ದೇಶದ ಅಭಿವೃದ್ಧಿಗೆ ಭದ್ರವಾದ ಬುನಾದಿ ಅಗತ್ಯ. ಭಾರತವು ವಿಶ್ವಗುರುವಾಗಬೇಕಾದರೆ ಯುವ ಜನತೆಯಲ್ಲಿ ಆ ಗುರಿಯನ್ನು ಸಾಧಿಸುವ ಪ್ರೇರಣೆ ಮತ್ತು ಸಂಕಲ್ಪ ಮೂಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಚಿತ್ರದುರ್ಗ ಹೇಳಿದರು. ಉಡುಪಿಯ ತೆಂಕನಿಡಿಯೂರು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿ ಕುರಿತು ಸಂವಾದ ನಡೆಸಿದರು.
ಉಡುಪಿ : ದೇಶದ ಅಭಿವೃದ್ಧಿಗೆ ಭದ್ರವಾದ ಬುನಾದಿ ಅಗತ್ಯ. ಭಾರತವು ವಿಶ್ವಗುರುವಾಗಬೇಕಾದರೆ ಯುವ ಜನತೆಯಲ್ಲಿ ಆ ಗುರಿಯನ್ನು ಸಾಧಿಸುವ ಪ್ರೇರಣೆ ಮತ್ತು ಸಂಕಲ್ಪ ಮೂಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಚಿತ್ರದುರ್ಗ ಹೇಳಿದರು. ಉಡುಪಿಯ ತೆಂಕನಿಡಿಯೂರು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿ ಕುರಿತು ಸಂವಾದ ನಡೆಸಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತವು ಸಂಪತ್ತು ಮತ್ತು ಜ್ಞಾನ ಎರಡರಲ್ಲೂ ಶ್ರೀಮಂತ ರಾಷ್ಟ್ರವಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪುರಾಣ ಪರಂಪರೆಗೆ ಕಾಲಮಾನದ ಲೆಕ್ಕಾಚಾರಗಳ ಮಿತಿಯಿಲ್ಲ. ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶದ ಭವಿಷ್ಯದ ಅಭಿವೃದ್ಧಿಯಲ್ಲಿ ಯುವಜನತೆ ಮಹತ್ತರ ಪಾತ್ರ ವಹಿಸಬೇಕು. ದೇಶದ ಪ್ರಗತಿಯ ಸೌಧ ಕಟ್ಟುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಇಟ್ಟಿಗೆಯಾಗಿ ತನ್ನ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು. ಲೆಕ್ಕಪರಿಶೋಧಕ ಪಿ.ದಿವಾಕರ ಶೆಟ್ಟಿ ಕಾಪು, ವಕೀಲ ಶಶಾಂಕ್ ಶಿವತ್ತಾಯ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ ಕೊಡವೂರು ಸಹಿತ ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ಉಪಸ್ಥಿತರಿದ್ದರು.