ಸ್ಟೈಲಿಶ್ ಸ್ಟಾರ್ ಝೈದ್ ಖಾನ್, ರಚಿತಾ ರಾಮ್ ಹಾಗೂ ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ಅಭಿನಯದ ಕಲ್ಟ್‌ ಚಿತ್ರದ ಒಂದು ಹಾಡಿನ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ರಮ ನಗರದ ಹೈಸ್ಕೂಲ್ ಮೈದಾನದಲ್ಲಿ ಜ.4ರಂದು ಕೆಜಿಪಿ ಫೌಂಡೇಷನ್ ಸಹಯೋಗದಲ್ಲಿ ನಡೆಯಲಿದೆ ಎಂದು ಕೆಜಿಪಿ ಗೋಲ್ಡ್ ಪ್ಯಾಲೇಸ್‌ ಸಮೂಹ ಸಂಸ್ಥೆಗಳ ಸಂದೇಶ ರಾಯ್ಕರ್ ಹೇಳಿದರು.

- ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ನಾಯಕಿ: ಕೆಜಿಪಿ ಸಂದೇಶ್ ರಾಯ್ಕರ್‌

- - -

- ಝೈದ್ ಖಾನ್, ರಚಿತಾ ರಾಮ್‌ ಅಭಿನಯಿಸಿರುವ ದೃಶ್ಯಗಳ ಹಾಡು ಬಿಡುಗಡೆ

- ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಭಾಗಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಟೈಲಿಶ್ ಸ್ಟಾರ್ ಝೈದ್ ಖಾನ್, ರಚಿತಾ ರಾಮ್ ಹಾಗೂ ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ಅಭಿನಯದ ಕಲ್ಟ್‌ ಚಿತ್ರದ ಒಂದು ಹಾಡಿನ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ರಮ ನಗರದ ಹೈಸ್ಕೂಲ್ ಮೈದಾನದಲ್ಲಿ ಜ.4ರಂದು ಕೆಜಿಪಿ ಫೌಂಡೇಷನ್ ಸಹಯೋಗದಲ್ಲಿ ನಡೆಯಲಿದೆ ಎಂದು ಕೆಜಿಪಿ ಗೋಲ್ಡ್ ಪ್ಯಾಲೇಸ್‌ ಸಮೂಹ ಸಂಸ್ಥೆಗಳ ಸಂದೇಶ ರಾಯ್ಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಚಿತ್ರದ ನಾಯಕ ಝೈದ್ ಖಾನ್, ನಟಿಯರಾದ ರಚಿತಾ ರಾಮ್, ಮಲೈಕಾ ವಸುಪಾಲ್‌ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಯುವ ಉದ್ಯಮಿ ಸಮರ್ಥ ಎಂ.ಶಾಮನೂರು, ಕೆಜಿಪಿ ಫೌಂಡೇಷನ್ ಸಂಸ್ಥಾಪಕ ಶ್ರೀಗಂಧ ಶೇಟ್, ಚಿತ್ರದ ನಿರ್ದೇಶಕ ಅನಿಲಕುಮಾರ ಸೇರಿದಂತೆ ಇಡೀ ಚಿತ್ರತಂಡದವರು ಭಾಗವಹಿಸುವರು ಎಂದರು.

ಝೈದ್ ಖಾನ್ ಹಾಗೂ ರಚಿತಾ ರಾಮ್‌ ಅಭಿನಯಿಸಿದ ಒಂದು ಹಾಡಿನ ಬಿಡುಗಡೆ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದ ನಂತರ ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಮತ್ತು ಆಲ್‌ ಓಕೆ ಅಲೋಕ್ ತಂಡದಿಂದ ಕಲ್ಟ್ ಸಂಗೀತ ರಸಸಂಜೆ ಮನರಂಜನಾ ಕಾರ್ಯಕ್ರಮ ಜರುಗಲಿದೆ. ವಸತಿ ಸಚಿವ ಜಮೀರ್ ಅಹಮ್ಮದ್‌ ಪುತ್ರ ನಾಯಕನಾಗಿ ನಟಿಸಿರುವ ಕಲ್ಟ್‌ ಸಿನಿಮಾ ಜ.23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದರು.

ಅನಿಲಕುಮಾರ ಕಥೆ, ಚಿತ್ರಕತೆ, ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. ಎರಡು ಹಾಡುಗಳ ಹಿಟ್‌ ಲೀಸ್ಟ್ ಸೇರಿದ್ದು, ಸಂಗೀತ ನಿರ್ದೇಶಕ ಅರ್ಜುನ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಮತ್ತೊಂದು ಹಾಡಿನಲ್ಲಿ ಝನೈದ್ ಖಾನ್, ರಚಿತಾ ರಾಮ್ ಅಭಿನಯಿಸಿದ್ದಾರೆ. ಇದೇ ಹಾಡನ್ನು ದಾವಣಗೆರೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಜಿಪಿ ಫೌಂಡೇಷನ್‌ನ ಹಿತೈಷಿಗಳಾದ ಸಂಕೇತ್ ಶೇಟ್‌, ಪೃಥ್ವಿ, ರಾಘವೇಂದ್ರ, ರಾಜೇಶ್, ರಿಜ್ವಾನ್ ಇತರರು ಇದ್ದರು.

- - -

-2ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಕೆಜಿಪಿ ಫೌಂಡೇಷನ್‌ನ ಸಂದೇಶ್ ರಾಯ್ಕರ್ ಮತ್ತಿತರರು ಕಲ್ಟ್ ಸಿನಿಮಾದ ಹಾಡು ಬಿಡುಗಡೆಯ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.