ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಸಂಗ ಮಾಡಿ, ಉದ್ಯೋಗ ಅರಸಿ ಬೇರೆಡೆ ಹೋಗುವ ಬದಲು ಇಲ್ಲಿಯೇ ಉಳಿದು ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನೀಡುವ ಸಂಕಲ್ಪವನ್ನು ಯುವ ಸಮುದಾಯ ಮಾಡಬೇಕು ಎಂದು ಭರತ್ ಬೊಮ್ಮಾಯಿ ಸಲಹೆ ನೀಡಿದರು.

ಸವಣೂರು: ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಸಂಗ ಮಾಡಿ, ಉದ್ಯೋಗ ಅರಸಿ ಬೇರೆಡೆ ಹೋಗುವ ಬದಲು ಇಲ್ಲಿಯೇ ಉಳಿದು ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನೀಡುವ ಸಂಕಲ್ಪವನ್ನು ಯುವ ಸಮುದಾಯ ಮಾಡಬೇಕು ಎಂದು ಭರತ್ ಬೊಮ್ಮಾಯಿ ಸಲಹೆ ನೀಡಿದರು.

ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕೀರ್ತಿ ಕಲಾ, ವಾಣಿಜ್ಯ ಮತ್ತು ಬಿಸಿಎ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ಹಾಗೂ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಆಯೋಜಿಸಿದ್ದ, ಪದವಿ ವಿದ್ಯಾರ್ಥಿಗಳಿಗೆ ವಿಕಸಿತ ಭಾರತ ಕುರಿತ ಭಾಷಣ ಸ್ಪರ್ಧೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಮಹಿಳೆಯರಿಗಾಗಿ ಗಾರ್ಮೆಂಟ್ ಉದ್ಯಮಗಳನ್ನು ಆರಂಭಿಸಿದ್ದು, ಇಂದು ಸಾವಿರಾರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪುರುಷರಿಗೂ ಉದ್ಯೋಗ ನೀಡುವ ಉದ್ಯಮಗಳನ್ನು ಸ್ಥಾಪಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಇಂದಿನ ಯುವಜನತೆ ಈ ಭಾಗದಲ್ಲಿ ಉದ್ಯಮಗಳನ್ನು ಆರಂಭಿಸಿದರೆ ಸಾಕಷ್ಟು ಜನರಿಗೆ ಉದ್ಯೋಗ ದೊರೆತು ಆರ್ಥಿಕ ವರಮಾನ ಹೆಚ್ಚುತ್ತದೆ ಮತ್ತು ಜನರ ಜೀವನಮಟ್ಟ ಸುಧಾರಿಸಲು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾಷಣ ಸ್ಪರ್ಧೆಯಲ್ಲಿ ವಾಹಿದ ಅಹಮದ್ ಹಾವೇರಿ ಪ್ರಥಮ (2,000), ರೂಪಾ ಕುರುವತ್ತಿ ದ್ವಿತೀಯ (1,500) ಹಾಗೂ ಉಮಾ ಧರ್ಮಗೌಡ್ರ ತೃತೀಯ (1,000) ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಹೊನ್ನಪ್ಪ ಕೊಳವರ, ಧರೆಪ್ಪಗೌಡ ಪಾಟೀಲ, ಅಶೋಕ ಯೆಲಿಗಾರ, ಬಸವರಾಜ ಸವೂರ, ನಾಗರಾಜ ವಾಲ್ಮೀಕಿ, ಶೋಭಾ ನಿಸ್ಸಿಮಗೌಡ್ರ, ಉಪನ್ಯಾಸಕರಾದ ಎ.ಎಚ್. ಭರಡಿ, ಶಿಲ್ಪಾ ಕೂಡಲ, ಲಾವಣ್ಯ ಎಮ್ಮಿ, ಸಿಮ್ರನ್ ಕೂಂಚೂರ, ವಿಜಯಲಕ್ಷ್ಮೀ ಪಾಟೀಲ, ಎಸ್.ಎ. ನವಲಗುಂದ, ಸುರಭಿ ಕಲಾಲ, ದಾವಲಬಿ ನದಾಫ, ಅಮಿತ ಸರ್ವದೆ, ವಿಜಯನಗೌಡ ಪಾಟೀಲ, ಮಂಜುಳಾ ಹೊಸಗೌಡ್ರ, ಸುಮಂಗಲಾ ಬಡಿಗೇರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಐ.ಕೆ. ಕಲ್ಮನಿ ಸ್ವಾಗತಿಸಿ, ವಂದಿಸಿದರು.