಗೂ ಪೊಲೀಸರು ಯಾರನ್ನು ಬಂಧಿಸಬಾರದು ಎಂಬ ಆದೇಶ ಮಾಡಲಾಗಿದೆ. ಈ ಹಿನ್ನೆಲೆ ನಾವು ಯಾರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
- - --1ಕೆಸಿಎನ್ಜಿ3, 4: