ಯುವಕರು ಈಗ ಎಲ್ಲದರಲ್ಲೂ ಹಿಂದುಳಿದಿದ್ದಾರೆ: ಮಕ್ಕಳ ಹಕ್ಕುಗಳ ಸದಸ್ಯ ವೆಂಕಟೇಶ್‌

| Published : Sep 21 2024, 02:00 AM IST

ಯುವಕರು ಈಗ ಎಲ್ಲದರಲ್ಲೂ ಹಿಂದುಳಿದಿದ್ದಾರೆ: ಮಕ್ಕಳ ಹಕ್ಕುಗಳ ಸದಸ್ಯ ವೆಂಕಟೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣುಮಕ್ಕಳಿಗಿಂತ ಯುವಕರು ಪ್ರಸ್ತುತ ಎಲ್ಲಾ ಹಂತದಲ್ಲೂ ಹಿಂದೆ ಬೀಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್‌ ಹೇಳಿದರು. ಗುಂಡ್ಲುಪೇಟೆಯಲ್ಲಿ ಆಟದ ಹಕ್ಕು ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುಂಡ್ಲುಪೇಟೆ: ಹೆಣ್ಣುಮಕ್ಕಳಿಗಿಂತ ಯುವಕರು ಪ್ರಸ್ತುತ ಎಲ್ಲಾ ಹಂತದಲ್ಲೂ ಹಿಂದೆ ಬೀಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್‌ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಆಯೋಜಿಸಿದ್ದ ಆಟದ ಹಕ್ಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು. ಯುವಕರು ಜೀವನದಲ್ಲಿ ಆಶಯ ಹೊಂದಿರಬೇಕು. ಯಾವುದೇ ಅಹಿತಕರ ಯೋಚನೆ ಮಾಡಬಾರದು. ಮನಸ್ಸು ಮತ್ತು ದೇಹ ನಮ್ಮ ನಿಯಂತ್ರಣದಲ್ಲಿ ಇರಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಆಟದ ಹಕ್ಕನ್ನು ಮಕ್ಕಳು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜತೆಗೆ ಮಕ್ಕಳಿಗೆ ಸಂರಕ್ಷಣೆ ಸಿಗುವಂತಾಗಬೇಕು. ಅವಕಾಶಗಳ ಸದ್ಬಳಕೆಯನ್ನು ಮಕ್ಕಳು ತಪ್ಪದೇ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸರಸ್ವತಿ ಎನ್.ಎಂ., ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಮಾತನಾಡಿದರು.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯಧಿಕಾರಿ ಡಾ.ಅಲಿಂ ಪಾಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಎಂ., ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ದಿಲೀಪ್‌ ಕುಮಾರ್‌, ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಮೈಸೂರು ಹಿರಿಯ ರಂಗ ನಿರ್ದೇಶಕಿ ಸುಮತಿ ಹಾಗೂ ರಬ್ಬಿ ಆಟಗಾತಿ ಮಲ್ಲಯ್ಯನಪುರದ ದೀಪ್ತಿ ಆರ್‌., ಖೋ ಖೋ ಆಟಗಾರ್ತಿ ವಿನುತಾ ಎಸ್‌. ಇದ್ದರು.

ಯುವಕ, ಯುವತಿಯರು ಹಗ್ಗಜಗ್ಗಾಟ, ಸ್ಫೋ ಸೈಕಲಿಂಗ್, ೨೦೦ ಮೀಟರ್ ಓಟ, ಯುವತಿಯರಿಗೆ-ಪಿರಮಿಡ್, ಯುವಕರಿಗೆ-ರಂಗೋಲಿ, ಜಾನಪದ ನೃತ್ಯಗಳು ಮತ್ತು ಲಿಂಗ ತಾರತಮ್ಯ ಕುರಿತು ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.