ಸಾರಾಂಶ
ಮಹಾನ್ ಪುರುಷರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯಹೊಂದಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಶಾಸಕ ಸಿ. ಬಿ .ಸುರೇಶ್ ಬಾಬು ರವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಮಹಾನ್ ಪುರುಷರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯಹೊಂದಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಶಾಸಕ ಸಿ. ಬಿ .ಸುರೇಶ್ ಬಾಬು ರವರು ತಿಳಿಸಿದರು.ಅವರು ತಾಲೂಕು ಕ್ರೀಡಾಂಗಣದಲ್ಲಿ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ನಮ್ಮನ್ನು ಕಾಯುತ್ತಿರುವ ಸೈನಿಕರಿಗೆ ನಮ್ಮದೊಂದು ಸಲಾಂ ಎಂದ ಅವರು, ಯುವಕರು ಇಂದು ದೇಶದ ಅಭಿವೃದ್ಧಿಗೆ ಚಿಂತಿಸಿ ಬಡವ ಶ್ರೀಮಂತ ಎಂಬ ಭೇದಭಾವವನ್ನು ಮರೆತು ದೇಶದ ಅಭಿವೃದ್ಧಿಗಾಗಿ ಕಂಕಣತೊಟ್ಟು ಶ್ರಮಿಸಬೇಕೆಂದು ಕರೆ ನೀಡಿದರು.
ಧ್ವಜಾರೋಹಣವನ್ನು ನೆರವೇರಿಸಿದ ತಾಲೂಕು ತಹಸೀಲ್ದಾರ ಕೆ.ಪುರಂದರ ಮಾತನಾಡಿ, ನಮ್ಮ ದೇಶ ಆರ್ಥಿಕವಾಗಿ ವೈಜ್ಞಾನಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ನಮ್ಮ ಪ್ರಧಾನ ಮಂತ್ರಿಗಳು ಆಪರೇಷನ್ ಸಿಂದೂರದಂತಹ ದಿಟ್ಟ ನಿರ್ಧಾರಗಳಿಂದ ದೇಶದ ಸಾಮರ್ಥ್ಯ ವನ್ನು ಜಗತ್ತಿಗೆ ತೋರಿಸಿಕೊಟ್ಟರು ಮೇಕ್ ಇನ್ ಇಂಡಿಯಾ ಭಾರತದ ಸ್ವಾವಲಂಬಿಯ ಮಂತ್ರವಾಗಿದ್ದು ಇಂದು ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶತಾಯಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎ.ಇ. ಓ ದೊಡ್ಡ ಸಿದ್ದಯ್ಯ ಸಿ.ಪಿ.ಐ. ನದಾಫ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಡಿ ಚಂದ್ರಶೇಖರ್ ಪುರಸಭಾ ಸದಸ್ಯರು ಹಾಗೂ ಅಧ್ಯಕ್ಷರು ಹಾಜರಿದ್ದರು.