ಯುಗದ ಆರಂಭ ಸೂಚಿಸುವುದೇ ಯುಗಾದಿ: ರಾಮಪ್ರಸಾದ್‌

| Published : Apr 16 2024, 01:01 AM IST

ಯುಗದ ಆರಂಭ ಸೂಚಿಸುವುದೇ ಯುಗಾದಿ: ರಾಮಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಯುಗಾದಿ ಯುಗದ ಆರಂಭ ಎಂಬುವುದನ್ನು ಸೂಚಿಸುತ್ತದೆ. ಸುಖ ದುಃಖ ನೋವು ನಲಿವುಗಳನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಲಿ ಎನ್ನುವ ಉದ್ದೇಶದಿಂದ ನಮ್ಮ ಹಿರಿಯರು ಹಬ್ಬಗಳ ಆಚರಣೆಯನ್ನ ನಡೆಸುತ್ತಾ ಬಂದಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಹೇಳಿದರು.

ಹರಿಹರಪುರದ ನುಗ್ಗಿಮಕ್ಕಿಯಲ್ಲಿ ಕಸಾಪ ಹೋಬಳಿ ಘಟಕದಿಂದ ಯುಗಾದಿ ವಿಶೇಷ ಕವಿಗೋಷ್ಠಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಯುಗಾದಿ ಯುಗದ ಆರಂಭ ಎಂಬುವುದನ್ನು ಸೂಚಿಸುತ್ತದೆ. ಸುಖ ದುಃಖ ನೋವು ನಲಿವುಗಳನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಲಿ ಎನ್ನುವ ಉದ್ದೇಶದಿಂದ ನಮ್ಮ ಹಿರಿಯರು ಹಬ್ಬಗಳ ಆಚರಣೆಯನ್ನ ನಡೆಸುತ್ತಾ ಬಂದಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಹೇಳಿದರು.

ಭಾನುವಾರ ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಕಸಾಪ ಹರಿಹರಪುರ ಹೋಬಳಿ ಘಟಕದಿಂದ ನಡೆದ ಯುಗಾದಿ ವಿಶೇಷ ಕವಿಗೋಷ್ಠಿ, ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ಜಯಂತಿ ಆಚರಣೆ, ರಂಜಾನ್ ಕುರಿತು ಉಪನ್ಯಾಸ, ನುಡಿ ಕನ್ನಡೋತ್ಸವದಲ್ಲಿ ಮಾತನಾಡಿದ ಅವರು, ಚಂದ್ರನ ಮತ್ತು ಸೂರ್ಯನ ಚಲನೆಗಳನ್ನು ಅನುಸರಿಸಿ ಚಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಣೆಗಳು ನಡೆಯುತ್ತವೆ.

ನಮ್ಮ ಆಹಾರ ಪದ್ಧತಿ ಅಭ್ಯಂಜನ ಸ್ನಾನ ಇಂತಹ ಧಾರ್ಮಿಕ ವಿಧಿಗಳು ಕೂಡ ನಮ್ಮ ಆರೋಗ್ಯ ಹಾಗೂ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ ಎಂದು ಹಬ್ಬದ ಮಾಹಿತಿ ನೀಡಿದರು.ವಾಸಪ್ಪ ಕುಂಚೂರು ಡಾ. ಬಿ.ಆರ್.ಅಂಬೇಡ್ಕರ್‌ರವರ ಜೀವನ ಕುರಿತು ಉಪನ್ಯಾಸ ನೀಡಿ ಡಾ. ಬಿ.ಆರ್. ಅಂಬೇಡ್ಕರ್‌ ಬಹಳ ಕಷ್ಟದಲ್ಲಿಯೇ ಬೆಳೆದು ಬಂದವರು. ತಮ್ಮ ಜೀವನದಲ್ಲಾದಂತಹ ಕಷ್ಟಗಳು ಅವಮಾನಗಳನ್ನ ಸಹಿಸಿಕೊಂಡು ಮುಂದಿನ ದಿನಗಳಲ್ಲಿ ಸರ್ವರಿಗೂ ಸಮಬಾಳು ಸಮಾನತೆ ಹಕ್ಕುಗಳು ಕರ್ತವ್ಯಗಳು ಎಲ್ಲವೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಂವಿಧಾನವನ್ನು ನಮಗೆ ನೀಡಿದ್ದಾರೆ.

ಸಂವಿಧಾನದ ಆಶಯಗಳಂತೆ ನಾವೆಲ್ಲ ಸಮಾಜದಲ್ಲಿ ಒಂದಾಗಿ ಸಮಾಜಮುಖಿ ಕಾರ್ಯಗಳನ್ನ ಮಾಡಬೇಕಾಗುತ್ತದೆ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾನ್ ನಾಯಕರು ಅವರು ಭಾರತ ಕಂಡಂತಹ ಧೀಮಂತ ನಾಯಕರು ಎಂದರು. ಶಿಕ್ಷಕಿ ಅಸ್ಮ ರಂಜಾನ್ ಕುರಿತು ಉಪನ್ಯಾಸ ನೀಡಿ ರಂಜನ್ ಎಂದರೆ ಸುಡುವುದು ಅಥವಾ ಪಶ್ಚಾತಾಪ ಪಡುವುದು ಎಂಬರ್ಥ. ನಮ್ಮಿಂದ ತಿಳಿಯದೆ ಆದಂತ ಪಾಪ ಕಾರ್ಯಗಳು ತಪ್ಪುಗಳನ್ನ ತಿದ್ದಿಕೊಂಡು ಜೀವನದಲ್ಲಿ ಆತ್ಮಶುದ್ಧಿ ಮಾಡಿಕೊಳ್ಳಲು ಇರುವಂತಹ ಒಂದು ಆಚರಣೆ. ನಿರಂತರವಾಗಿ ೩೦ ದಿನಗಳ ಉಪವಾಸ ಮಾಡುವುದರಿಂದ ಹಸಿವು ಹಾಗೂ ನೀರಿನ ಮಹತ್ವವನ್ನು ಎಲ್ಲರೂ ತಿಳಿಯಲಿ ಎನ್ನುವ ಉದ್ದೇಶ ಇದಾಗಿದೆ. ತಾವು ಗಳಿಸಿದಂತಹ ಸಂಪತ್ತಿನಲ್ಲಿ ಒಂದು ಭಾಗಗಳನ್ನು ದಾನ ಧರ್ಮ ಮಾಡುವ ಮೂಲಕ ಸರ್ವರನ್ನು ಸಮಾನತೆಯಿಂದ ಕಾಣುವ ಉದ್ದೇಶ ಈ ರಂಜಾನ್ ತಿಂಗಳಲ್ಲಿ ಕಾಣಿಸುತ್ತದೆ ಎಂದರು,ಕಾರ್ಯಕ್ರಮ ಆಯೋಜಕ ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ, ಎ.ಓ.ವೆಂಕಟೇಶ್, ತಾಲೂಕು ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಸುಮಿತ್ರ ನಾರಾಯಣ್, ಸರೋಜ ಜಯಪ್ರಕಾಶ್, ಲಕ್ಷ್ಮಿ ನಾರಾಯಣ, ಪ್ರಮೋದ ಎನ್.ಭಟ್, ಗೌರವ ಕಾರ್ಯದರ್ಶಿ ರಾಘವೇಂದ್ರ ಮುಂತಾದವರು ಮಾತನಾಡಿದರು,ಹೋಬಳಿ ಮಟ್ಟದ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶುಕುರ್ ಅಹಮದ್, ಸುವರ್ಣ ಕೇಶವ್, ಜಯೇಶ್, ನಾಗರಾಜ್ ಹೆಚ್.ಎಂ.ರವಿಪ್ರಸಾದ್, ರವಿ, ನಾರಾಯಣ ಮೂರ್ತಿ, ನಾಗರತ್ನ, ನಾಗಲಕ್ಷ್ಮಿ, ಶ್ರೀನಿವಾಸ, ಪರಿಮಳ, ಅಬ್ದುಲ್ ಅಜೀಜ್, ಧೀರೇಂದ್ರ, ಶಾನುವಾಜ್, ಫಲಿಖಾ ಮುಂತಾದವರು ಉಪಸ್ಥಿತರಿದ್ದರು,