ಸಾರಾಂಶ
ದಿಲ್ಲಿಯಲ್ಲಿ ನಡೆದ ದೇಶದ ಪ್ರತಿಷ್ಠಿತ ಮ್ಯಾರಾಥಾನ್‌ಗಳಲ್ಲಿ ಒಂದಾದ ವೇದಾಂತ ದೆಹಲಿ ಹಾಪ್ ಮ್ಯಾರಾಥಾನ್‌ದಲ್ಲಿ ಐಗಳಿ ಗ್ರಾಮದ ನಿರಂಜನ ಪಾಟೀಲ, ರುದ್ರಗೌಡ ಪಾಟೀಲ ಹಾಗೂ ರಾಜಶೇಖರ ಔರಸಂಗ ಕಾರ್ಯಕ್ರಮದಲ್ಲಿ ಓಟದ ಸ್ಪರ್ಧೆ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಐಗಳಿ
ದಿಲ್ಲಿಯಲ್ಲಿ ನಡೆದ ದೇಶದ ಪ್ರತಿಷ್ಠಿತ ಮ್ಯಾರಾಥಾನ್‌ಗಳಲ್ಲಿ ಒಂದಾದ ವೇದಾಂತ ದೆಹಲಿ ಹಾಪ್ ಮ್ಯಾರಾಥಾನ್‌ದಲ್ಲಿ ಐಗಳಿ ಗ್ರಾಮದ ನಿರಂಜನ ಪಾಟೀಲ, ರುದ್ರಗೌಡ ಪಾಟೀಲ ಹಾಗೂ ರಾಜಶೇಖರ ಔರಸಂಗ ಕಾರ್ಯಕ್ರಮದಲ್ಲಿ ಓಟದ ಸ್ಪರ್ಧೆ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ಮಾತನಾಡಿ, ಗ್ರಾಮದ ಯುವಕರಲ್ಲಿ ಉತ್ಸಾಹ ಸತತ ಪ್ರಯತ್ನ ಗುರಿ ಮುಟ್ಟುವ ಆಸೆ ಪ್ರಾಮಾಣಿಕತೆಯಿಂದ ಎಲ್ಲ ಕಡೆ ಭಾಗವಹಿಸಿ ತಂದೆ, ತಾಯಿ ಗುರು, ಹಿರಿಯರಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೆ ಗ್ರಾಮದ ಪರ ಅಭಿನಂದಿಸುತ್ತೇನೆ ಎಂದರು.
ವಿಜಯಪುರದಿಂದ ಮಲಗೊಂಡ, ಸಂಕೇತ ಬಗಲಿ, ವಿರೇಂದ್ರ ಗುಚಟ್ಟಿ, ಸಂದೀಪ ಸಹ ಭಾಗಿಯಾಗಿದ್ದರು. ಇದರಲ್ಲಿ 36,000 ಜನಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು. ಅಲ್ಲದೇ 17 ದೇಶಗಳಿಂದ ಜನಗಳು ಭಾಗಿಯಾಗಿದ್ದರು. ಡಿ.22 ರಂದು ವಿಜಪುರದಲ್ಲಿ ವೃಕ್ಷಾಥಾನ್ ಹೆರಿಟೇಜ್ ರನ್ ಜರುಗಲಿದೆ. ನಾವೆಲ್ಲರೂ ಸಹ ಹೋಗಲಿದ್ದೇವೆ. ತಾವು ಭಾಗವಹಿಸಿರಿ ಎಂದು ಕೋರಿದರು.