ಸಾರಾಂಶ
19ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ಬಿಸಿಇ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ
ಕನ್ನಡಪ್ರಭ ವಾರ್ತೆ ಗೋಕಾಕದೇಶ ಬಲಿಷ್ಠಗೊಳಿಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ಮಾಜಿ ಐಎಎಸ್ ಅಧಿಕಾರಿ, ತಥಾಸ್ತು ಸಂಸ್ಥೆಯ ಮುಖ್ಯಸ್ಥೆ ಡಾ.ತನು ಜೈನ ಹೇಳಿದರು.
19ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ಬಿಸಿಇ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಿದರು.ದೇಶದ ಪರಿಸ್ಥಿತಿ ಆಧರಿಸಿ ಆಯಾ ಸರ್ಕಾರಗಳು ಕಾರ್ಯ ಮಾಡಿವೆ. ಮುಂದೆಯೂ ಮಾಡುತ್ತವೆ. ಒಬ್ಬ ಅಧಿಕಾರಿ ಅಚಲವಾದ ನಿರ್ಧಾರ ಕೈಗೊಳ್ಳುವ ಶಕ್ತಿ ಇರಬೇಕು. ಇದನ್ನು ಐಎಎಸ್ ತರಬೇತಿಯಲ್ಲಿ ತಿಳಿಸಲಾಗುತ್ತದೆ. ಅಧಿಕಾರಗಳ ಆಯ್ಕೆ ಮೊದಲು ಸಂದರ್ಶನ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲಿ ಅಂಜದೆ ಸಂದರ್ಶನ ಎದುರಿಸಬೇಕು. ಜೀವನದಲ್ಲಿ ಯಾವುದು ಸುಲಭವಲ್ಲ ಅದನ್ನು ಪರಿಸ್ಥಿತಿ ಆಧಾರದ ಮೇಲೆ ಎಲ್ಲರೂ ನಿಭಾಯಿಸಬೇಕು. ಸರ್ಕಾರ ಬರುತ್ತದೆ, ಹೋಗುತ್ತವೆ. ಆದರೆ ದೇಶ ಸದಾ ನಡೆಯುತ್ತಿರುತ್ತದೆ. ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪೀಳಿಗೆ ಮುಂದೆ ಬರಬೇಕು ಎಂದು ಕರೆ ನೀಡಿದರು.
ಇವಿಎಂ, ಬ್ಯಾಲೇಟ್ ಪೇಪರ್ ವಿಷಯದ ಬಗ್ಗೆ ಗಂಭೀರ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ರಾಜಕೀಯ ಪಕ್ಷಗಳನ್ನು ಇವಿಎಂ ಯಂತ್ರಗಳ ಪರಿಶೀಲಿಸಲು ಕರೆದ ಸಂದರ್ಭದಲ್ಲಿ ಯಾವ ಪಕ್ಷಗಳು ಮುಂದೆ ಬರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ತಪ್ಪುಗಳು ನಡೆಯುವುದು ವಿರಳ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ ಉಪಸ್ಥಿತರಿದ್ದರು.