ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್ ಪ್ರತಿಯೊಬ್ಬ ಯುವಕರು ಮಾದಕ ವಸ್ತು ಸೇವೆನೆಯಿಂದ ದೂರ ಉಳಿಯುವ ಸಂಕಲ್ಪ ಮಾಡಬೇಕೆಂದು ಔರಾದ ತಹಶೀಲ್ದಾರ ಮಲಶೇಟ್ಟಿ ಚಿದ್ರಿ ಹೇಳಿದರು. ಅವರು ಮಂಗಳವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಹಾಗೂ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಔರಾದ್(ಬಿ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಯುವ ಪೀಳಿಗೆ ದೂಮಪಾನ, ಮಧ್ಯಪಾನದಿಂದ ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದೆ. ಇಂದಿನ ಯುವಕರು ಕುಡಿತ, ಡ್ರಗ್ಸ್, ಗುಟಕಾ ಚಟಗಳಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಶೆಯಲ್ಲಿ ಅಪರಾದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮುದೋಳ (ಬಿ) ವೈದ್ಯಧಿಕಾರಿ ಡಾ. ಅನಿಕುಮಾರ ಗಡ್ಡೆ, ಉಪನ್ಯಾಸ ನೀಡಿ, ದೇಶದಲ್ಲಿ ಪ್ರತಿ ದಿನ ಮದ್ಯಪಾನ ಹಾಗೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ 2500 ಜನ ಸಾವನ್ನ ಪುತ್ತಿದ್ದಾರೆ. ರಾಜ್ಯದಲ್ಲಿ ಕೂಡ ಅನೇಕ ಯುವಜನತೆ ಈ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದರು.
ಔರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, 15 ರಿಂದ 25 ವಯೋಮಾನದ ಇಂದಿನ ಯುವಕರು ಮದ್ಯಸೇವನೆ, ಗುಟ್ಕಾ ಮತ್ತಿತರ ನಶೆ ಏರಿಸುವ ವಸ್ತು ಗಳಿಂದ ದೂರವಿರಬೇಕು. ಪ್ರತಿಯೊಂದು ಮಾದಕವಸ್ತುಗಳು ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದರು ಕೂಡ ಅದನ್ನು ಲೆಕ್ಕಿಸದೆ ದುಶ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನಕ್ಷರಸ್ತರಿಗಿಂತ ಅಕ್ಷರಸ್ಥರೆ ಎಲ್ಲಾ ತಿಳಿದು ಓದಿಕೊಂಡರು ಸಹ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳಿ ಮಾತನಾಡಿ, ಸರ್ಕಾರದಿಂದ ಯುವಜನತೆಗಳಲ್ಲಿ ಜಾಗೃತಿ ಮೂಡಿಸಲು ಮದ್ಯಪಾನ ಸಂಯಮ ಮಂಡಳಿಯವರಿಂದ ಇಂತಹ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮಾಡಿಸಲಾಗುತ್ತಿದೆ ಎಂದರು.ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ನಾಗಭೂಷಣ ಮಠ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಶಿವಶಂಕರ ಟೋಕರೆ, ವಿವಿಧ ಐಟಿಐ ಕಾಲೇಜಿನ ಪ್ರಾಚಾರ್ಯರಾದ ರಾಜಕುಮಾರ ಮಾಳಗೆ, ಸತೀಶ ಗಂದಿಗುಡಿ, ನೌಕರರ ಸಂಘದ ತಾಲ್ಲೂಕ ಅಧ್ಯಕ್ಷ ಪಂಡರಿ ಆಡೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರನ ತರಬೇತಿ ಅಧಿಕಾರಿ ಬಾಬು ಪ್ರಭಾಜಿ, ಔರಾದ ಸರ್ಕಾರ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಯುಸುಫ ಮಿಯಾ, ವಾರ್ತಾ ಇಲಾಖೆಯ ವಿಜಯಕೃಷ್ಣ ಸೇರಿದಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.