ಸಾರಾಂಶ
ಭಟ್ಕಳ: ನಮ್ಮ ಯುವಕರು ಭವಿಷ್ಯವನ್ನು ಬದಲಿಸುವ ಶಕ್ತಿಯುಳ್ಳವರಾಗಿದ್ದಾರೆ ಎಂದು ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಇಂಜಿನಿಯರ್ ನಝೀರ್ ಅಹ್ಮದ್ ಖಾಝಿ ತಿಳಿಸಿದರು.
ಹೆಬಳೆಯ ನ್ಯೂ ಶಮ್ಸ್ ಶಾಲೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಹಿಂದೆ ಏನನ್ನು ಮಾಡಿದ್ದೇವೆ ಎನ್ನುವುದಕ್ಕಿಂತ, ಭವಿಷ್ಯದಲ್ಲಿ ಏನನ್ನು ಸಾಧಿಸಲಿದ್ದೇವೆ ಎನ್ನುವುದು ಮುಖ್ಯ. ನಮ್ಮ ವಿದ್ಯಾರ್ಥಿಗಳ ಪ್ರತಿಭೆ ಭರವಸೆಯ ಚಿಹ್ನೆಯಾಗಿದ್ದು, ಅವರು ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಕಾಯುತ್ತಿದೆ. ಭವಿಷ್ಯದ ಬಗ್ಗೆ ಚಿಂತೆ ಬಿಡಿ ಎಂದರು.ಮರ್ಕಝ್ ಅನ್ನವಾಯತ್ ಅಬುಧಾಬಿ ಸಂಸ್ಥೆಯ ಅಧ್ಯಕ್ಷ ಅಶ್ರಫ್ ಅಲಿ ಮುಸ್ಬಾ ಮಾತನಾಡಿ, ಯಶಸ್ವಿ ವ್ಯಕ್ತಿಗಳ ಜೀವನ ಅಧ್ಯಯನ ನಮ್ಮ ಜೀವನದ ಮಾರ್ಗದರ್ಶನವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿ ನಿರ್ಧರಿಸಿ, ಅದನ್ನು ಸಾಧಿಸಲು ಪ್ರಯತ್ನಶೀಲರಾಗಬೇಕು ಎಂದರು.
ದುಬೈ ಇಸ್ಲಾಮಿಕ್ ಫೌಂಡೇಷನ್ ಜೆಮ್ಸ್ ಮಾರ್ಡನ್ ಅಕಾಡೆಮಿಯ ಮುಖ್ಯಸ್ಥ ಮೀರಾ ಫೌಝಾನ್ ಮಾತನಾಡಿದರು. ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಸದಸ್ಯರಾದ ಸೈಯ್ಯದ್ ಶಕೀಲ್ ಎಸ್.ಎಂ., ಕಾದಿರ್ ಮೀರಾ ಪಟೇಲ್, ಸಲಾಹುದ್ದೀನ್ ಎಸ್.ಕೆ., ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್, ಮೌಲಾನ ಝಿಯಾವುರ್ರಹ್ಮಾನ್ ರುಕ್ನುದ್ದೀನ್ ಮತ್ತಿತರರು ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ಲಿಯಾಖತ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ಲಾ ರುಕ್ನುದ್ದೀನ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆಹ್ಮದ್ ದಾಮ್ದಾ ಮತ್ತು ಮುಯಿಝ್ ನಿರೂಪಿಸಿದರು. ಯಲ್ಲಾಪುರದಲ್ಲಿ ಲೋಕ ಸ್ವರಾಜ್ ಪಾದಯಾತ್ರೆಗೆ ಸ್ವಾಗತಯಲ್ಲಾಪುರ: ರಾಜ್ಯದ ಹಲವು ಜಿಲ್ಲೆಗಳ ಮೂಲಕ ಸಾಗುತ್ತಿರುವ ಲೋಕ ಸ್ವರಾಜ್ ಪಾದಯಾತ್ರೆ ಪಟ್ಟಣಕ್ಕೆ ಜ. ೨ರಂದು ಆಗಮಿಸಿದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ವಿ.ಎಸ್. ಭಟ್ಟ, ಡಿ.ಎನ್. ಗಾಂವ್ಕರ್, ತಾಲೂಕು ೫ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ನೇತ್ರೇಕರ್, ಎನ್.ಎನ್. ಹೆಬ್ಬಾರ್, ವಿ.ಜಿ. ಭಾಗ್ವತ್, ಎಸ್.ಎಂ. ಜಾಲಿಸತ್ಗಿ, ನಂದನ್ ಬಾಳಗಿ, ಶ್ರೀಪತಿ ಭಟ್ಟ, ಶಕೀಲ ಶೇಖ್, ಬಸ್ತ್ಯಾಂವ್ ಸಿದ್ದಿ, ಎಂ.ಡಿ. ಗೌಸ್ ಮುಂತಾದವರು ಉಪಸ್ಥಿತರಿದ್ದರು.