ಸಾರಾಂಶ
ವಿಷಯಾಧಾರಿತ ಸ್ಪರ್ಧೆ, ಜನಪದ ನೃತ್ಯ, ಜನಪದ ಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ಘೋಷಣೆ, ಕರಕುಶಲ ಕಲೆ, ಕೃಷಿ ಉತ್ಪನ್ನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಹಾಗೂ ವಿಜ್ಞಾನ ಮೇಳ ಸ್ಪರ್ಧೆ ಡಿ.1ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ಸಸಿಹಿತ್ಲು ಯುವಕ-ಯುವತಿ ಮಂಡಲದ ಆಶ್ರಯದಲ್ಲಿ ಯವಜನೋತ್ಸವ ನಡೆಯಲಿದೆ ಎಂದು ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ. 1ರಂದು ಬೆಳಗ್ಗೆ 9ಕ್ಕೆ ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು. ವಿಷಯಾಧಾರಿತ ಸ್ಪರ್ಧೆ, ಜನಪದ ನೃತ್ಯ, ಜನಪದ ಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ಘೋಷಣೆ, ಕರಕುಶಲ ಕಲೆ, ಕೃಷಿ ಉತ್ಪನ್ನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.27ರಂದು ಸಂಜೆ 5.30ರೊಳಗೆ adyssdk@yahoo.com ಗೆ ಇಮೇಲ್ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.1 ರಂದು ಬೆಳಗ್ಗೆ 8 ಗಂಟೆಗೆ ಸಸಿಹಿತ್ಲು ಸಂಘದ ರಂಗಮಂದಿರದಲ್ಲಿ ಮತ್ತು ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸುವವರು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ನೆಹರು ಯುವ ಕೇಂದ್ರದ ಅಧಿಕಾರಿ ಜಗದೀಶ್, ಕ್ರೀಡಾ ಇಲಾಖೆ ಅಧೀಕ್ಷಕ ಮಂಜುನಾಥ್, ದಿಲೀಪ್ ಕರ್ಕೇರ, ಅಮಿತ್ ಕುಮಾರ್ ಇದ್ದರು.