ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೆಳಸ್ತರದ ಸಮುದಾಯದ ನೇಕಾರ ಯುವಕರು ಸಂಘಟನೆಯೊಂದಿಗೆ ಯುವಶಕ್ತಿಯನ್ನು ಒಗ್ಗೂಡಿಸಿ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ನೇಕಾರ ಕೆ.ವಿ.ಅರುಣಕುಮಾರ್ ತಿಳಿಸಿದರು.ಕಿಕ್ಕೇರಿಯಲ್ಲಿ ಏರ್ಪಡಿಸಿದ್ದ ರಾಯಲ್‌ಶೆಟ್ಟಿ ನೇಕಾರ ಟೆನಿಸ್‌ಬಾಲ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನೇಕಾರ ಸಮುದಾಯ ಮುಖ್ಯವಾಹಿನಿಗೆ ಬರಲು ಉತ್ತಮ ಕ್ರೀಡಾಪಟುಗಳಾಗಲು ಉನ್ನತ ಶಿಕ್ಷಣ ಪಡೆಯಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ನೇಕಾರ ಯುವಕರನ್ನು ಒಂದೆಡೆ ಸೇರಿಸಲು ರಾಯಲ್‌ಶೆಟ್ಟಿ ನೇಕಾರ್ ಸಂಸ್ಥೆ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.ಕಿಕ್ಕೇರಿಯ ರಾಯಲ್‌ಶೆಟ್ಟಿತಂಡ ಪ್ರಥಮ, ಹೊಸಪೇಟೆ ಕುರುಹಿನಶೆಟ್ಟಿ ಬಾಯ್ಸ್ ದ್ವಿತೀಯ, ದೊಡ್ಡಬಳ್ಳಾಪುರದ ಮನು ಇಲೆವನ್ ತಂಡ ತೃತೀಯ, ಹೊಸಪೇಟೆಯ ಇಲೆವೆನ್ ತಂಡ ಚತುರ್ಥ ಬಹುಮಾನವನ್ನು ನಗದು ಹಾಗೂ ಪಾರಿತೋಷದ ಪಡೆದರು.
ಹೊಸಪೇಟೆಯ ಸೋಮು ಉತ್ತಮ ಬ್ಯಾಟ್ಸ್ ಮ್ಯಾನ್, ಕಿಕ್ಕೇರಿ ರಾಯಲ್ ಶೆಟ್ಟಿ ತಂಡದ ಮಂಜು ಉತ್ತಮ ಬೌಲರ್, ಉತ್ತಮ ಕ್ಷೇತ್ರ ಪಾಲಕರಾಗಿ ಕಿಕ್ಕೇರಿ ರಾಘವೇಂದ್ರ, ಉತ್ತಮ ವಿಕೆಟ್ ಕೀಪರ್ ಆಗಿ ಕಿಕ್ಕೇರಿಯ ಗಿರೀಶ್, ಸರಣಿ ಶ್ರೇಷ್ಟರಾಗಿ ಹೊಸಪೇಟೆ ಗೋವಿಂದರಾಜ್ ಪ್ರಶಸ್ತಿ ಪಡೆದರು. ಗ್ರಾಪಂ ಅಧ್ಯಕ್ಷ ಕೆ.ಜೆ.ಪುಟ್ಟರಾಜು, ಮಾಜಿ ಅಧ್ಯಕ್ಷರಾದ ಕೆ.ವಿ. ಅರುಣಕುಮಾರ್, ಕೆ.ಆರ್.ರಾಜೇಶ್, ಮುಖಂಡರಾದ ಕಾಶಿ ಗೋವಿಂದರಾಜು ಕೆ.ಪಿ.ಮಂಜುನಾಥ್ ಹಾಜರಿದ್ದರು.ನ.10 ರಂದು ಬೃಹತ್ ಸಸ್ಯಾಹಾರ, ಧ್ಯಾನ ಪ್ರಚಾರ ಜನಜಾಗೃತಿ ಜಾಥಾನಾಗಮಂಗಲ:
ಕರ್ನಾಟಕ ಪತ್ರೀಜಿ ವೆಜಿಟೇರಿಯನ್ ಮೂವ್‌ಮೆಂಟ್ ಹಾಗೂ ಮಂಡ್ಯ ಪಿರಮಿಡ್ ಸೊಸೈಟಿ ಸಹಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಬೃಹತ್ ಸಸ್ಯಾಹಾರ ಮತ್ತು ಧ್ಯಾನ ಪ್ರಚಾರ ಜನಜಾಗೃತಿ ಜಾಥಾ ಕಾರ್ಯಕ್ರಮವು ನ.10 ರಂದು ಪಟ್ಟಣದಲ್ಲಿ ನಡೆಯಲಿದೆ ಎಂದು ಸಸ್ಯಾಹಾರ ಜಾಥಾದ ತಾಲೂಕು ಸಂಚಾಲಕ ಹಾಗೂ ನಿವೃತ್ತ ಪ್ರಾಧ್ಯಾಪಕ ಭೈರೇಗೌಡ ತಿಳಿಸಿದ್ದಾರೆ.ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬೆಳಗ್ಗೆ 9.30ಕ್ಕೆ ಆರಂಭಗೊಳ್ಳುವ ಸಸ್ಯಹಾರ ಜನಜಾಗೃತಿ ಜಾಥಾಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಸಸ್ಯಾಹಾರದ ಮಹತ್ವ ಕುರಿತಾದ ಘೋಷಣೆಗಳೊಂದಿಗೆ ನಡೆಯಲಿರುವ ಜಾಥವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಟಿ.ಬಿ. ಬಡಾವಣೆಯ ಗಣೇಶ ದೇವಸ್ಥಾನವನ್ನು ತಲುಪಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಶಿಕ್ಷಕರ ಭವನದಲ್ಲಿ ಧ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಾಥಾದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯ ಧ್ಯಾನ ಬಂಧುಗಳು ಆಗಮಿಸುತ್ತಿದ್ದಾರೆ. ಅವರೊಟ್ಟಿಗೆ ಪಟ್ಟಣದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಹಿರಿಯ ಪತ್ರಕರ್ತ ಸಿ.ಎ.ಭಾಸ್ಕರ್ ಭಟ್, ಯೋಗ ಶಿಕ್ಷಕ ಲಕ್ಷ್ಮಣ್ ಜೀ, ನಿವೃತ್ತ ಪ್ರಾಂಶುಪಾಲ ಬಿ.ನಾಗರಾಜು, ನಿವೃತ್ತ ಶಿಕ್ಷಕ ತಿರುಮಲೇಗೌಡ, ಶಿಕ್ಷಕರಾದ ಶಿವನಂಜಪ್ಪ ಮತ್ತು ಇಂದ್ರಮ್ಮ ಇದ್ದರು.