ಸಾರಾಂಶ
ರಟ್ಟೀಹಳ್ಳಿ: ಹಳ್ಳಿಗಳೇ ದೇಶದ ಬೆನ್ನೆಲುಬು, ಅದನ್ನರಿತು ಯುವ ಸಮುದಾಯ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ರಟ್ಟೀಹಳ್ಳಿ ತಾಲೂಕು ಸಾಧು ಸಮಾಜದ ಅಧ್ಯಕ್ಷ ಮಾಲತೇಶ ಗಂಗೋಳ ಹೇಳಿದರು.
ತಾಲೂಕಿನ ಲಿಂಗದೇವರಕೊಪ್ಪ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಪೂರಕವಾಗಿದೆ, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಮಾಜ ಸೇವೆ, ಸೌಹಾರ್ದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು ಎಂದರು.ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ಗ್ರಾಮಿಣ ಅಭಿವೃದ್ಧಿಗೆ ಯುವಕರ ಪಾತ್ರ ಅಗತ್ಯವಾಗಿದ್ದು, ಪ್ರತಿಯೊಬ್ಬರು ಸಕರಾತ್ಮಕ ಗುಣ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಗಮನವಿರಲಿ ಎಂದರು.
ಎನ್.ಎಸ್.ಎಸ್ ಶಿಬಿರದ ಧ್ಯೇಯೋದ್ದೇಶಗಳ ಜೊತೆಗೆ ಸ್ವಚ್ಛತೆಯ ಅರಿವು ಮಖ್ಯ, ವಿದ್ಯಾರ್ಥಿಗಳು ಸಂಕುಚಿತ ಮನೋಭಾವ ಬಿಟ್ಟು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಶಿಬಿರಾಧಿಕಾರಿ ಎಚ್. ಶಿವಾನಂದ ಅವರ ಸೇವೆಯನ್ನು ಮನಗಂಡು ಎನ್.ಎಸ್.ಎಸ್ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪಿ. ಮುನಿಯಪ್ಪ ವಹಿಸಿಕೊಂಡಿದ್ದರು. ಗ್ರಾ.ಪಂ. ಸದಸ್ಯ ಕಿರಣಕುಮಾರ ಬತ್ತೇರ, ತಿಪ್ಪಣ್ಣ ಶಿವಪ್ಪನವರ, ಹನುಮಂತಪ್ಪ ನಾಗೇನಹಳ್ಳಿ, ಗ್ರಾಮಸ್ಥರಾದ ಮಂಜಪ್ಪ ಲಮಾಣಿ, ಸಿಕಂದರಸಾಬ್ ಮಕಂದರ, ತಿರಕಪ್ಪ ಚಿಕ್ಕಣ್ಣನವರ, ಕರಬಸಪ್ಪ ಚಕ್ರಸಾಲಿ, ಉಪನ್ಯಾಸಕರಾದ ಸಂತೋಷ ಅಂಗಡಿ, ಅಶೋಕ ಲಮಾಣಿ, ರುದ್ರೇಶ ಬಡಿಗೇರ, ಎಮ್.ಕೆ. ಹೋಳಜೋಗಿ, ಬಸವರಾಜ ಮಾಸಣಗಿ, ರುದ್ರಪ್ಪ ಮಾರೇರ, ವಸಂತ ಪಾಟೀಲ್, ಅಣ್ಣಪ್ಪ ಶಾಮನೂರ ಮುಂತಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))