ಗಣೇಶೋತ್ಸವದಲ್ಲಿ ರಕ್ತದಾನ ಮಾಡಿ ಗಮನ ಸೆಳೆದ ಯುವಕರು

| Published : Aug 31 2025, 01:07 AM IST

ಸಾರಾಂಶ

ಗಣೇಶೋತ್ಸವದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಪವರ್ ಹೌಸ್ ಫಿಟ್ನೆಸ್ ಪಾಯಿಂಟ್‌ಗೆ ಬರುವ ಎಲ್ಲ ಯುವಕರು ರಕ್ತದಾನ ಮಾಡಲು ಮುಂದಾಗಿದ್ದಾರೆ.

ರಾಮನಗರ:

ಪವರ್ ಹೌಸ್ ಫಿಟ್ನೆಸ್ ಪಾಯಿಂಟ್ ವತಿಯಿಂದ ಆಚರಿಸಲಾಗುತ್ತಿರುವ ಮೂರನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಮಂದಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.ಈ ವೇಳೆ ಮಾತನಾಡಿದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಚೇತನ್ ಸೂರ್ಯ, ಪ್ರತಿ ವರ್ಷ ಗಣಪತಿ ಉತ್ಸವದಲ್ಲಿ ಅದ್ಧೂರಿ, ಆಡಂಬರ ಇದ್ದದ್ದೆ. ಆದರೆ, ಈ ಬಾರಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಉದ್ದೇಶದಿಂದ ನಮ್ಮ ತಂಡದ ಎಲ್ಲ ಸದಸ್ಯರ ಆಶಯದಂತೆ ಬೆಳ್ಳಿ ರಕ್ತ ನಿಧಿ ಕೇಂದ್ರ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.ಗಣೇಶೋತ್ಸವದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಪವರ್ ಹೌಸ್ ಫಿಟ್ನೆಸ್ ಪಾಯಿಂಟ್‌ಗೆ ಬರುವ ಎಲ್ಲ ಯುವಕರು ರಕ್ತದಾನ ಮಾಡಲು ಮುಂದಾಗಿದ್ದಾರೆ. ರಕ್ತದಾನ ಮಹಾದಾನ. ಮೂಢನಂಬಿಕೆಯನ್ನು ಬಿಟ್ಟು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬಹುದು. ನಾವು ನೀಡುವ ಒಂದು ಯೂನಿಟ್ ರಕ್ತದಿಂದ ಇನ್ನೊಂದು ಜೀವ ಉಳಿಸಬಹುದು. ಇದನ್ನು ದೇವರೂ ಸಹ ಮೆಚ್ಚುತ್ತಾನೆ. ಯುವಪೀಳಿಗೆ ನಿರಂತರವಾಗಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು. ಧಾರ್ಮಿಕ ಚಟುವಟಿಕೆಗಳ ಜೊತೆಗೆ ಇಂತಹ ಸಮಾಜಿಕ ಚಟುವಟಿಕೆಗಳನ್ನು ಆಯೋಜಿಸುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.ಈ ವೇಳೆ ಪವರ್ ಹೌಸ್ ಫಿಟ್ನೆಸ್ ಪಾಯಿಂಟ್ ಮಾಲೀಕರಾದ ಹೇಮಂತ್ ಗೌಡ, ಗಣೇಶೋತ್ಸವ ಸಮಿತಿ ಸದಸ್ಯರಾದ ರೋಹಿತ್, ಮಧುಗೌಡ, ಮನೋಜ್, ಶರತ್, ಸೋಹಾನ್ ಮತ್ತಿತರರು ಹಾಜರಿದ್ದರು.

-----

30ಕೆಆರ್ ಎಂಎನ್ 2.ಜೆಪಿಜಿರಾಮನಗರದ ಬೆಂಗಳೂರು ಮೈಸೂರು ಹೆದ್ದಾರಿ ಬದಿಯಲ್ಲಿ ಪವರ್ ಹೌಸ್ ಪಿಟ್ನೆಸ್ ಪಾಯಿಂಟ್ ವತಿಯಿಂದ ಆಚರಿಸಲಾಗುತ್ತಿರುವ 3ನೇ ವರ್ಷದ ಗಣೇಶೋತ್ಸವದಲ್ಲಿ ರಕ್ತದಾನ ಶಿಬಿರ ನಡೆಯಿತು.