ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇರುವ ಗಣೇಶೋತ್ಸವ ಅರ್ಥಪೂರ್ಣವಾಗಿ ನಡೆಯಬೇಕು. ಗಣೇಶೋತ್ಸವದಲ್ಲಿ ಹಿಂದುಗಳು ಒಂದಾಗಿದ್ದಾರೆ ಎಂಬ ಸಂದೇಶ ಕೊಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಅವರು ನಗರದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶಗಳಲ್ಲಿ ಹಿಂದುಗಳು ಶೇ. ೭೯ರಷ್ಟು ಇದ್ದೇವೆ ಆದರೂ ನಮಗೆ ಮೂರು ಕಾಸಿನ ಬೆಲೆ ಇಲ್ಲ. ಯಾಕೆಂದರೆ ನಾವು ಜಾತಿ ಜಾತಿಗಳಾಗಿ ಒಡೆದು ಹೋಗಿರುವ ಕಾರಣ ನಮಗೆ ಬೆಲೆ ಇಲ್ಲ. ಆದ್ದರಿಂದ ಯುವಕರು ಎಲ್ಲ ಜಾತಿ ವ್ಯವಸ್ಥೆ ತೊಡೆದು ಹಾಕಿ ಒಂದಾಗಿ ಎಂದರು. ಅರಿಶಿನ ಕುಂಕುಮ ವಿರೋಧಿಸುವ ಮಹಿಳೆಯಿಂದ ನಮ್ಮ ದಸರಾ ಉದ್ಘಾಟನೆಯಾಗುತ್ತಿದೆ. ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಡಿಜೆ ಹಳ್ಳಿ ಕೆ ಜಿ ಹಳ್ಳಿ ಕೇಸ್ ವಾಪಸ್ಸು ತೆಗೆದುಕೊಂಡರು. ಈಗ ನಮ್ಮ ಹಿಂದು ನಂಬಿಕೆಯಾದ ಭುವನೇಶ್ವರಿ ತಾಯಿಯನ್ನು ವಿರೋಧಿಸುವ ಅರಿಶಿನ ಕುಂಕುಮ ವಿರೋಧಿಸುವ ಮಹಿಳೆಯ ಕೈಯಲ್ಲಿ ದಸರಾ ಉದ್ಘಾಟಿಸುತ್ತಿದ್ದಾರೆ. ವಕ್ಫ್ ಕಾಯ್ದೆ ಹೆಸರಿನಲ್ಲಿ ನಮ್ಮ ರೈತರ ಭೂಮಿ ಕಬಳಿಸುವ ಕೆಲಸವಾಗುತ್ತಿದೆ. ಆದ್ದರಿಂದ ಎಲ್ಲಾ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಹಿಂದೂ ಮಹಾಗಣಪತಿ ಶೋಭಾಯಾತ್ರೆಯು ಅದ್ಧೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ, ಮಾಜಿ ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ನಗರಸಭಾ ಅಧ್ಯಕ್ಷ ಅಂಜಿನಪ್ಪ, ಮುಖಂಡರಾದ ಲಿಂಗದಹಳ್ಳಿ ಸುಧಾಕರ್ ಗೌಡ, ನಗರಸಭಾ ಸದಸ್ಯರಾದ ಉಮಾ ವಿಜಯರಾಜ್, ಮುಖಂಡರಾದ ಆರ್.ರಾಘವೇಂದ್ರ, ಮಣಿಕಂಠ, ಅಂಜನ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.