ಸಾರಾಂಶ
ಮುಂಡರಗಿ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಇಮ್ಮಡಿ ಪುಲಿಕೇಶಿ ಬಾಯ್ಸ್ ಹಮ್ಮಿಕೊಂಡ 6 ಓವರ್ 6 ವಿಕೆಟ್ ಕ್ರಿಕೆಟ್ ಟೂರ್ನಾಮೆಂಟನ್ನು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಉದ್ಘಾಟಿಸಿದರು.
ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನೆ
ಮುಂಡರಗಿ: ಇಂದಿನ ಯುವಕರು ಆಟ, ವ್ಯಾಯಾಮ ಮಾಡುವ ಮೂಲಕ ತಮ್ಮ ದೇಹದ ಸ್ವಸ್ಥ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಹೇಳಿದರು.ಸ್ಥಳೀಯ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಇಮ್ಮಡಿ ಪುಲಿಕೇಶಿ ಬಾಯ್ಸ್ ಹಮ್ಮಿಕೊಂಡ 6 ಓವರ್ 6 ವಿಕೆಟ್ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಕಡಲೆಯಂತೆ ಎನ್ನುವ ಮಾತಿನಂತೆ ಪ್ರತಿಯೊಬ್ಬ ಯುವಕರು ಕ್ರೀಡಾ ಮನೋಭಾವ ಹೊಂದಿರಬೇಕು. ಕ್ರೀಡೆ ವ್ಯಕ್ತಿಯಲ್ಲಿ ಆತ್ಮ ಸ್ಥೈರ್ಯ, ಸಾಹಸ ಹಾಗೂ ಸಾಮರಸ್ಯವನ್ನು ಮೂಡಿಸುತ್ತದೆ ಎಂದರು.ಪುರಸಭೆ ಸದಸ್ಯ ಜ್ಯೋತಿ ನಾಗರಾಜ ಹಾನಗಲ್ ಮಾತನಾಡಿ, ಎಲ್ಲಾ ಯುವಕರು ಕ್ರೀಡಾ ಸ್ಫೂರ್ತಿಯಿಂದ ಆಟ ಆಡಬೇಕು. ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.ಈ ವೇಳೆ ಕೃಷ್ಣ ಗಡಾದ, ಪುಷ್ಪಾವತಿ ಉಕ್ಕಲಿ, ಪರಮೇಶ ನಾಯಕ, ರಾಕೇಶ್ ಹೊಸಮನಿ, ಮನೋಜ್ ವಾಸ್ಟರ್, ಅನಿಲ್ ಹಾದಿಮನಿ, ಆದಿತ್ಯ ಇಟಗಿ, ಪ್ರವೀಣ ಹಾವಿನಳ, ಶಿವಾನಂದ ಜೋಳದ, ಸುದೀಪ ಗಡಾದ, ಜಾಕಿರ್, ವೀರೇಶ್ ಜಂತಲಿ, ಜಗದೇಶ್ ಭಜಂತ್ರಿ, ನಿತೀಶ್ ಉಕ್ಕಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿವಕುಮಾರ ಜಂತ್ಲಿ ನಿರೂಪಿಸಿದರು.