ಇಳಕಲ್ಲ: ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಹಾಗು ಮಾದಕ ವಸ್ತುಗಳ ದಾಸರಾಗಿ ಜೀವನವನ್ನೆ ಹಾಳು ಮಾಡಿಕೊಳ್ಳುತಿದ್ದಾರೆ. ಅದಕ್ಕಾಗಿ ಯುವ ಜನತೆ ಡ್ರಗ್ಸ್‌ದಿಂದ ದೂರವಿರಬೇಕು ಎಂದು ಇಳಕಲ್ಲ ಪೊಲೀಸ್‌ ಠಾಣಾಧಿಕಾರಿ ಮಂಜುನಾಥ ಪಾಟೀಲ ತಿಳಿಸಿದರು.

ನಗರದ ವಿಜಯ ಮಹಾಂತೇಶ್ವರ ಮಹಾ ವಿದ್ಯಾಲಯದ ಎನ್.ಸಿ.ಸಿ ಹಾಗು ಎನ್.ಎಸ್.ಎಸ್ ಮತ್ತು ಎಲ್ಲ ಕಾಲೇಜ ವಿದ್ಯಾರ್ಥಿಗಳೊಂದಿಗೆ ನಗರದ ಪ್ರಮುಖ ಬಿದಿಗಳಲ್ಲಿ ಡ್ರಗ್ಸ್‌ ಮತ್ತು ಮಾದಕ ವಸ್ತುಗಳ ಸೇವನೆ ಜೀವಕ್ಕೆ ಹಾನಿ, ಅವುಗಳ ನಿರ್ನಾಮ ಆಗಬೇಕು ಎಂದು ಜಾಗೃತಿ ಜಾಥಾದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತಿ ಸುಂದರ. ನಿಮ್ಮ ಜೀವನದಲ್ಲಿ ಕೇಲವು ದುಷ್ಟ ಜನತೆ ಈ ಡ್ರಗ್ಸ್‌ ಪರಿಚಯಿಸಿ ನಿಮ್ಮ ಜೀವನ ಹಾಳು ಮಾಡುತ್ತಾರೆ. ಅಂಥವರ ಜೊತೆ ಕಲಿಯದೆ ಅಂತವರನ್ನು ಕಂಡರೆ ನಮಗೆ ಮಾಹಿತಿ ತಿಳಿಸಿರಿ ಎಂದು ತಿಳಿಸಿದರು.

ಮಾದಕ ವಸ್ತುಗಳ ಸೇವನೆಯಿಂದ ಐದು ನಿಮಿಷ ಕ್ಷಣಿಕ ಸುಖ ಸಿಗಬಹುದು. ಆದರೆ ಅದರ ಸೇವನೆಯಿಂದ ಜೀವನ ಹಾಳಾಗುವದಲ್ಲದೆ ನೀವು ಮಾನಸಿಕ ರೋಗದಿಂದ ಬಳಲುತ್ತೀರಿ. ಡ್ರಗ್ಸ್‌ ಮಾರುವವರ ಮತ್ತು ಅದನ್ನು ಸೇವನೆ ಮಾಡುವವರ ವಿರುದ್ದ ಸರ್ಕಾರ ಕಠಿಣ ಕಾನೂನು ರಚಿಸಿದೆ. ಹೀಗಾಗಿ, ಶಿಕ್ಷಣ ಕಲಿತು ನೀಮ್ಮ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಕಾಲೇಜ ಪ್ರಾಚಾರ್ಯ ಬಿರಾದಾರ ಹಾಗು ಇತರರು ಉಪಸ್ಥಿತರಿದ್ದರು.