ಸಾರಾಂಶ
ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ನಮಗೆ ಸೈನಿಕರ ಬಲಿದಾನ ಅರ್ಥ ಮಾಡಿಕೊಳ್ಳಬೇಕಿದೆ. ಪಾಕಿಸ್ತಾನದ ಕುತಂತ್ರಕ್ಕೆ ನಮ್ಮ ನೂರಾರು ಸೈನಿಕರ ಬಲಿದಾನವು ಕಾರ್ಗಿಲ್ ಯುದ್ಧದಲ್ಲಿ ನಡೆದು ಹೋಯಿತು. ಆದರೆ, ನಮ್ಮ ಸೈನಿಕರು ಎಲ್ಲಿಯೂ ಎದೆಗುಂದದೆ ಕಾರ್ಗಿಲ್ ಪ್ರದೇಶವನ್ನು ಮತ್ತೆ ನಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿ.
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶ ರಕ್ಷಣೆಗಾಗಿ ಯುವ ಸಮೂಹ ಸೈನ್ಯಕ್ಕೆ ಸೇರ್ಪಡೆಯಾಗುವ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದು ಮಾಜಿ ಸೈನಿಕ ಸುಬೇದಾರ್ ಮೇಜರ್ ಉದಯ್ ಕುಮಾರ್ ಸಲಹೆ ನೀಡಿದರು.ತಾಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ (ಮಂಡ್ಯ ಘಟಕ), ಅನನ್ಯ ಹಾರ್ಟ್ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್(ಅಕ್ಕಮಹಾದೇವಿ ಗೈಡ) ಸಹಯೋಗದಲ್ಲಿ ಸೋಮವಾರ ನಡೆದ ಕಾರ್ಗಿಲ್ ವಿಜಯ್ ದಿವಸ್ ಉದ್ಘಾಟಿಸಿ ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ನಮಗೆ ಸೈನಿಕರ ಬಲಿದಾನ ಅರ್ಥ ಮಾಡಿಕೊಳ್ಳಬೇಕಿದೆ. ಪಾಕಿಸ್ತಾನದ ಕುತಂತ್ರಕ್ಕೆ ನಮ್ಮ ನೂರಾರು ಸೈನಿಕರ ಬಲಿದಾನವು ಕಾರ್ಗಿಲ್ ಯುದ್ಧದಲ್ಲಿ ನಡೆದು ಹೋಯಿತು. ಆದರೆ, ನಮ್ಮ ಸೈನಿಕರು ಎಲ್ಲಿಯೂ ಎದೆಗುಂದದೆ ಕಾರ್ಗಿಲ್ ಪ್ರದೇಶವನ್ನು ಮತ್ತೆ ನಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದೆವು ಎಂದರು.ನಮ್ಮ ಧ್ಯೇಯ ಒಂದೇ ನಮ್ಮ ತಾಯ್ನಾಡಿನ ರಕ್ಷಣೆ ಜವಾಬ್ದಾರಿ. ಯುದ್ಧ ಸಮಯದಲ್ಲಿ ಸರಿ ಸುಮಾರು 18 ತಿಂಗಳ ಕಾಲ ನಾವು ರಜೆಯನ್ನೇ ಪಡೆಯದೇ ಗಡಿ ಕಾಯುತ್ತಿದ್ದೇವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ದೇಶ ಪ್ರೇಮ ಅಂತ ಬಂದಾಗ ನಾವು ಕಾರ್ಗಿಲ್ ವಿಜಯ ದಿವಸವನ್ನು ನಾವು ಮರೆಯಲ್ಲ. ಸೈನಿಕರೆಂದರೆ ನಮಗೆ ಗೌರವ ಭಾವನೆ ಮೂಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕೆ.ಎಂ.ಪವಿತ್ರಾ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಮಾಜಿ ಅಧ್ಯಕ್ಷ ಬಿ.ಕೆ.ಉಮೇಶ್, ಶ್ರೀನಿಧಿ ಸೌಹಾರ್ದ ಸಹಕಾರ ಬ್ಯಾಂಕ್‌ನ ಕಿರಿಯ ಸಹಾಯಕಿ ಎಂ.ಪಿ.ಪೂಜಾ, ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ, ಜಿ ಯುವ ಅಧಿಕಾರಿ ಪಿ.ಅಖಿಲ್, ಕಾರ್ಯಕ್ರಮ ಸಂಯೋಜಕ ಹರ್ಷಾ ಭಾಗವಹಿಸಿದ್ದರು.