ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಮೊಬೈಲ್, ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಹೊರ ಬಂದು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಶೀಳನೆರೆ ಗ್ರಾಮ ಇತಿಹಾಸ ಹೊಂದಿದ್ದು, ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆರೋಗ್ಯವಂತ ಸಮಾಜ ನಿರ್ಮಾಣ, ದೈಹಿಕ, ಮಾನಸಿಕ ನೆಮ್ಮದಿಗೆ ಯುವಕರಿಗೆ ಕ್ರೀಡೆ ಅವಶ್ಯಕ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ತಾಲೂಕಿನ ಶೀಳನೆರೆ ಗ್ರಾಮದ ಶ್ರೀಸ್ನೇಹಜೀವಿ ಗೆಳೆಯ ಬಳಗದಿಂದ ನಾಡ ಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಗ್ರಾಮದ ಕಾಲೇಜು ಮೈದಾನದಲ್ಲಿ ಜಿಲ್ಲಾ ಮಟ್ಟದ ಶೀಳನೆರೆ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್)-1 ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಬೇಕು. ದೇಹದ ಸದೃಢತೆಗೆ ಕ್ರೀಡೆ ಅತ್ಯಂತ ಸಹಕಾರಿ ಎಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಮೊಬೈಲ್, ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಹೊರ ಬಂದು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಶೀಳನೆರೆ ಗ್ರಾಮ ಇತಿಹಾಸ ಹೊಂದಿದ್ದು, ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ, ಕ್ರೀಡೆ ಜಾತಿ, ಮತ, ಭೇದ ಇಲ್ಲದ ಒಂದು ಉತ್ತಮ ವೇದಿಕೆ. ಕ್ರೀಡೆಯಲ್ಲಿ ಎಲ್ಲರೂ ಒಂದೇ. ಕ್ರೀಡೆಯಿಂದ ಸಹೋದರತೆ, ಸ್ನೇಹ ಭಾವನೆ ಬೆಳೆಯುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳಿಂದ ಅನೇಕ ಪ್ರತಿಭೆಗಳು ಹೊರಬರುತ್ತವೆ. ಆನ್‌ಲೈನ್ ಬೆಟ್ಟಿಂಗ್, ಐಪಿಎಲ್ ಬೆಟ್ಟಿಂಗ್‌ನಿಂದ ಯುವಕರು ಹೊರ ಬಂದು ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಮಾತ್ರ ಆಡಬೇಕು ಎಂದುಸಲಹೆ ನೀಡಿದರು.ಈ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್, ಯುವ ಮುಖಂಡರಾದ ಅಶ್ವಥ್, ಮಾಜಿ ಪ್ರಕಾಶ್, ಸರ್ವೇ ಮಂಜು, ಕ್ರೀಡಾ ಆಯೋಜಕರಾದ ಅಜಯ್, ಸದಾನಂದ, ಹುಣಸನಹಳ್ಳಿ ರಮೇಶ್, ಎಸ್‌ಪಿಎಲ್ ಕ್ರೀಡಾ ಯುವಕರು ಸೇರಿದಂತೆ ಕ್ರೀಡಾಪಟುಗಳಿದ್ದರು.