ಸಾರಾಂಶ
ನರಗುಂದ: ಪ್ರತಿಯೊಂದು ಮಗುವಿನ ಏಳಿಗೆಗೆ ತಾಯಿಯ ಪಾತ್ರ ಮಹತ್ವವಾಗಿದ್ದು, ತಾಯಿತನ್ನ ಮಗುವಿನ ಬೆಳವಣಿಗೆಗಾಗಿ ತನ್ನಎಲ್ಲಾ ಸರ್ವಸ್ವವನ್ನುತ್ಯಾಗ ಮಾಡಿರುತ್ತಾಳೆ. ಪಾಶ್ಚಿಮಾತ್ಯಕರಣದ ಶೈಲಿಗೆ ಮಾರುಹೋಗಿ ತಾಯಿಯ ತ್ಯಾಗವನ್ನುಯಾವದೇ ಕಾರಣಕ್ಕೂ ಮರೆಯಬಾರದು. ನಮ್ಮದೇಶದ ಸಂಸ್ಕೃತಿಯನ್ನು ಗೌರವಿಸುವ ವಿಶಿಷ್ಟ ಕಾರ್ಯವಾಗಬೇಕು ಅದನ್ನು ನಮ್ಮ ಮನೆ, ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಬಿತ್ತಬೇಕಾಗಿದೆ ಎಂದು ವಾಸನದ ನಿಸರ್ಗ ಚಿಕಿತ್ಸಕ ಡಾ. ಹನಮಂತ ಮಳಲಿ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಬಿ.ಎಂ. ಪಾಟೀಲ ಪ್ರೌಢಶಾಲೆಯಲ್ಲಿ ಮಾತೃ ಭೋಜನ ಹಾಗೂ ತಾಯಂದಿರ ಪಾದ ಪೂಜೆ ಕಾರ್ಯಕ್ರಮದಲ್ಲಿ ಉಪನ್ಯಾಸದಲ್ಲಿ ಮಾತನಾಡಿದರು.ನಾವು ನೀವೆಲ್ಲರೂ ಈ ಕಾರ್ಯದಲ್ಲಿ ಭಾಗಿಯಾಗಿದ್ದು ಪುಣ್ಯವಂತರು. ತಾಯಿಯ ಸೇವೆ, ದೇಶಪ್ರೇಮ ಸಂಸ್ಕಾರದ ಜೊತೆಗೆ ಉತ್ತಮ ಪ್ರಜೆಯಾಗಿ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯನಲ್ಲಿ ಮಾನವಿಯ ಮೌಲ್ಯಗಳು ಕಡಿಮೆಯಾಗುತ್ತಿದ್ದು ಆ ಕಾರ್ಯವನ್ನು ಬಿ.ಎಂ.ಪಾಟೀಲ ಶಾಲೆ ಮಾಡುತ್ತಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ. ಇದು ನಿಮ್ಮ ಮನೆ ಮನದಲ್ಲಿ ಮೂಡಿದಾಗ ಈ ಕಾರ್ಯಕ್ಕೆಅರ್ಥ ಬರುತ್ತದೆ ಹಾಗೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ರಕ್ಷಿತಾ ಈಟಿ, ಆರೋಗ್ಯಇಲಾಖೆಯ ಸೇವಾ ನಿವೃತ್ತಿ ಹೊಂದಿದ ಆರ್. ಸುಮಿತ್ರಾ, ರಾಷ್ಟ್ರ ಮಟ್ಟದ ಯೋಗ ಪಟು ಆಕಾಶ ಜಂಗಿನ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ಹನಮವ್ವ ಹಿರೇಮನಿ, ವಿ.ಕೆ.ಮರಿಗುದ್ದಿ, ಚಂದ್ರಶೇಖರ ಹೆಗಡೆ, ಶೇಖರಯ್ಯ ನಾಗಲೋಟೊಮಠ, ಬಾಪುಗೌಡ್ರತಿಮ್ಮನಗೌಡ್ರ, ಲೋಕಪ್ಪಕರಕೀಕಟ್ಟಿ, ಮುತ್ತಣ್ಣಚಿಕ್ಕನರಗುಂದ, ದ್ಯಾಮಣ್ಣ ಕಾಡಪ್ಪನವರ, ಬಸವರಾಜ ಕೆಂಚಗಳ್ಳಿ, ಶರಣಪ್ಪಗೌಡ ತಿರಕನಗೌಡ್ರ, ಮಲ್ಲಮ್ಮ ಕಳಸದ ಪ್ರಧಾನ ಗುರುಗಳಾದ ಎಸ್.ಜಿ.ರಾಜನಾಳ, ಎಸ್.ಎಚ್.ಕೆಳಗಡೆ, ಡಿ.ಎಚ್. ಪಂಢರಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು. ಎಸ್.ಎಚ್. ಹಿರೇಮಠ ಸ್ವಾಗತಿಸಿದರು. ವಿ.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.