ಸಾರಾಂಶ
ಕಾರ್ಕಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ನಿತ್ಯವೂ ನಮ್ಮ ಜೀವನದಲ್ಲಿ ಕನ್ನಡವು ಮೊಳಗಬೇಕು. ಕಲಿಕಾ ಮಾಧ್ಯಮವು ಕನ್ನಡವಾಗಬೇಕು. ಕನ್ನಡಿಗರಾದ ನಾವು ಕನ್ನಡದ ಅಖಂಡತೆಗಾಗಿ ಶ್ರಮಿಸಬೇಕಾಗಿದೆ ಎಂದು ಕಾರ್ಕಳ ತಹಸೀಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.ಅವರು ಶುಕ್ರವಾರ ಕಾರ್ಕಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಮಾತೃ ಭಾಷೆಯಲ್ಲಿರುವ ಅಭಿವ್ಯಕ್ತ ಬೇರೆ ಭಾಷೆಯಲ್ಲಿ ಬರಲು ಸಾಧ್ಯವಿಲ್ಲ. ಮೊಬೈಲ್ ಗೀಳಿನಿಂದಾಗಿ ಯುವ ಜನತೆ ಸಾಹಿತ್ಯಾಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಯುವ ಜನತೆ ಕನ್ನಡ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು. ಕನ್ನಡಾಭಿಮಾನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಪೊಲೀಸ್ ಉಪಾಧೀಕ್ಷಕರಾದ ಅರವಿಂದ ಕಲಗುಜ್ಜಿ ಮತ್ತಿತರರು ಇದ್ದರು.