ಸಾರಾಂಶ
ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಡವಳ್ಳಿಯ ಕೋಟದಮಕ್ಕಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಭಟ್ಕಳ:
ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಡವಳ್ಳಿಯ ಕೋಟದಮಕ್ಕಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.ನೇತ್ರಾ ಮುತ್ತಯ್ಯ ಗವಾಳಿ ಮೃತಳು. ಈಕೆ ಭಟ್ಕಳ ಪಟ್ಟಣದ ಖಾಸಗಿ ಕಚೇರಿಯೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ನಂತರ ಗೆಳೆತನ ಮಾಡಿಕೊಂಡಿದ್ದ.
ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೇಳಿ ಕರೆ ಮಾಡಿ ಹೆದರಿಸಿ ಚಿತ್ರಹಿಂಸೆ ನೀಡಿ, ನಿನ್ನ ಅಶ್ಲೀಲ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿ ನಿನ್ನ ಮರ್ಯಾದೆ ತೆಗೆದು ಸಾಯಿಸುತ್ತೇನೆ. ಇಲ್ಲವಾದರೆ ಮರ್ಯಾದೆಗೆ ಅಂಜಿ ನೀನೆ ಸಾಯಬೇಕು ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಹೀಗಾಗಿ ನೇತ್ರಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಕಿರುಕುಳವೇ ಕಾರಣ ಎಂದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಯುವತಿ ತಂದೆ ಮುತ್ತಯ್ಯ ಗವಾಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿಎಸ್‌ಐ ಶ್ರೀಧರ ನಾಯ್ಕ ತನಿಖೆ ಕೈಗೊಂಡಿದ್ದಾರೆ.