ಚಿಕ್ಕಮಗಳೂರುವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದ್ದು, ಪ್ರಸಕ್ತ ವರ್ಷ ಚಿಕ್ಕಮಗಳೂರು ಜಿಲ್ಲೆಯ 9 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಬಹುತೇಕ ಈ ಶಾಲೆಗಳು ಮುಚ್ಚುವ ಆತಂಕ ನಿರ್ಮಾಣಗೊಂಡಿದೆ.
ಇದೇ ಕಾರಣಕ್ಕೆ ಕಳೆದ ಬಾರಿ 21 ಶಾಲೆಗಳು ಮುಚ್ಚಿದ್ದವು
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದ್ದು, ಪ್ರಸಕ್ತ ವರ್ಷ ಚಿಕ್ಕಮಗಳೂರು ಜಿಲ್ಲೆಯ 9 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಬಹುತೇಕ ಈ ಶಾಲೆಗಳು ಮುಚ್ಚುವ ಆತಂಕ ನಿರ್ಮಾಣಗೊಂಡಿದೆ.ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 1,888 ಶಾಲೆಗಳಿವೆ. ಈ ಪೈಕಿ 1,354 ಸರ್ಕಾರಿ ಶಾಲೆಗಳಿವೆ. ಅದರಲ್ಲಿ 597 ಪ್ರಾಥಮಿಕ, 641 ಹಿರಿಯ ಪ್ರಾಥಮಿಕ ಹಾಗೂ 116 ಪ್ರೌಢ ಶಾಲೆಗಳಿವೆ. ಸರ್ಕಾರ ಉಚಿತ ಶಿಕ್ಷಣ ದೊಂದಿಗೆ ಸಮವಸ್ತ್ರ, ಶ್ಯೂ, ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸಕ್ತ, ನೋಟ್ ಬುಕ್ ಸೇರಿದಂತೆ ಎಲ್ಲರೀತಿ ಸೌಲಭ್ಯ ಒದಗಿಸಿದರೂ ಸರ್ಕಾರಿ ಶಾಲೆಗೆ ದಾಖಲಾತಿ ಪ್ರಮಾಣ ಮಾತ್ರ ಕ್ಷೀಣಿಸುತ್ತಿದೆ. ಹೀಗಾಗಿ, ಪ್ರತಿ ವರ್ಷ ಹತ್ತಾರು ಸರ್ಕಾರಿ ಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಮುಚ್ಚಿವ ಸ್ಥಿತಿಯಲ್ಲಿ 9 ಪ್ರಾಥಮಿಕ ಶಾಲೆ
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರೋಬ್ಬರಿ 21 ಸರ್ಕಾರಿ ಶಾಲೆಗಳು ಮುಚ್ಚಲಾಗಿತ್ತು. ಈ ಪೈಕಿ 19 ಶಾಲೆಗಳು 1 ರಿಂದ 5ನೇ ತರಗತಿ ಶಾಲೆಗಳಾಗಿವೆ. ಉಳಿದ ಎರಡು 1 ರಿಂದ 7ನೇ ತರಗತಿ ಶಾಲೆಗಳಾಗಿವೆ. ಈ ಬಾರಿಯೂ 9 ಪ್ರಾಥ ಮಿಕ ಶಾಲೆಗಳಲ್ಲಿ ದಾಖಲಾತಿಯೇ ಆಗಿಲ್ಲ, ಹೀಗಾಗಿ, ಬಹುತೇಕ 9 ಶಾಲೆಗಳು ಮುಚ್ಚುವ ಸಾಧ್ಯತೆ ಇದೆ. ದಾಖಲಾತಿ ಆಗದ ಎಲ್ಲ 9 ಶಾಲೆಗಳೂ ಸಹ 1 ರಿಂದ 5ನೇ ತರಗತಿಯ ಶಾಲೆಗಳಾಗಿವೆ.15 -16 ಹೊಸ ಕೆಪಿಎಸ್ ಶಾಲೆ, ಆದರೂ ದಾಖಲಾತಿ ಕಡಿಮೆ
ಜಿಲ್ಲೆಯಲ್ಲಿ 15 ರಿಂದ 16 ಹೊಸ ಕೆಪಿಎಸ್ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ. ಈ ಮೂಲಕ ಜಿಲ್ಲೆಯ ಕೆಪಿಎಸ್ ಶಾಲೆಗಳ ಸಂಖ್ಯೆ 24ಕ್ಕೆ ಹೆಚ್ಚಾಗಲಿದೆ. ಅದರೊಂದಿಗೆ ಜಿಲ್ಲೆಯಲ್ಲಿ ಈಗಾಗಲೇ ಪಿಎಂಶ್ರೀ ಹಾಗೂ 136 ದ್ವಿಭಾಷಾ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷ ಎಲ್ಲೆಡೆ ದ್ವಿಭಾಷಾ ತರಗತಿ ಆರಂಭಿಸಲಾಗಿದೆ. ಆದರೂ ದಾಖಲಾತಿಯಲ್ಲಿ ಇಳಿಕೆಯಾಗಿದೆ.ಈ ವರ್ಷ ದಾಖಲಾತಿಯಲ್ಲಿ 5 ಸಾವಿರ ಇಳಿಕೆ
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ 1 ರಿಂದ 10ನೇ ತರಗತಿ ವರೆಗೆ ಒಟ್ಟು 54,231 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾತಿ ಪಡೆದುಕೊಂಡಿದ್ದರು. ಈ ಬಾರಿ ಜೂನ್ ಅಂತ್ಯಕ್ಕೆ 49,323 ವಿದ್ಯಾರ್ಥಿಗಳು ಮಾತ್ರ ದಾಖ ಲಾತಿ ಪಡೆದುಕೊಂಡಿದ್ದು, ಕಳೆದ ವರ್ಷಕ್ಕಿಂತ ಬರೋಬ್ಬರಿ 4,908 ವಿದ್ಯಾರ್ಥಿಗಳು ಕಡಿಮೆ ಆಗಿರುವುದು ಕಂಡು ಬಂದಿದೆ. ಪ್ರತಿ ಹಂತದಲ್ಲಿಯೂ ಇಳಿಕೆ ಕೇವಲ ಒಂದನೇ ತರಗತಿ ದಾಖಲಾತಿಯಲ್ಲಿ ಮಾತ್ರ ಇಳಿಕೆಯಾಗಿಲ್ಲ. ಕಳೆದ ವರ್ಷದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬೇರೆ ಬೇರೆ ತರಗತಿ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ವರ್ಗಾವಣೆ ಪತ್ರ ಪಡೆದು ಕೊಂಡು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡಿರುವುದು ಸರ್ಕಾರಿ ಶಾಲಾ ದಾಖಲಾತಿ ಅಂಕಿ ಅಂಶದಲ್ಲಿ ಕಂಡು ಬಂದಿದೆ. ವಿಶೇಷ ಎಂದರೆ, 6ನೇ ತರಗತಿಯಲ್ಲಿ ಮಾತ್ರ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.2025-26ರಲ್ಲಿ 21 ಶಾಲೆ ಬಂದ್
ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 2025-26ನೇ ಸಾಲಿನಲ್ಲಿ ಬೀರೂರು ಬ್ಲಾಕ್‌ನ 3, ಚಿಕ್ಕಮಗಳೂರಿನ 9, ಕಡೂರಿನ 6, ಮೂಡಿಗೆರೆ ಹಾಗೂ ತರೀಕೆರೆ ಬ್ಲಾಕ್ ತಲಾ 2 ಶಾಲೆಯಂತೆ ಒಟ್ಟು 21 ಶಾಲೆಗಳನ್ನು ಅಧಿಕೃತವಾಗಿ ಬಂದ್ ಮಾಡ ಲಾಗಿದೆ.---- ಬಾಕ್ಸ್----
ಖಾಸಗಿ ಶಿಕ್ಷಣ ಸಂಸ್ಥೆಗಳ ವಿಪರೀತ ಹಾವಳಿಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಸಹ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ಮತ್ತೊಂದು ಬಲವಾದ ಕಾರಣ. ಸರ್ಕಾರ ಬಹುತೇಕ ನಿಯಮ ಗಾಳಿ ತೂರಿ ದಾಖಲಾತಿ ಪ್ರಕ್ರಿಯೆ ನಡೆಸುತ್ತಿರುವುದು. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಾತ್ರ ದಾಖಲಾತಿಗೆ ಅವಕಾಶ ಇದೆ. ಆದರೆ, ಖಾಸಗಿ ಶಾಲೆಗಳು ಜನವರಿ, ಫೆಬ್ರವರಿ ಯಿಂದಲೇ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಿಸುತ್ತಾರೆ. ಹೀಗಾಗಿ, ಸರ್ಕಾರಿ ಶಾಲಾ ದಾಖಲಾತಿ ಕಡಿಮೆ ಆಗುವುದಕ್ಕೆ ಪ್ರಮುಖ ಕಾರಣವಾಗಿದೆ.
-- ಬಾಕ್ಸ್ ---ಸರ್ಕಾರಿ ಶಾಲಾ ಶಿಕ್ಷಕರಿಗೆ ಹಲವು ಜವಾಬ್ದಾರಿ
ಸರ್ಕಾರಿ ಶಾಲೆಯಲ್ಲಿ ಉತ್ತಮ ಮತ್ತು ಸಮರ್ಥ ಶಿಕ್ಷಕರಿದ್ದರೂ ಬಿಸಿಯೂಟ, ಮೊಟ್ಟೆ ವಿತರಣೆ, ತರಕಾರಿ ತೆಗೆದುಕೊಂಡು ಬರಲು ಜನಗಣತಿ, ಚುನಾವಣೆ, ಸರ್ವೇ ಕಾರ್ಯ, ಇದೀಗ ಎಸ್‌ಐಆರ್ ನಂತರ ಸರ್ಕಾರದ ವಿವಿಧ ಕಾರ್ಯಗಳಲ್ಲಿ ಕಡ್ಡಾಯ ವಾಗಿ ಭಾಗವಹಿಸಬೇಕಿದೆ. ಈ ಕಾರಣದಿಂದ ಸಾರ್ವಜನಿಕರು ಸರ್ಕಾರಿ ಶಾಲೆಯಲ್ಲಿ ಚನ್ನಾಗಿ ಬೋಧನೆ ಇರುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲಾಗುತ್ತಿದೆ ಎನ್ನಲಾಗಿದೆ.--ಕೋಟ್--
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಸೇರ್ಪಡೆ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಕ್ರಮವಹಿಸಲಾಗಿದೆ. 15 ರಿಂದ 16 ಕೆ.ಪಿಎಸ್ ಶಾಲೆ ಆರಂಭಿಸಲಾಗಿದೆ. ಎಲ್‌ಕೆಜಿ, ಯುಕೆಜಿ ಆರಂಭಕ್ಕೂ ಕ್ರಮ ಕೈಗೊಳ್ಳಲಾಗಿದೆ.- ತಿಮ್ಮರಾಜು, ಡಿಡಿಪಿಐ, ಚಿಕ್ಕಮಗಳೂರು
-- ಬಾಕ್ಸ್---ಸರ್ಕಾರಿ ಶಾಲೆ ಬಂದ್ ಹಾಗೂ ದಾಖಲಾತಿ ವಿವರ
ಬ್ಲಾಕ್‌ಶೂನ್ಯ ದಾಖಲಾತಿ ಶಾಲೆಕಳೆದ ವರ್ಷ ಮುಚ್ಚಿದ ಶಾಲೆಪ್ರಸಕ್ತ ವರ್ಷ ದಾಖಲಾತಿಕಳೆದ ವರ್ಷ ದಾಖಲಾತಿದಾಖಲಾತಿ ಇಳಿಕೆ ಸಂಖ್ಯೆಬೀರೂರು236,1736,815642
ಚಿಕ್ಕಮಗಳೂರು2911,29212,5241,232ಕಡೂರು267,5338,315782
ಕೊಪ್ಪ004,3814,694313ಮೂಡಿಗೆರೆ025,9766,563587
ಎನ್.ಆರ್.ಪುರ103,3543,650296ಶೃಂಗೇರಿ001,9132,087174
ತರೀಕೆರೆ228,7019,583882ಒಟ್ಟು092149,323542314,908ಬಾಕ್ಸ್
ಒಟು 104ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ದಾಖಲಾತಿಚಿಕ್ಕಮಗಳೂರು ಜಿಲ್ಲೆಯ ಒಟ್ಟು 104 ಸರ್ಕಾರಿ ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ಮಕ್ಕಳು ದಾಖಲಾತಿ ಆಗಿರುವುದು ಕಂಡು ಬಂದಿದೆ. ಬೀರೂರು ಬ್ಲಾಕ್‌ನ 14 ಶಾಲೆ, ಚಿಕ್ಕಮಗಳೂರು ಬ್ಲಾಕ್‌ನಲ್ಲಿ 19, ಕಡೂರು ಬ್ಲಾಕ್‌ನಲ್ಲಿ 27, ಮೂಡಿಗೆರೆ 17, ಎನ್,ಆರ್,ಪುರ 5, ತರೀಕೆರೆ 19 ಹಾಗೂ ಶೃಂಗೇರಿಯಲ್ಲಿ 1 ಶಾಲೆಯಲ್ಲಿ ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.
----ಬಾಕ್ಸ್---ಶೂನ್ಯ ದಾಖಲಾತಿ ಶಾಲೆ
ಕಡೂರು ತಾಲೂಕಿನ ಅಂಡೇನಹಳ್ಳಿ , ಕನ್ನೇನಹಳ್ಳಿ, ಕೆ.ಚೋಮನಹಳ್ಳಿ, ಎಂ.ಜಕ್ಕನಹಳ್ಳಿ, ಚಿಕ್ಕಮಗಳೂರು ತಾಲೂಕಿನ ಶಿವಗಂಗೆ, ಗಂಜಲಗೋಡು, ಎನ್,ಆರ್‌ಪುರದ ನೇಮನಹಳ್ಳಿ, ತರೀಕೆರೆ ತಾಲೂಕಿನ ಬಂಡೆ ಕಾಲೋನಿ ಹಾಗೂ ಕುರುಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನಲ್ಲಿ ಶೂನ್ಯ ದಾಖಲಾತಿ ಆಗಿದೆ.