ಎಲ್.ಪಿ. ಪ್ರಕಾಶ್‌ ಗೌಡ ಮಾತನಾಡಿ, ರಾಜಕೀಯ ಭವಿಷ್ಯಕ್ಕೆ ಮುಂದಾಗಿರುವ ಸುರಾಗ್‌ಮೂರ್ತಿ ತನ್ನನ್ನು ರೂಪಿಸಿಕೊಳ್ಳಲು ಯುವ ಕಾಂಗ್ರೆಸ್ ಅತ್ಯುತ್ತಮ ವೇದಿಕೆ. ಅವರ ತಂದೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ನಾನು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದೇವೆ. ಯುವ ಕಾಂಗ್ರೆಸ್‌ನಲ್ಲಿ ಸಕ್ರೀಯವಾಗಿ ತೊಡಗಿ ಪಕ್ಷದ ಕೆಲಸ ಮಾಡಿದ್ದಲ್ಲಿ ಮುಂದೆ ಉತ್ತಮ ಭವಿಷ್ಯವಿರುತ್ತದೆ ಎಂಬುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಲ್ಲಾ ಮಂತ್ರಿ ಕೃಷ್ಣಬೈರೇಗೌಡರೇ ಸಾಕ್ಷಿಯಾಗಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಚನ್ನರಾಯಪಟ್ಟಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ. ಸುರಾಗ್ ಮೂರ್ತಿಯ ೨೭ನೇ ವರ್ಷದ ಹುಟ್ಟಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಅವರ ಸ್ನೇಹಿತರು ಸೇರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಅರ್ಥಪೂರ್ಣ ಆಚರಣೆ ಕೈಗೊಂಡರು.

ಯೂತ್ ಕಾಂಗ್ರೆಸ್‌ನ ಚನ್ನರಾಯಪಟ್ಟಣ ಬ್ಲಾಕ್ ಅಧ್ಯಕ್ಷ ಜಿ.ಎಂ. ಸುರಾಗ್ ಮೂರ್ತಿಗೆ ೨೭ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಆಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕೆಂಬ ಸ್ನೇಹಿತರ ಆಶಯದಂತೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮತ್ತು ಆಸ್ಪತ್ರೆ ಆವರಣದಲ್ಲೆ ಕೇಕ್ ಕತ್ತರಿಸಿ ಸುರಾಗ್‌ಮೂರ್ತಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ರಾಜಕೀಯಕ್ಕೆ ಪಾದಾರ್ಪಣೆ ನಂತರ ಸುರಾಗ್‌ಮೂರ್ತಿಯ ಹುಟ್ಟಹಬ್ಬವನ್ನು ಅವರ ತಂದೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿ. ಆರ್‌. ಮೂರ್ತಿಯವರು ಸಮಾಜಮುಖಿಯಾಗಿ ಆಚರಿಸುತ್ತಾ ಬಂದಿದ್ದಾರೆ. ಕಳೆದ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ಪಟ್ಟಣದ ನೂರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಹೊಸ ಉಡುಗೆ ನೀಡಿ, ಪಡಿತರ ಕಿಟ್ ವಿತರಣೆ ಮಾಡಲಾಗಿತ್ತು. ಪ್ರಸಕ್ತ ವರ್ಷದ ಆಚರಣೆಯಲ್ಲಿ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ನೋಟ್‌ಬುಕ್, ಬ್ಯಾಗ್, ಸೇರಿ ಕಲಿಕಾ ಸಾಮಗ್ರಿಗಳ ವಿತರಣೆ, ಹಾಗೂ ಎಲ್ಲ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಮಧ್ಯಾಹ್ನದ ಹಬ್ಬದೂಟ ಏರ್ಪಡಿಸಿ ತಮ್ಮ ಮಗನ ಹುಟ್ಟುಹಬ್ಬದ ಆಚರಣೆಗೆ ವಿಶೇಷ ಅರ್ಥ ನೀಡಿದರು.ಈ ವೇಳೆ ಸುರಾಗ್‌ಮೂರ್ತಿಗೆ ಶುಭಕೋರಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್‌ ಗೌಡ ಮಾತನಾಡಿ, ರಾಜಕೀಯ ಭವಿಷ್ಯಕ್ಕೆ ಮುಂದಾಗಿರುವ ಸುರಾಗ್‌ಮೂರ್ತಿ ತನ್ನನ್ನು ರೂಪಿಸಿಕೊಳ್ಳಲು ಯುವ ಕಾಂಗ್ರೆಸ್ ಅತ್ಯುತ್ತಮ ವೇದಿಕೆ. ಅವರ ತಂದೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ನಾನು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದೀಗ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದೇವೆ. ಯುವ ಕಾಂಗ್ರೆಸ್‌ನಲ್ಲಿ ಸಕ್ರೀಯವಾಗಿ ತೊಡಗಿ ಪಕ್ಷದ ಕೆಲಸ ಮಾಡಿದ್ದಲ್ಲಿ ಮುಂದೆ ಉತ್ತಮ ಭವಿಷ್ಯವಿರುತ್ತದೆ ಎಂಬುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಲ್ಲಾ ಮಂತ್ರಿ ಕೃಷ್ಣಬೈರೇಗೌಡರೇ ಸಾಕ್ಷಿಯಾಗಿದ್ದಾರೆ ಎಂದರು. ಮುಖಂಡ ಅಣತಿ ಆನಂದ್ ಕುಮಾರ್‌ ಯುವರಾಜಕಾರಣಿ ಸುರಾಗ್‌ಮೂರ್ತಿಗೆ ಶುಭಾಶಯ ಕೋರಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.

ಈ ವೇಳೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್‌. ಮೂರ್ತಿ, ರಕ್ಷಾ ಸಮಿತಿ ಸದಸ್ಯ ಮೋಹನ್, ಹಿರಿಸಾವೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ, ಸಾತೇನಹಳ್ಳಿ ಬಾಲು, ಮಧುಸೂದನ್, ಕೆಡಿಪಿ ಸದಸ್ಯ ಬ್ಯಾಡರಹಳ್ಳಿ ಯೋಗೀಶ್, ಗುರುಪ್ರಸಾದ್, ಕಬ್ಬಾಳು ಮಹೇಶ್, ಮುಖಂಡರಾದ ಹೊನ್ನಶೆಟ್ಟಿಹಳ್ಳಿ ರವಿ, ಅರಾಳಪುರ ನಾಗೇಶ್, ಪ್ರವೀಣ್, ಬಾಲಕೃಷ್ಣ, ತಮ್ಮಯ್ಯಣ್ಣ, ಪ್ರೇಮ್ ಕುಮಾರ್, ರವಿ, ಹಿರಿಸಾವೆ ಬಾಬು, ಜಬೀವುಲ್ಲಾ ಬೇಗ್, ಸುಧಾಕರ್, ಜನಾರ್ಧನ್, ಗನ್ನಿ ಗಿರೀಶ್, ರಮೇಶ್, ಕೆಂಪೇಗೌಡ, ರವೀಶ್, ಪ್ರಕಾಶ್ ಸೇರಿ ಇತರರು ಇದ್ದರು.