ಸಾರಾಂಶ
ಕರಿಯಕಲ್ಲು ಯುವಶಕ್ತಿ ಸಮೂಹದ ಅಂಗಸಂಸ್ಥೆಯಾದ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಅಂಗವಾಗಿ ಅದರ ಸ್ಥಾಪಕ ನಿರ್ದೇಶಕ ದಿ.ರವೀಂದ್ರ ಬಂಗೇರ ಅವರ ನೆನಪಿಗಾಗಿ ಅವರ ಮಗಳಾದ ಪ್ರಣ್ಯಾ ರವೀಂದ್ರ ಬಂಗೇರ ಕೊಡುಗೆಯಾಗಿ ನಿರ್ಮಿಸಲಾದ ನೂತನ ಧ್ವಜಸ್ತಂಭವನ್ನು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತ್ರಿವರ್ಣ ಧ್ವಜ ಅರಳಿಸುವ ಮೂಲಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕರಿಯಕಲ್ಲು ಯುವಶಕ್ತಿ ಸಮೂಹದ ಅಂಗಸಂಸ್ಥೆಯಾದ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಅಂಗವಾಗಿ ಅದರ ಸ್ಥಾಪಕ ನಿರ್ದೇಶಕ ದಿ.ರವೀಂದ್ರ ಬಂಗೇರ ಅವರ ನೆನಪಿಗಾಗಿ ಅವರ ಮಗಳಾದ ಪ್ರಣ್ಯಾ ರವೀಂದ್ರ ಬಂಗೇರ ಕೊಡುಗೆಯಾಗಿ ನಿರ್ಮಿಸಲಾದ ನೂತನ ಧ್ವಜಸ್ತಂಭವನ್ನು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತ್ರಿವರ್ಣ ಧ್ವಜ ಅರಳಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಸಿಎ ಕಮಲಾಕ್ಷ ಕಾಮತ್, ಉಷಾ ಜಗದೀಶ್ ಶೆಣೈ, ಪುರಸಭಾ ಉಪಾಧ್ಯಕ್ಷ ನೆಕ್ಲಾಜೆಗುತ್ತು ಪ್ರಶಾಂತ್ ಕೋಟ್ಯಾನ್, ಎಜುಕೇಶನ್ ಸೊಸೈಟಿ ಅಧ್ಯಕ್ಷ ವಿಜಯ ಶೆಟ್ಟಿ, ಸಂಚಾಲಕ ಅಬ್ದುಲ್ ಖಾಲಿಕ್, ನಿರ್ದೇಶಕರಾದ ವಸಂತ ಎಂ., ರೆಂಜಾಳ ಶಾಲಾ ಶಿಕ್ಷಕರಾದ ಹರೇಂದ್ರ ರಾವ್, ಅಗ್ನಿಶಾಮಕ ದಳದ ಉದಯ ಹೆಗ್ಡೆ, ಮಹಿಳಾ ಮಂಡಲ ಅಧ್ಯಕ್ಷೆ ಪ್ರಮೀಳಾ ಪ್ರಶಾಂತ್, ಶಾಲಾ ಮುಖ್ಯ ಶಿಕ್ಷಕಿ ನಳಿನಾಕ್ಷಿ ಹೆಗ್ಡೆ, ಸಮೂಹ ಸಂಸ್ಥೆಗಳ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು.