ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ತಬಲ ಮಾಂತ್ರಿಕ ಝಾಕಿರ್ ಹುಸೇನ್ ಹಾಗೂ ವೃಕ್ಷ ದೇವತೆ ತುಳಸಿಗೌಡರು ನಾಡು ಕಂಡ ಅಪರೂಪದ ಸಾಧಕರು ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ, ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಹೇಳಿದರು.ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಹಾಗೂ ಬೆಂಗಳೂರಿನ ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್ ಏರ್ಪಡಿಸಿದ್ದ ತಬಲ ಮಾಂತ್ರಿಕ ಝಾಕಿರ್ ಹುಸೇನ್ ಹಾಗೂ ವೃಕ್ಷದೇವತೆ ತುಳಸಿ ಗೌಡರ ಶದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟು ಸಾವಿನ ನಡುವೆ ನಾವು ಮಾಡುವ ಸಾಧನೆಗಳು ಮಾತ್ರ ಉಳಿಯಲಿವೆ ಎನ್ನುವುದಕ್ಕೆ ಇವರ ಸಾಧನೆಗಳು ಸಾಕ್ಷಿಯಾಗಿವೆ. ಪಕ್ಕ ವಾದ್ಯಕ್ಕೆ ಸೀಮಿತವಾಗಿದ್ದ ತಬಲವಾದನವನ್ನು ಝಾಕಿರ್ ಹುಸೇನ್ ವಿಶ್ವಕ್ಕೆ ಪರಿಚಯಿಸಿದರು. ವಿಶ್ವಾದ್ಯಂತ ಸಹಸ್ರಾರು ಶಿಷ್ಯ ಸಮೂಹವನ್ನು ಹೊಂದಿದ್ದ ಹುಸೇನ್ ತಮ್ಮತಬಲವಾದನದ ಮೋಡಿಯಲ್ಲಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.ಪದ್ಮಶ್ರೀ ಪುರಸ್ಕೃತಿ ವೃಕ್ಷ ದೇವತೆ ತುಳಸಿಗೌಡ ಅನಕ್ಷರಸ್ಥಳಾಗಿ ಬಡತನದ ಬೇಗೆಯ ಗ್ರಾಮೀಣ ಪ್ರದೇಶದ ಅಪ್ಪಟ ಪರಿಸರ ಪ್ರೇಮಿಯಾಗಿದ್ದರು. ಸಹಸ್ರಾರು ಗಿಡಮರ ಬೆಳೆಸಿ ಪರಿಸರ ನಾಶದ ವೇಳೆಗೆ ಶುದ್ಧಗಾಳಿ ನೀಡುವ ದೇವತೆಯಾಗಿದ್ದು ಇವರ ಆದರ್ಶಗುಣಯುವ ಪೀಳಿಗೆ ಪಾಲಿಸಿದರೆ ವೃಕ್ಷಸಂಪತ್ತು, ಪರಿಸರ, ಆರೋಗ್ಯಎಲ್ಲವೂ ಉಳಿಯಲಿದೆ. ಪರಿಸರ, ಸಂಗೀತಾ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿದೆ ಎಂದು ತಿಳಿಸಿದರು.
ಪರಿಸರಗೀತೆಯನ್ನು ಮಕ್ಕಳೊಂದಿಗೆ ಹಾಡಿ ಪರಿಸರಪ್ರೇಮ ಮೆರೆದರು. ಈ ವೇಳೆ ಉದ್ಯಮಿ ಆದರ್ಶ, ಐಟಿ ಇನ್‌ಫರ್ಮೆಷನರ್ ನೆಲಮಂಗಲ ಸುಬ್ರಹ್ಮಣ್ಯ, ಸತೀಶ್, ತ್ರಿವೇಣಿ, ಕವಿತಾ ಇದ್ದರು.ಡಿ.19,20 ರಂದು ನೀರು ಸರಬರಾಜು ವ್ಯತ್ಯಯ
ಮಂಡ್ಯ:ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಶ್ರೀರಂಗಪಟ್ಟಣ ಸಮೀಪದ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ ತಾಲೂಕು ವ್ಯಾಪ್ತಿಗೆ ಸೇರಿದ 66/11 ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಯನ್ನು ಸೆಸ್ಕ್ ವತಿಯಿಂದ ಡಿ.19 ರಂದು ಹಮ್ಮಿಕೊಂಡಿರುವುದರಿಂದ ಸದರಿ ದಿನದಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆಯ ಮೂಲ ಸ್ಥಾವರಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿದೆ. ಮಂಡ್ಯ ನಗರದ ಸಾರ್ವಜನಿಕರಿಗೆ ಡಿ.19 ಹಾಗೂ 20 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಡ್ಯ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.ಡಿ.23 ರಂದು ಜನ ಸಂಪರ್ಕ ಸಭೆ
ಮಂಡ್ಯ: ಮಂಡ್ಯ ಉಪ ವಿಭಾಗ, ಕೊತ್ತತ್ತಿ ಉಪ ವಿಭಾಗ, ಕೆರಗೋಡು ಉಪ-ವಿಭಾಗದ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳ ಚರ್ಚಿಸಲು ಡಿ.23 ರ ಬೆಳಗ್ಗೆ 11 ಗಂಟೆಗೆ ಅಧೀಕ್ಷಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಮಂಡ್ಯ ವಿಭಾಗ ಕಛೇರಿ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಸದರಿ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ಮತ್ತು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಲು ಮಂಡ್ಯ ಕಾ ಮತ್ತು ಪಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.