2. ಮನರೇಗಾದ ಕಾಮಗಾರಿ ಅನುಷ್ಠಾನದಲ್ಲಿನ ತೊಡಕು ತಪ್ಪಿಸಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು 2026-27ನೇ ಸಾಲಿನ ಕ್ರಿಯಾಯೋಜನೆಯನ್ನು ಯುಕ್ತಧಾರ ತಂತ್ರಾಂಶ ಸಹಕಾರಿಯಾಗಿದೆ ಎಂದು ತಾಪಂ ಇಒ ಡಾ. ಪರಮೇಶ್ವರಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.
ಹಾವೇರಿ: ಮನರೇಗಾದ ಕಾಮಗಾರಿ ಅನುಷ್ಠಾನದಲ್ಲಿನ ತೊಡಕು ತಪ್ಪಿಸಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು 2026-27ನೇ ಸಾಲಿನ ಕ್ರಿಯಾಯೋಜನೆಯನ್ನು ಯುಕ್ತಧಾರ ತಂತ್ರಾಂಶ ಸಹಕಾರಿಯಾಗಿದೆ ಎಂದು ತಾಪಂ ಇಒ ಡಾ. ಪರಮೇಶ್ವರಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಸಕ್ತ ಸಾಲಿನಿಂದ ಯುಕ್ತಧಾರ ತಂತ್ರಾಂಶದ ಮೂಲಕ ನರೇಗಾ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ.ಪ್ರತಿ ವರ್ಷಗ್ರಾಮ ಪಂಚಾಯಿತಿಗಳು ವಾರ್ಷಿಕ ಕ್ರಿಯಾ ಯೋಜನೆ ರೂಪಿಸುತ್ತವೆ. ಗ್ರಾಮ ಸಭೆಗಳಲ್ಲಿ ಸಾರ್ವಜನಿಕರಿಂದ ಅಗತ್ಯವಿರುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಮಾಹಿತಿ ಪಡೆದು ಕ್ರಿಯಾ ಯೋಜನೆ ರೂಪಿಸಲಾಗುತ್ತಿತ್ತು. ಆದರೆ ಕ್ರಿಯಾ ಯೋಜನೆಗೆ ಕಾಮಗಾರಿಗಳ ಸೇರ್ಪಡೆ ಮುನ್ನ ಭೌತಿಕ ಸ್ಥಳ ಪರಿಶೀಲಿಸದೇ ಆ ಜಾಗಕ್ಕೆ ಕಾಮಗಾರಿ ಸೂಕ್ತವಾಗಿದೆಯೋ, ಇಲ್ಲವೋ ಎಂಬುದನ್ನು ಗಮನಿಸುತ್ತಿರಲಿಲ್ಲ. ಕ್ರಿಯಾ ಯೋಜನೆಯಲ್ಲಿ ಇದೆ ಎಂಬ ಒಂದೇ ಕಾರಣಕ್ಕೆ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿತ್ತು. ಆದರೆ, ಯುಕ್ತಧಾರ ತಂತ್ರಾಂಶ ಇದಕ್ಕೆ ಬ್ರೇಕ್ ಹಾಕಲಿದೆ ಎಂದು ತಿಳಿಸಿದ್ದಾರೆ. ಮರು ಕಾಮಗಾರಿಗೂ ತಡೆ: ಈಗಾಗಲೇ ನಾನಾ ತಂತ್ರಾಂಶ ಬಳಸಿಕೊಂಡು ಮನರೇಗಾದಡಿ ನಡೆದಿರುವ ಕಾಮಗಾರಿಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಈ ವಿವರವು ''''ಯುಕ್ತಧಾರ'''' ತಂತ್ರಾಂಶದಲ್ಲೂ ಲಭ್ಯವಾಗಲಿದೆ. ನಾನಾ ಕಾಮಗಾರಿ ನಡೆದ ಸ್ಥಳಗಳಲ್ಲಿ ಮತ್ತೆ ಅಂಥದ್ದೇ ಕಾಮಗಾರಿಯನ್ನು ಕೈಗೊಳ್ಳಲು ''ಯುಕ್ತಧಾರ'' ಅವಕಾಶ ನೀಡುವುದಿಲ್ಲ. ಇದರಿಂದ ಒಂದೇ ಸ್ಥಳದಲ್ಲಿ ಒಂದೇ ರೀತಿಯ ಕಾಮಗಾರಿಗಳನ್ನು ಮಾಡಿ ನಕಲಿ ಬಿಲ್ ತಯಾರಿಸಿ, ಬಿಲ್ ಎತ್ತುವಳಿ ದಂಧೆಗೆ ಕಡಿವಾಣ ಬೀಳಲಿದೆ. ಈಗಾಗಲೇ ಮನರೇಗಾ ಸಿಬ್ಬಂದಿಗೆ ''''ಯುಕ್ತಧಾರ'''' ತಂತ್ರಾಂಶ ಬಳಕೆಗೆ ತರಬೇತಿ ನೀಡಲಾಗಿದೆ. ಜತೆಗೆ ಲಾಗಿನ್ ಐಡಿ ರಚಿಸಿ ನೀಡಲಾಗಿದ್ದು, ಜನರಿಂದ ಬೇಡಿಕೆ ಸ್ವೀಕರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬೇಡಿಕೆ ಕಾಮಗಾರಿ ಅನುಷ್ಠಾನದ ಸ್ಥಳಕ್ಕೆ ಮನರೇಗಾ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ, ಆ ಜಾಗದ ಅಕ್ಷಾಂಶ ಹಾಗೂ ರೇಖಾಂಶದ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ಈ ಮಾಹಿತಿಯನ್ನು ಯುಕ್ತಧಾರ ತಂತ್ರಾಂಶದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಬೇಡಿಕೆ ಬಂದ ಕಾಮಗಾರಿ ಆ ಜಾಗಕ್ಕೆ ಸೂಕ್ತವೇ, ಇಲ್ಲವೇ ಎಂಬುದನ್ನು ತಂತ್ರಾಂಶವೇ ನಿರ್ಧರಿಸಲಿದೆ. ಕಾಮಗಾರಿ ಬೇಡಿಕೆಯು ಆ ಸ್ಥಳಕ್ಕೆ ಸೂಕ್ತವಾಗಿದ್ದರೆ ಮಾತ್ರ ಕ್ರಿಯಾಯೋಜನೆಗೆ ಸೇರ್ಪಡೆಯಾಗುತ್ತದೆ. ಇಲ್ಲದಿದ್ದರೆ ಇಲ್ಲ. ಆದ್ದರಿಂದ ಇದು ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ. ''''ಯುಕ್ತಧಾರ'''' ತಂತ್ರಾಂಶದಿಂದ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಬಹುದಾಗಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿ ಆಧಾರಿತ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಲು ಇದರಿಂದ ಅನುಕೂಲವಾಗಲಿದೆ. ಮನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ''''ಯುಕ್ತಧಾರ'' ತಂತ್ರಾಂಶ ನೆರವಾಗಲಿದೆ. ಈ ನಿಟ್ಟಿನಲ್ಲಿ ತಂತ್ರಾಂಶದ ಕುರಿತು ಈಗಾಗಲೇ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಎಂದು ಹಾವೇರಿ ತಾಪಂ ಇಒ ಡಾ. ಪರಮೇಶ ಹುಬ್ಬಳ್ಳಿ ಹೇಳಿದರು.