ಸಾರಾಂಶ
ಹಾವೇರಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಪದವೀಧರರ ಹಿತರಕ್ಷಣೆ ವೇದಿಕೆ ವತಿಯಿಂದ ಮೊಂಬತ್ತಿ ಬೆಳಗಿ ಸಂತಾಪ ಸೂಚಿಸಲಾಯಿತು.ಈ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ್‌ಕುಮಾರ ಲಮಾಣಿ ಮಾತನಾಡಿ, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯಿಂದ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ದೇಶ ಈ ಸಾವಿಗೆ ಕಂಬನಿ ಮಿಡಿಯುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಂದಾಗಿದೆ. ಅವರಿಗೆ ಪರಿಹಾರವನ್ನು ಕೊಟ್ಟು ಕುಟುಂಬಗಳಿಗೆ ಸಾಂತ್ವನವನ್ನು ಕೇಂದ್ರ ಸರ್ಕಾರವು ಹೇಳಬೇಕಿದೆ ಎಂದರು.ಪದವೀಧರ ಹಿತರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ರಾಘವೇಂದ್ರ ಬಾಸೂರ ಮಾತನಾಡಿ, ಇದು ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಹಾಗೂ ಉಗ್ರಗಾಮಿಗಳನ್ನು ಕಂಡಲ್ಲಿ ಗುಂಡು ಹಾಕಿ ಕೊಲ್ಲಬೇಕು ಎಂದರು.ಈ ವೇಳೆ ಶಂಕರ ಮೆಹರವಾಡೆ, ತಾರಕೇಶ್ ಮಠದ, ಗದಿಗೆಪ್ಪ ನೆಲೊಗಲ್ಲ, ನಾಗರಾಜ ಬಡಮ್ಮನವರ, ಜಮೀರ ಚಿಗರಿ, ಸಿದ್ದು ಪುರದ, ಸುಭಾನಿ ನದಾಫ, ನಂದಕ್ಕ, ಶಾದಿಕ್ ಮಹಮ್ಮದ್ ಯಾದವಾಡ, ನವಿದ್ ವರ್ದಿ, ಜಹೀರ್ ಚೂಪದಾರ್, ಮುತ್ತು ಕೊರವರ ಮತ್ತಿತರರು ಇದ್ದರು.ಕಾಶ್ಮೀರ ದಾಳಿ ಖಂಡಿಸಿ ಪ್ರತಿಭಟನೆ
ಹಾನಗಲ್ಲ: ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಪೈಶಾಚಿಕ ಹತ್ಯಾಕಾಂಡ ಹಾಗೂ ಕರ್ನಾಟಕದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ತೆಗೆಸಿ, ಕತ್ತರಿಸಿರುವ ಘಟನೆಗಳನ್ನು ಖಂಡಿಸಿ ತಾಲೂಕಿನ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕ ಪ್ರತಿಭಟನಾ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿತು.ಗುರುವಾರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೆ.ಎಲ್. ದೇಶಪಾಂಡೆ ಅವರು, ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಲವೆಡೆ ಬ್ರಾಹ್ಮಣ ಸಮುದಾಯದ ಧಾರ್ಮಿಕ ಸಂಕೇತವಾದ ಜನಿವಾರವನ್ನು ಕತ್ತರಿಸಿ ಅಪಚಾರ ಮಾಡಿರುವುದು ಇಡೀ ಬ್ರಾಹ್ಮಣ ಸಮುದಾಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಹುನ್ನಾರವನ್ನು ಖಂಡಿಸುತ್ತೇವೆ. ಈ ಪೈಶಾಚಿಕ ಕೃತ್ಯಗಳು ಹಿಂದೂಗಳ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ಆಕ್ರಮಣಗಳಾಗಿವೆ. ಇಂಥ ಘಟನೆಗಳ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಸರ್ಕಾರಗಳು ಇಂಥ ಕೃತ್ಯ ಎಸಗುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಉಗ್ರಗಾಮಿಗಳನ್ನು ಮಟ್ಟ ಹಾಕುವಲ್ಲಿ ಹಿಂದೆ ಸರಿಯಬಾರದು. ಒಂದು ದೇಶ ಒಂದೇ ನೀತಿ, ಎಲ್ಲರೂ ಸಮಾನರು ಎಂಬ ನಿಯಮ ಅನ್ವಯವಾಗಬೇಕು ಎಂದರು.ತಾಲೂಕು ಅಧ್ಯಕ್ಷ ರವಿಚಂದ್ರ ಪುರೋಹಿತ ಮಾತನಾಡಿ, ಇಂಥ ಅಸಂಬದ್ಧ ಕೃತ್ಯಗಳನ್ನು ಖಂಡಿಸುವುದಲ್ಲದೇ ಇವುಗಳನ್ನು ಹತ್ತಿಕ್ಕಲು ಎಲ್ಲ ಹೋರಾಟಕ್ಕೂ ಸಿದ್ಧ. ಸರ್ಕಾರಗಳು ಇಂಥ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.ಪಟ್ಟಣದ ಶಂಕರ ಮಠದಿಂದ ತಹಸೀಲ್ದಾರ್ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಶಂಕರಭಟ್ ಜೋಶಿ, ಘನಶ್ಯಾಮ ದೇಶಪಾಂಡೆ, ಎಂ.ಎಲ್. ಕಾಮನಹಳ್ಳಿ, ರವೀಂದ್ರ ದೇಶಪಾಂಡೆ, ಗಿರೀಶ ದೇಶಪಾಂಡೆ, ಶ್ರೀನಿವಾಸ ಶಿವಪೂಜಿ, ರವಿ ಪೊತದಾರ, ಆರ್.ಸಿ. ದೇಸಾಯಿ, ಕೃಷ್ಣಾ ಪೂಜಾರ, ಪ್ರಮೋದ ದೇಶಪಾಂಡೆ, ಎಂ.ಆರ್. ಹೆಗಡೆ, ದತ್ತಾತ್ರೆಯ ಇನಾಂದಾರ, ಟಿ.ಆರ್. ವೇದಂಭಟ್‌ನವರ, ಎಲ್.ಎಂ. ದೇಸಾಯಿ, ವಾರುಣಿ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಶಿಲ್ಪಾ ಕರಗುದರಿ, ಮಾಧುರಿ ಕಾಮನಹಳ್ಳಿ, ಪಾರ್ವತಿಬಾಯಿ ಕಾಶೀಕರ, ಸುಧಾಬಾಯಿ ದೇಶಪಾಂಡೆ, ವಿಜಯಲಕ್ಷ್ಮಿ ಜೋಶಿ, ಸುರೇಖಾ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.