ರಾಜಕೀಯ ತಜ್ಞ, ಸಾಮಾಜಿಕ ಚಿಂತಕ, ಮೈಸೂರು ಸಂಸ್ಥಾನ ಆಡಳಿತ ಅವಧಿಯಲ್ಲಿ ಸಚಿವರಾಗಿದ್ದ ಜೆ.ಮಹಮದ್ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿಗೆ ಜೆಡಿಎಸ್ ಮುಖಂಡ, ಕಡೂರು ಕ್ಷೇತ್ರ ಮಾಜಿ ಶಾಸಕ ವೈಎಸ್‌ವಿ ದತ್ತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಎಂ. ಇಮಾಂ ಪ್ರಶಸ್ತಿಯ ಸಲಹಾ ಸಮಿತಿ ಅಧ್ಯಕ್ಷ, ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಹೇಳಿದ್ದಾರೆ.
- ಜಗಳೂರಿನಲ್ಲಿ ಸಲಹಾ ಸಮಿತಿ ಅಧ್ಯಕ್ಷ, ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಮಾಹಿತಿ - - -
- ಜೆ.ಎಂ. ಇಮಾಂ ಮೆಮೋರಿಯಲ್ ಶಾಲೆ ಬೆಳ್ಳಿಹಬ್ಬ''''ದ ಪ್ರಯುಕ್ತ ಪ್ರಶಸ್ತಿ ಪ್ರದಾನ- ಡಿ.೨೬ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ
- - -ಕನ್ನಡಪ್ರಭ ವಾರ್ತೆ ಜಗಳೂರು
ರಾಜಕೀಯ ತಜ್ಞ, ಸಾಮಾಜಿಕ ಚಿಂತಕ, ಮೈಸೂರು ಸಂಸ್ಥಾನ ಆಡಳಿತ ಅವಧಿಯಲ್ಲಿ ಸಚಿವರಾಗಿದ್ದ ಜೆ.ಮಹಮದ್ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿಗೆ ಜೆಡಿಎಸ್ ಮುಖಂಡ, ಕಡೂರು ಕ್ಷೇತ್ರ ಮಾಜಿ ಶಾಸಕ ವೈಎಸ್‌ವಿ ದತ್ತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಎಂ. ಇಮಾಂ ಪ್ರಶಸ್ತಿಯ ಸಲಹಾ ಸಮಿತಿ ಅಧ್ಯಕ್ಷ, ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಹೇಳಿದರು.ಪಟ್ಟಣದ ಜೆ.ಎಂ. ಇಮಾಂ ಮೆಮೋರಿಯಲ್ ಶಾಲೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಶಾಲೆಯ ''''ಬೆಳ್ಳಿ ಹಬ್ಬ''''ದ ಪ್ರಯುಕ್ತ ೭ನೇ ವರ್ಷದ ಜೆ.ಎಂ. ಇಮಾಂ ಸ್ಮಾರಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ಜರುಗಲಿದೆ ಎಂದು ತಿಳಿಸಿದರು.
ಮಹಮದ್ ಇಮಾಂ ಅವರು ನಾಡು ಕಂಡ ಅಪರೂಪದ, ಧೀಮಂತ ಮುತ್ಸದ್ದಿ, ಸಂಪನ್ನ ರಾಜಕಾರಣಿ. ವಿಧಾನ ಸೌಧದ ಮೇಲೆ ''''ಸರ್ಕಾರಿ ಕೆಲಸ ದೇವರ ಕೆಲಸ'''' ಎಂದು ಬರೆಸಿ ಎಂದು ಅಂದಿನ ಮುಖ್ಯಮಂತ್ರಿಗೆ ಸಲಹೆ ನೀಡಿದ ವಿರೋಧ ಪಕ್ಷದ ನಾಯಕ, ಜನಾನುರಾಗಿ ಮತ್ತು ನೀರಾವರಿ ತಜ್ಞರಾಗಿದ್ದರು. ಒಲವೇ ಜೀವನ ಸಾಕ್ಷಾತ್ಕಾರ ಎಂಬಂತೆ ಜಲವೇ ಜೀವನ ಸಾಕ್ಷಾತ್ಕಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಅಪರಂಜಿ ಎಂದು ಸ್ಮರಿಸಿದರು.ಡಿ.೨೬ರಿಂದ ಮೂರು ದಿನಗಳ ಕಾಲ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಸಂಜೆ ಹಾಗೂ ಹಳೆಯ ಶಿಕ್ಷಕರು, ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಮೊದಲನೇ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಟ್ರಸ್ಟ್ ಗೌರವಾಧ್ಯಕ್ಷ ಹಾಜಿ ಜೆ.ಕೆ. ಹುಸೇನ್ ಮಿಯ್ಯಾ ಸಾಬ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಡೂರು ಕ್ಷೇತ್ರ ಮಾಜಿ ಶಾಸಕ ವೈಎಸ್‌ವಿ ದತ್ತಾ ಅವರಿಗೆ ಜೆ.ಮಹಮದ್ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವೇಳೆ ಹಿರಿಯ ಪತ್ರಕರ್ತ ಚಳ್ಳಕೆರೆ ಎರ‍್ರಿಸ್ವಾಮಿ ಅಭಿನಂದನಾ ನುಡಿಗಳನ್ನು ನುಡಿಯಲಿದ್ದಾರೆ. ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಜಿ.ಕೊಟ್ರೇಶ್, ಜಲೀಲ್ ಸಾಬ್ ಮತ್ತು ಚಮನ್ ಬೀ ಫರ್ಜಾನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಡಿ.೨೭ರಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್.ಎಚ್. ಮಸ್ತಾನ್ ಸಾಬ್, ಡಾ. ಪಿ.ಎಸ್. ಅರವಿಂದನ್, ಬಿಇಒ ಈ.ಹಾಲಮೂರ್ತಿ, ಇನ್‌ಸ್ಪೆಕ್ಟರ್ ಸಿದ್ರಾಮಯ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಡಿ.೨೮ರಂದು ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರಾದ ಡಾ. ಆರ್.ತಾರಿಣಿ ಶುಭದಾಯಿನಿ, ಎಸ್.ಜಿ.ಬಣಕಾರ್, ಜೆ.ಕೆ.ಆಸಿಫ್, ಜೆ.ಎಂ. ಅಫ್ತಾಬ್ ಹುಸೇನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜೆ.ಕೆ.ಮಹಮದ್ ಹುಸೇನ್, ಆರ್.ಖಾಸಿಂ ಸಾಬ್, ಮೇಲ್ವಿಚಾರಕ ಬಿ.ಟಿ.ನಾಗರಾಜ್, ಮುಖ್ಯ ಶಿಕ್ಷಕ ಜೆ.ಆರ್.ಶಂಕರ್, ಜಾನಪದ ತಜ್ಞ ಡಾ.ಬಿ.ಎ.ರಾಜಪ್ಪ, ಎಸ್.ಹಾಲಪ್ಪ ಇದ್ದರು.
- - --23ಜೆಜಿಎಲ್1: ಜಗಳೂರು ಪಟ್ಟಣದ ಜೆ.ಎಂ. ಇಮಾಂ ಮೆಮೋರಿಯಲ್ ಶಾಲೆಯಲ್ಲಿ ಮಂಗಳವಾರ ಜಿ.ಎಂ. ಇಮಾಂ ಪ್ರಶಸ್ತಿಯ ಸಲಹಾ ಸಮಿತಿ ಅಧ್ಯಕ್ಷ, ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಮಾತನಾಡಿದರು.-23ಜೆ.ಜಿ.ಎಲ್.1: ಜಗಳೂರು ಪಟ್ಟಣದ ಜೆ.ಎಂ. ಇಮಾಂ ಮೆಮೋರಿಯಲ್ ಶಾಲೆಯಲ್ಲಿ ಮಂಗಳವಾರ ಜಿ.ಎಂ. ಇಮಾಂ ಪ್ರಶಸ್ತಿ ಸಲಹಾ ಸಮಿತಿ ಅಧ್ಯಕ್ಷ, ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಮಾತನಾಡಿದರು.