ಸಾರಾಂಶ
ಹಿರಿಯ ಸಾಹಿತಿ ಡಾ. ಸಿಪಿಕೆ ಶ್ಲಾಘನೆರಾಷ್ಟ್ರೀಯ ಯುವದಿನ ಆಚರಣೆ ಅಂಗವಾಗಿ ಆರ್. ನಿಶ್ಚಲ್ ಗೆ ಅಭಿನಂದನೆ
ಹಿರಿಯ ಸಾಹಿತಿ ಡಾ. ಸಿಪಿಕೆ ಶ್ಲಾಘನೆ ರಾಷ್ಟ್ರೀಯ ಯುವದಿನ ಆಚರಣೆ ಅಂಗವಾಗಿ ಆರ್. ನಿಶ್ಚಲ್ ಗೆ ಅಭಿನಂದನೆ------
ಕನ್ನಡಪ್ರಭ ವಾರ್ತೆ ಮೈಸೂರುಗಂಗೋತ್ರಿ ನಿವಾಸಿ ರಮೇಶ್ ಅವರ ಪುತ್ರ ವಿಜಯವಿಠ್ಠಲ ಶಾಲಾ ವಿದ್ಯಾರ್ಥಿ ಆರ್. ನಿಶ್ಚಲ್ ಬಿಹಾರದ ಪಾಟ್ನಾದಲ್ಲಿ ಜ. 16 ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮೈಸೂರಿನ ಪ್ರತಿಭೆಗೆ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಹಿರಿಯ ಸಾಹಿತಿ ಡಾ. ಸಿಪಿಕೆ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಹಿರಿಯ ಸಾಹಿತಿ ಡಾ. ಸಿಪಿಕೆ ಮಾತನಾಡಿ, ಯುವ ಸಮೂಹ ರಾಷ್ಟ್ರವನ್ನು ಬದಲಿಸುವ ಶಕ್ತಿಯುಳ್ಳವರು ಎಂಬುದನ್ನು ಘಟಿಸಿದ ಹಲವು ಘಟನೆಗಳು ಸಾಕ್ಷಿ ಸಮೇತ ತೋರಿಸಿಕೊಟ್ಟಿವೆ, ಹಾಗಾಗಿ ಯುವಕರು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತಮ್ಮ ತನವನ್ನು ಸಾಬೀತು ಪಡಿಸಬೇಕಿದೆ, ಆಯ್ಕೆಯ ಕ್ಷೇತ್ರಗಳು ವಿಭಿನ್ನ ಇರಬಹುದು, ಆದರೆ ಅಂತಿಮ ಗುರಿ ವಿಜಯದ ಕಡೆಗಿರಬೇಕು, ಆ ಮೂಲಕ ಯುವ ಸಮುದಾಯ ಸಾಧಾಕರಾಗಬೇಕು ಎಂದರು,ಹಲವು ವ್ಯಸನಗಳು ಆಯ್ಕೆಯನ್ನು ಕೆಲ ಮಾಧ್ಯಮಗಳು ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿವೆ, ಅಂತಹ ಅನವಶ್ಯಕ ನಡೆಗಳ ಕಡೆಗೆ ಯುವ ಸಮೂಹ ಮನಸ್ಸು ಕೊಡಬಾರದು ಅದೊಂದು ಹಾಲುಣಿಸುವ ಪೂತನಿಯಂತೆ ಎಂದು ಅರಿಯುವ ವೇಳೆಗೆ ಸಮಯ ಹಾಗೂ ವಯಸ್ಸು ಜಾರಿರುತ್ತದೆ ಎಂದು ಯುವ ಸಮುದಾಯಕ್ಕೆ ಕರೆ ಕೊಟ್ಟರು.
ಪತ್ರಕರ್ತ ವಿತರಕರ ಸಂಘದ ಕಾರ್ಯದರ್ಶಿ ಎ. ರವಿ, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಕುಮಾರ್ ಗೌಡ ಇದ್ದರು.