ಯುವಕರು ಸದಾ ಉತ್ಸುಕರಾಗಿ, ಜಾಗೃತರಾಗಿರಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಎಲ್ಲ ರಂಗಗಳಲ್ಲಿ ಸದಾ ಚಟುವಟಿಕೆಯಿಂದಿರಬೇಕು, ಚಿಂತನಶೀಲರಾಗಿರಬೇಕು .
ಕನ್ನಡಪ್ರಭ ವಾರ್ತೆ ರಾವಂದೂರು
ದುಶ್ಚಟಗಳಿಗೆ ಬಲಿಯಾಗಿ ಯುವ ಶಕ್ತಿ ಕುಗ್ಗುತ್ತಿದ್ದು, ವಿದ್ಯಾರ್ಥಿಗಳು ಕಾನೂನು ಬಾಹಿರ ಚಟಗಳನ್ನು ದೂರಮಾಡಿ ಭವ್ಯ ಭಾರತ ಕಟ್ಟುವಂತಹ ಕೆಲಸ ಯುವ ಶಕ್ತಿ ಮಾಡಬೇಕಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ. ನಂಜುಂಡಯ್ಯ ತಿಳಿಸಿದ್ದಾರೆ.ಗ್ರಾಮದ ಶ್ರೀ ಸಿದ್ದಣ್ಣ ಶೆಟ್ಟರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಂಡಿತ ವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್. ಶಿಬಿರದಲ್ಲಿ ಅವರು ಮಾತನಾಡಿದರು.
ಯುವಕರು ಸದಾ ಉತ್ಸುಕರಾಗಿ, ಜಾಗೃತರಾಗಿರಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಎಲ್ಲ ರಂಗಗಳಲ್ಲಿ ಸದಾ ಚಟುವಟಿಕೆಯಿಂದಿರಬೇಕು, ಚಿಂತನಶೀಲರಾಗಿರಬೇಕು ಎಂದರು.ಎನ್.ಎಸ್.ಎಸ್. ಶಿಬಿರದ ಜಿಲ್ಲಾ ನೋಡಲ್ ಅಧಿಕಾರಿ ಎಂ. ಮಹೇಶ್,
ರಾಷ್ಟ್ರೀಯ ಪ್ರಶಸ್ತಿ ವಿಜೇತ ರಮೇಶ್ ಬಾಬು, ಕಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೀರ್ತಿ ಮಾತನಾಡಿದರು.ಶಿಬಿರದ ಎಲ್ಲ ವಿದ್ಯಾರ್ಥಿಗಳಿಗೆ ಕಿತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುಮಿತ್ ಹಾಗೂ ನಿರ್ದೇಶಕ ಕೀರ್ತಿ ಶರ್ಟ್ ಗಳನ್ನ ಉಡುಗೊರೆಯಾಗಿ ನೀಡಿದರು. ಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕ ಲಕ್ಷ್ಮಿಕಾಂತ್, ಶಿಬಿರ ಅಧಿಕಾರಿ ಸುಭಾಷ್ ಪ್ರೌಢಶಾಲಾ ಶಿಕ್ಷಕರಾದ ಭಾಗ್ಯ, ಪದ್ಮಶ್ರೀ, ವೆಂಕಟೇಶ್, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹುಚ್ಚೇಗೌಡ, ರಮೇಶ್ ಇದ್ದರು.