ಸಾರಾಂಶ
, ಕ್ಷೇತ್ರಕ್ಕೆ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ನನ್ನ ಅವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವಲ್ಲಿ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಪಾಟೀಲ್ ಆರೋಪಿಸಿದ್ದಾರೆ
ಮಸ್ಕಿ:ಆರ್.ಬಸನಗೌಡ ತುರ್ವಿಹಾಳ ಶಾಸಕರಾಗಿ ಮೂರು ವರ್ಷ ಕಳೆದರು ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆರೋಪಿಸಿದರು.
ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರಕ್ಕೆ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ನನ್ನ ಅವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವಲ್ಲಿ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಬಪ್ಪೂರು ಹೊಕ್ರಾಣಿ ರಸ್ತೆ ಡಾಂಬರಿಕರಣವಾಗಿಲ್ಲ, ಜಾಲವಾಡಗಿ ರಸ್ತೆ ಪೂರ್ಣಗೊಳಿಸಿಲ್ಲ, ನಾಗಡದಿನ್ನಿ ಮತ್ತು ಗೂಗೆಬಾಳ ಬಳಿ ತುಂಗಭದ್ರ ಎಡದಂಡೆ ನಾಲೆ ಬ್ರೀಜ್ ಕಾಮಗಾರಿ ಕುಂಠಿತಗೊಂಡಿದೆ ಎಂದರು.ಮೊಸಳೆ ಕಣ್ಣಿರು:
ಪಾಮನಕಲ್ಲೂರು ಇತರೆ ಹಳ್ಳಿಗಳಿಗೆ ನೀರಾವರಿ ಯೋಜನೆ ರೂಪಿಸಲು ಬಜೆಟ್‌ನಲ್ಲಿ ₹900 ಕೋಟಿ ಇಟ್ಟಿರುವುದು ಈ ಭಾಗದ ರೈತರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಲ್ಲಿ ವಿಚಾರಿಸಿದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ 4 ತಿಂಗಳು ಕಾಯಬೇಕು. ಪ್ರೈವೇಟ್ ಕಂಪನಿಗೆ ಸರ್ವೇ ಮಾಡಿಸಬೇಕು. ನಂತರ ಡಿಪಿಆರ್ ಆಗಬೇಕು ಎನ್ನುತ್ತಾರೆ. ಇದು ರೈತರ ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.ತಾಂತಿಕ್ರವಾಗಿ 5ಎ ಕಾಲುವೆ ಜಾರಿಗೆ ಸಾಧ್ಯವಿಲ್ಲ ಎಂಬುದನ್ನು ಅರಿತು ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆಗೆ ಅಂದಿನ ಸರ್ಕಾರ ಡಿಪಿಆರ್ ಮಾಡಿಸಿತ್ತು. ಅದನ್ನು ಕೈ ಬಿಟ್ಟು ಈಗ ಮತ್ತೆ ಸರ್ವೇ ಮಾಡುತ್ತೇವೆ ಎನ್ನುತ್ತಿರುವುದು ನೋಡಿದರೆ ಈ ಸರ್ಕಾರದ ಹಸಿ ಸುಳ್ಳು ಹೇಳುವದನ್ನು ರೈತರು ಅರ್ಥಮಾಡಿಕೊಳ್ಳಬೇಕು ಎಂದರು.