ಯುವಜನತೆ ಉತ್ವಲ ಭವಿಷ್ಯ ರೂಪಿಸಿಕೊಳ್ಳಬೇಕು: ಲತಿಕಾ

| Published : Jan 26 2025, 01:35 AM IST

ಸಾರಾಂಶ

ಉನ್ನತ ಚಿಂತನೆ, ಆಳವಾದ ಅಧ್ಯಯನದಿಂದ ಯುವಜನರು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಸುತ್ತಲೂ ಒಳ್ಳೆಯ ಮತ್ತು ಕೆಟ್ಟ ಎರಡೂ ವಿಚಾರಗಳಿರುತ್ತವೆ. ಅವುಗಳನ್ನು ಗ್ರಹಿಸಿ, ಉತ್ತಮವಾದುದನ್ನು ಜೀವನದಲ್ಲಿ ಅಳವಡಿಸಿಕೊಂಡು, ಉತ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಲೈಫ್ ಟ್ರೈನರ್ ಲತಿಕಾ ದಿನೇಶ್ ಕೆ. ಶೆಟ್ಟಿ ಹೇಳಿದರು.

ಎಆರ್‌ಎಂ ಪ್ರ.ದ. ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ದಿನಾಚರಣೆ ಕನ್ನಡಪ್ರಭ ವಾರ್ತೆ ದಾವಣಗೆರೆ

ಉನ್ನತ ಚಿಂತನೆ, ಆಳವಾದ ಅಧ್ಯಯನದಿಂದ ಯುವಜನರು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಸುತ್ತಲೂ ಒಳ್ಳೆಯ ಮತ್ತು ಕೆಟ್ಟ ಎರಡೂ ವಿಚಾರಗಳಿರುತ್ತವೆ. ಅವುಗಳನ್ನು ಗ್ರಹಿಸಿ, ಉತ್ತಮವಾದುದನ್ನು ಜೀವನದಲ್ಲಿ ಅಳವಡಿಸಿಕೊಂಡು, ಉತ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಲೈಫ್ ಟ್ರೈನರ್ ಲತಿಕಾ ದಿನೇಶ್ ಕೆ. ಶೆಟ್ಟಿ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಎಆರ್‌ಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವನಿತಾ ಯುವ ವೇದಿಕೆಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಲ್‌ಫ್ರೆಡ್ ನೋಬಲ್ ಓರ್ವ ರಾಸಾಯನ ಶಾಸ್ತ್ರಜ್ಞನಾಗಿದ್ದು, ಡೈನಾಮೆಟ್ ಕಂಡುಹಿಡಿದರು. ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ “ದಿ ಮರ್ಚೆಂಟ್ಸ್ ಆಫ್ ಡೆತ್ ಈಸ್ ಡೆಡ್” ಎನ್ನುವ ತಲೆಬರಹದಡಿ ಆತ ಬದುಕಿದ್ದಾಗಲೇ ಸತ್ತಿದ್ದಾನೆ ಎಂಬ ಸುದ್ದಿ ಪ್ರಕಟವಾಗಿತ್ತು. ಇದರಿಂದ ಬೇಸರಗೊಂಡ ಆತ ಪತ್ರಿಕೆ ವಿರುದ್ಧ ನ್ಯಾಯಾಲಯಕ್ಕೆ ದೂರು ಕೊಡುತ್ತಾನೆ. ಆದರೆ, ಆರಾಮಾಗಿ ಕುಳಿತಿದ್ದಾಗ ಆತನಿಗೆ ಯೋಚನೆ ಮಾಡಿದಾಗ ಸಿಕ್ಕ ಉತ್ತರ ನಾನು ನನ್ನ ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎನ್ನುವುದಾಗಿತ್ತು. ಆನಂತರ ಆತ ತನ್ನ ಜೀವನದ ಉದ್ದಕ್ಕೂ ತುಂಬಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾನೆ. ಎಲ್ಲಿಯವರೆಗೆಂದರೆ, ತನ್ನ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಮಟ್ಟಕ್ಕೆ ಆತ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾನೆ. ಹೀಗೆ ನಮ್ಮ ವ್ಯಕ್ತಿತ್ವಕ್ಕೆ ರೂಪ ಕೊಡಬೇಕು ಎಂದು ವಿವರಿಸಿದರು. ವನಿತ ಸಮಾಜ ಅಧ್ಯಕ್ಷೆ ಪದ್ಮಾ ಪ್ರಕಾಶ್ ಮಾತನಾಡಿ, ವನಿತಾ ಸಮಾಜದ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳಿಗೆ ನಾಗಮ್ಮ ಕೇಶವ ಮೂರ್ತಿಯವರು ಸ್ಫೂರ್ತಿಯಾಗಿದ್ದಾರೆ. ಮಹಿಳೆಯರ ಕ್ಷೇತ್ರಕ್ಕೆ ಅವರ ಸೇವೆ ಸ್ಮರಣೀಯ ಎಂದರು.

ಯುವ ವನಿತ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಮಾತನಾಡಿ, ಯುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಯುವತಿಯರು ಹೆಚ್ಚಾಗಿ ಭಾಗವಹಿಸಿ, ಜ್ಞಾನ ವಿಸ್ತರಣೆ ಮಾಡಿಕೊಳ್ಳಬೇಕು ಎಂದರು.

ವಿವೇಕಾನಂದ ಜಯಂತಿ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ವಿದ್ಯಾ, ಸರೋಜ ಪ್ರಾರ್ಥಿಸಿದರು. ಅಭಿಲಾಷ ಸ್ವಾಗತಿಸಿ, ದೀಪಾ ನಿರೂಪಿಸಿದರು.

- - -

ಕೋಟ್‌ ಇಂದಿನ ಯುವಜನತೆಗೆ ಸಿನಿಮಾ ನಟರು ಆದರ್ಶ ಎನಿಸಿರುವುದು ದುರಂತ. ಇದರ ಬದಲಿಗೆ ದೇಶದ ಅಭಿವೃದ್ಧಿ, ಸಾಮಾಜಿಕ ಕಲ್ಯಾಣಕ್ಕಾಗಿ ದುಡಿದ ಮಹಾನ್ ಪುರುಷರು ಯುವಜನಾಂಗದ ಆದರ್ಶಗಳಾಗಬೇಕು. ಯುವಜನರು ಪ್ರಸ್ತುತ ಸನ್ನಿವೇಶದಲ್ಲಿ ತಮ್ಮ ಜೀವನಶೈಲಿ ಬದಲಿಸಿಕೊಳ್ಳದಿದ್ದರೆ ಖಂಡಿತ ಉತ್ತಮ ಭವಿಷ್ಯ ಅಸಾಧ್ಯ

- ಅಣ್ಣಯ್ಯ, ಪ್ರಾಚಾರ್ಯ