ಸಾರಾಂಶ
ಅರಕಲಗೂಡು: ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬರಗೂರು, ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ದೊಡ್ಡಮಗ್ಗೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿಯನ್ನು ಶಾಲೆಯ ಮಕ್ಕಳಿಂದ ಬಿಡುಗಡೆಗೊಳಿಸಲಾಯಿತು. ಈ ವೇಳೆ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ದೊಡ್ಡಮಗ್ಗೆ ಪ್ರಾಂಶುಪಾಲರಾದ ಸುಮಲತಾ ಮಾತನಾಡಿ, ಕನ್ನಡಪ್ರಭ ಪತ್ರಿಕೆಯು ಮಕ್ಕಳ ಸಂಚಿಕೆ ಹೊರ ತಂದಿದ್ದು, ನಾನು ಗಮನಿಸಿದಂತೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ, ಪಠ್ಯ ಪುಸ್ತಕಗಳ ಬಗ್ಗೆ ಪ್ರಶ್ನೆ, ಉತ್ತರ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ನೀಡಲಾಗುತ್ತಿದೆ. ಹೀಗೆ ಮಕ್ಕಳಿಗೆ ಅನುಕೂಲವಾಗುವಂತೆ ಹತ್ತು ಹಲವು ಪ್ರಶ್ನೆ, ಉತ್ತರಗಳನ್ನು ನೀಡುತ್ತಿದ್ದು, ಮಕ್ಕಳಿಗೆ ತುಂಬಾ ಉಪಯೋಗವಾಗಲಿದೆ. ಆದ್ದರಿಂದ ಕನ್ನಡಪ್ರಭ ಪತ್ರಿಕೆಯ ಮಕ್ಕಳ ಸಂಚಿಕೆಯನ್ನು ಎಲ್ಲ ಶಾಲೆಗಳಲ್ಲೂ ತೆಗೆದುಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಹೇಮಾಂಜಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯುವ ಆವೃತ್ತಿಯಿಂದ ಪ್ರತಿ ದಿನ 50 ಅಂಕಗಳಿಗೆ ಪ್ರಶ್ನೆ, ಉತ್ತರ ಸಿಗುತ್ತಿದೆ. ಜೊತೆಗೆ ನಮಗೆ ಗೊತ್ತಿರದ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿದ್ದು, ನಮ್ಮಂಥ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದರು. ಕನ್ನಡಪ್ರಭ ಯುವ ಆವೃತ್ತಿ 10ನೇ ತರಗತಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಮಾಹಿತಿ ಹಾಗೂ ಪ್ರಶ್ನೆಪತ್ರಿಕೆಯನ್ನು ದಿನಪತ್ರಿಕೆಯಲ್ಲಿ ನೀಡುತ್ತಿದ್ದು ಇದನ್ನು ಬಳಸಿಕೊಂಡು ಉತ್ತಮ ಅಂಕ ಗಳಿಸಲು ಉಪಯುಕ್ತವಾಗಿದೆ ಎಂದರು.