ಸಾರಾಂಶ
ನೆಲಮಂಗಲ: ದೇಶದ ಅಭಿವೃದ್ಧಿಗೆ ದೇಶಪ್ರೇಮ ಮುಖ್ಯವಾಗಿರ ಬೇಕು, ಸ್ವಾತಂತ್ರ ಪೂರ್ವದಲ್ಲಿದ್ದಹೋರಾಟದ ಕಿಚ್ಚು, ದೇಶಪ್ರೇಮ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲಾ ಯುವಶಕ್ತಿ ರಾಷ್ಟ್ರಾಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ ತಿಳಿಸಿದರು.
ನೆಲಮಂಗಲ: ದೇಶದ ಅಭಿವೃದ್ಧಿಗೆ ದೇಶಪ್ರೇಮ ಮುಖ್ಯವಾಗಿರ ಬೇಕು, ಸ್ವಾತಂತ್ರ ಪೂರ್ವದಲ್ಲಿದ್ದಹೋರಾಟದ ಕಿಚ್ಚು, ದೇಶಪ್ರೇಮ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲಾ ಯುವಶಕ್ತಿ ರಾಷ್ಟ್ರಾಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ ತಿಳಿಸಿದರು.
ವರು ನಡೆದ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ನೆಲಮಂಗಲ ಯೋಜನಾ ಪ್ರಾಧಿಕಾರದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಗೌರವವಂಧನೆ ಸ್ವೀಕರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಪ್ರಮುಖ ವ್ಯಕ್ತಿಗಳ ನಡೆ-ನುಡಿ ಧೈಯೋದ್ದೇಶಗಳನ್ನು ಸಂವಿಧಾನವನ್ನು ಯುವಕರು ಆದರ್ಶವಾಗಿಟ್ಟುಕೊಂಡು ಭವ್ಯ ಭಾರತದ ನಿರ್ಮಾಣಕ್ಕಾಗಿ ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿಯಬೇಕು ಸ್ವಾತಂತ್ರ್ಯ ಹೋರಾಟಗಾರರು ಹಗಲಿರುಳು-ಮಳೆಗಾಳಿಯನ್ನು ಲೆಕ್ಕಿಸದೇ ಬ್ರಿಟಿಷರವಿರುದ್ಧ ಹೋರಾಡಿ ನಮ್ಮನ್ನು ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಬಿಡುಗಡೆ ಮಾಡಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲನೀಡುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.ನಮ್ಮ ದೇಶದ ಅಭಿವೃದ್ಧಿ ಸಹಿಸದ ಕೆಲ ಬಲಾಡ್ಯ ರಾಷ್ಟ್ರಗಳು ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಪ್ರಚೋದನೆ ನೀಡಿ ಹಿಂಸಾಚಾರ ಮಾಡಿಸುತ್ತಿ ರುವುದು ಖಂಡನೀಯ, ದೇಶದ ಪ್ರತೀ ಯೊಬ್ಬ ಪ್ರಜೆಯೂ ನಾಡು,ನುಡಿ ರಕ್ಷಣೆಗಾಗಿ ಫಣತೊಟ್ಟು ಹೋರಾಡ ಬೇಕು ಎಂದು ಕರೆ ನೀಡಿದರು.
ಸದಸ್ಯ ಕಾರ್ಯದರ್ಶಿ ಪಂಡ್ರಿನಾಥ ಜಿ ರೆಡ್ಡಿ ಮಾತನಾಡಿ, ಸಮೃದ್ಧಿ ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಕೊಡುಗೆಯು ಅವಶ್ಯಕವಾಗಿದೆ. ರಾಷ್ಟ್ರಭಕ್ತಿಯನ್ನು ಪ್ರತಿಯೊಬ್ಬರು ರಕ್ತಗತವಾಗಿಸಿ ಕೊಳ್ಳ ಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧರ ಸಾಹಸಗಳನ್ನು ನೆನೆಯುತ್ತಾ ಹಿರಿಯರ ಮಾರ್ಗದರ್ಶನ ಮತ್ತು ಅಧಿಕಾರಿಗಳ ಸಹಕಾರದಿಂದ ಮಾದರಿಯಾಗಿಮಾಡುವುದಾಗಿ ಭರವಸೆ ನೀಡಿದರು.ಸಂದರ್ಭದಲ್ಲಿ ಸದಸ್ಯ ರಂಗಸ್ವಾಮಿ,ಬಿ ಜಿ ವಾಸು ಕೆ.ಎಂ.ಶಿವಕುಮಾರ್, ಸಹಾಯಕ ನಿರ್ದೇಶಕ ಎನ್.ಶಿವನಂಜಪ್ಪ ಅಭಿಯಂತರರಾದ ಪ್ರಜ್ವಲ್,ಚೇತನ್ ಕೆ .ವಿ , ಹಾಗೂ ಸಾರ್ವಜನಿಕರು ಸಿಬ್ಬಂದಿ ವರ್ಗದವರು ಇದ್ದರು.