ಕೃಷಿ ನಮ್ಮ ಬದುಕಿನ ಹಾದಿಯಲ್ಲ. ಅದನ್ನು ಕೈಗಾರಿಕಾ ಕ್ಷೇತ್ರವನ್ನಾಗಿ ಮಾರ್ಪಡಿಸಬೇಕಿದೆ. ನಾವು 2047ಕ್ಕೆ ಕೃಷಿ ಕ್ಷೇತ್ರವನ್ನು ಯಾವ ಮಟ್ಟಿಗೆ ಕೊಂಡೊಯ್ಯಬೇಕೆಂಬುದರ ಬಗ್ಗೆ ರೂಪರೇಷೆ ಸಿದ್ಧಪಡಿಸಿಕೊಳ್ಳಬೇಕಿದೆ.
ಹುಬ್ಬಳ್ಳಿ:
ಯುವಜನಾಂಗ ಐಟಿ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಇದು ಬದಲಾಗುವ ಮೂಲಕ ಕೃಷಿ ಕ್ಷೇತ್ರದಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಹೊಸ ಆವಿಷ್ಕಾರದತ್ತ ಮುಂದಾಗಬೇಕಿದೆ ಎಂದು ಧಾರವಾಡ ಕೃಷಿ ವಿವಿ (ಯುಎಎಸ್)ದ ಸಂಶೋಧನಾ ನಿರ್ದೇಶಕ ಪ್ರೊ. ಕೃಷ್ಣರಾಜ ಹೇಳಿದರು.ಇಲ್ಲಿನ ದೇಶಪಾಂಡೆ ಸ್ಟಾರ್ಟ್ ಅಪ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಐಸಿಎಆರ್‌ನ ವಿಶ್ರಾಂತ ವಿಜ್ಞಾನಿ ಡಾ. ರವಿಶಂಕರ ರಚಿಸಿದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃಷಿ ನಮ್ಮ ಬದುಕಿನ ಹಾದಿಯಲ್ಲ. ಅದನ್ನು ಕೈಗಾರಿಕಾ ಕ್ಷೇತ್ರವನ್ನಾಗಿ ಮಾರ್ಪಡಿಸಬೇಕಿದೆ. ನಾವು 2047ಕ್ಕೆ ಕೃಷಿ ಕ್ಷೇತ್ರವನ್ನು ಯಾವ ಮಟ್ಟಿಗೆ ಕೊಂಡೊಯ್ಯಬೇಕೆಂಬುದರ ಬಗ್ಗೆ ರೂಪರೇಷೆ ಸಿದ್ಧಪಡಿಸಿಕೊಳ್ಳಬೇಕಿದೆ. ನಮ್ಮದೆಯಾದ ತಂತ್ರಜ್ಞಾನ ಗುಣಮಟ್ಟ ಸುಧಾರಿಸಿಕೊಳ್ಳುವ ಕಾರ್ಯವೂ ನಡೆಯಬೇಕಿದೆ ಎಂದರು.ಪ್ರಗತಿಪರ ರೈತ ಮಂಜುನಾಥ ಎಸ್.ಕೆ. ಮಾತನಾಡಿ, ಸದ್ಯದ ಕೃಷಿಗೆ ಕೂಲಿ ಕಾರ್ಮಿಕರ ಕೊರತೆ ಬಹಳಷ್ಟಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ, ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯ. ಕೃಷಿಯಲ್ಲಿ ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಆಗಬೇಕು. ರೈತರಿಗೆ ಸರಿಯಾದ ತರಬೇತಿ ಸಿಗಬೇಕು ಎಂದು ಹೇಳಿದರು.
ಯುಎಎಸ್ ಕೃಷಿಕ ಎಬಿಐ ಸಿಇಒ ಡಾ. ಶ್ರೀಶೈಲ ಡೊಳ್ಳಿ ಮಾತನಾಡಿ, ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಈಗ ಬೇಡಿಕೆ ಆಧರಿಸಿ ರೈತರಿಗೆ ಮಾಹಿತಿ ನೀಡಬೇಕಿದೆ. ರವಿಶಂಕರ ಅವರ ಕೃತಿಗಳು ಸಂಶೋಧಗೆ ನೆರವಾಗಲಿವೆ ಎಂದರು.ದೇಶಪಾಂಡೆ ಸ್ಟಾರ್ಟ್ ಅಪ್ ಸಿಇಒ ಮನೀಶ ಮಾತನಾಡಿದರು. ಕೃತಿಕಾರ ಡಾ. ರವಿಶಂಕರ, ಅಮೃತ, ಪ್ರಗತಿಪರ ರೈತ ದೊಡ್ಡಮನಿ ಸೇರಿದಂತೆ ಹಲವರಿದ್ದರು.