ಈತ ತನ್ನ ಸ್ನೇಹಿತನ ಮದುವೆ ಹಿನ್ನೆಲೆ ತುಮಕೂರಿಗೆ ಹೋಗಿ ಮದುವೆ ಮುಗಿಸಿಕೊಂಡು ಬೈಕ್ ನಲ್ಲಿ ಸ್ನೇಹಿತನೊಂದಿಗೆ ವಾಪಸ್ ಬರುವಾಗ ಅಂಚೆಮನೆ ಸಮೀಪ ರಸ್ತೆ ಕಿತ್ತುಹೋಗಿರುವ ಪರಿಣಾಮ ಬೈಕ್ ಸ್ಕಿಡ್ ಆಗಿದ್ದು, ಬೈಕ್ ನಿಂದ ರಸ್ತೆಗೆ ಬಿದ್ದಿದ್ದಾರೆ.

ದಾಬಸ್‍ಪೇಟೆ: ಬೈಕ್ ಚಲಾಯಿಸುವಾಗ ಸ್ಕಿಡ್ ಆಗಿ ಬಿದ್ದು ಲಾರಿ ಚಕ್ರದಡಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ- 48ರ ಸೋಂಪುರ ಹೋಬಳಿಯ ಅಂಚೆಮನೆ ಸಮೀಪ ನಡೆದಿದೆ.ನೆಲಮಂಗಲ ತಾಲೂಕಿನ ಮದಲಕೋಟೆ ಗ್ರಾಮದ ಮಧುಸೂದನ್ (28) ಮೃತಪಟ್ಟ ದುರ್ದೈವಿಯಾಗಿದ್ದು, ಈತ ತನ್ನ ಸ್ನೇಹಿತನ ಮದುವೆ ಹಿನ್ನೆಲೆ ತುಮಕೂರಿಗೆ ಹೋಗಿ ಮದುವೆ ಮುಗಿಸಿಕೊಂಡು ಬೈಕ್ ನಲ್ಲಿ ಸ್ನೇಹಿತನೊಂದಿಗೆ ವಾಪಸ್ ಬರುವಾಗ ಅಂಚೆಮನೆ ಸಮೀಪ ರಸ್ತೆ ಕಿತ್ತುಹೋಗಿರುವ ಪರಿಣಾಮ ಬೈಕ್ ಸ್ಕಿಡ್ ಆಗಿದ್ದು, ಬೈಕ್ ನಿಂದ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಪರಿಣಾಮ ಲಾರಿಯೂ ಈತನ ದೇಹದ ಮೇಲೆ ಹರಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ಮಾಹಿತಿ ತಿಳಿದ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.