69 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

| Published : Nov 01 2024, 12:07 AM IST

ಸಾರಾಂಶ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 69 ಮಂದಿ ಸಾಧಕರಿಗೆ ತುಮಕೂರು ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನ.1 ರಂದು ಬೆಳಿಗ್ಗೆ ಸಾಧಕರನ್ನು ಸನ್ಮಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ತುಮಕೂರುವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 69 ಮಂದಿ ಸಾಧಕರಿಗೆ ತುಮಕೂರು ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನ.1 ರಂದು ಬೆಳಿಗ್ಗೆ ಸಾಧಕರನ್ನು ಸನ್ಮಾನಿಸಲಾಗುವುದು. ರಂಗಭೂಮಿ ಕ್ಷೇತ್ರದಿಂದ ನಟರಾಜ ಹೊನ್ನವಳ್ಳಿ, ಲಕ್ಷ್ಮೀನಾರಾಯಣ ಯಾದವ್, ಕೆ.ಸಿ. ರಾಜಣ್ಣ, ಜಿ.ಎಲ್. ಮಹೇಶ್, ರಾಜಣ್ಣ ಟಿ.ಪಿ., ಜಿ. ತಿಮ್ಮಗಿರಿಗೌಡಯ್ಯ, ಎಸ್. ರಾಜಣ್ಣ, ರಾಜೇಶ್ವರಿ, ಎಚ್.ಆರ್. ರಂಗಪ್ಪ, ಚಿಕ್ಕಪ್ಪಯ್ಯ, ರಾಮಕೃಷ್ಣಮೂರ್ತಿ, ರಂಗರಾಜು ಜಿ.ಎನ್. ಜನಪದ ಯಕ್ಷಗಾನ ಕ್ಷೇತ್ರದಿಂದ ಕದರಮ್ಮ, ಸಿ.ವಿ. ವೀರೇಶ್ ಕುಮಾರ್, ಎಂ.ಸಿ. ನರಸಿಂಹಮೂರ್ತಿ, ಎಜಿ. ನಾಗರಾಜು, ಹುಚ್ಚಮ್ಮ, ಡಿಸಿ. ಕುಮಾರ್. ಪತ್ರಿಕೋದ್ಯಮ ಕ್ಷೇತ್ರದಿಂದ ಎಂ. ರಮೇಶ್, ಸಿ.ಟಿ. ಮೋಹನರಾವ್, ಪರಮೇಶ್ ಎಚ್.ಎಸ್., ವೆಂಕಟಾಚಲ ಎಚ್.ವಿ., ಮಲ್ಲಿಕಾರ್ಜುನ ದುಂಡ, ಲೋಕೇಶ್, ಪಿ.ಎನ್. ಮಂಜುನಾಥ. ಸಂಗೀತ, ನೃತ್ಯದಿಂದ ಜಿ.ಎಸ್. ಶ್ರೀಧರ್, ವಾಣಿ ಸತೀಶ, ಟಿ.ಜಿ. ಲೋಕೇಶ ಬಾಬು. ಸಮಾಜ ಸೇವೆ ಕ್ಷೇತ್ರದಿಂದ, ಗಾಯತ್ರಿ ನಾರಾಯಣ್ ಸಿ.ಎ, ಎ.ಆರ್. ರೇಣುಕಾನಂದ, ಡಾ. ಮುಕುಂದ ಎಲ್, ಡಾ. ನಾಗಭೂಷಣ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಪಂಡಿತ ಜವಹರ್, ಕೆ.ಎಸ್. ಆಶಾ, ರಂಗಸ್ವಾಮಿ. ಕ್ರೀಡಾ ಕ್ಷೇತ್ರದಿಂದ ಲೆಪ್ಟಿನೆಂಟ್ ಪ್ರದೀಪ್ ಎಸ್, ಮಹೇಶ್ ಬಿ.ಆರ್, ರುದ್ರೇಶ್ ಕೆ.ಆರ್. ಸಾಹಿತ್ಯ ಕ್ಷೇತ್ರದಿಂದ ಗಂಗಾಧರಯ್ಯ ಎಸ್, ಡಾ. ಕರಿಗೌಡ ಬೀಚನಹಳ್ಳಿ, ತುಂಬಾಡಿ ರಾಮಯ್ಯ, ಮಿರ್ಜಾ ಬಷೀರ್, ವೈ. ನರೇಶಬಾಬು, ಸಣ್ಣರಂಗಮ್ಮ. ಶಿಕ್ಷಣ ಕ್ಷೇತ್ರದಿಂದ ಪ್ರೊ. ಕೆ. ಜಯರಾಮ್, ಕರಿಯನಾಯ್ಕ, ಶ್ರೀನಿವಾಸಮೂರ್ತಿ ಆರ್, ಟಿ.ಆರ್. ಲೀಲಾವತಿ, ಎನ್.ಬಿ. ಪ್ರದೀಪಕುಮಾರ್, ಪುಟ್ಟರಂಗಪ್ಪ. ಚಿತ್ರಕಲೆ, ಶಿಲ್ಪಕಲೆ ಕ್ಷೇತ್ರದಿಂದ ಎಂ.ಎಸ್. ಶಿವರುದ್ರಯ್ಯ, ವಿಷ್ಣಕುಮಾರ್, ರವೀಶ್ ಕೆ.ಎನ್. ಕೃಷಿ ಕ್ಷೇತ್ರದಿಂದ ಅರುಣಾ ಆರ್, ಸಿದ್ದಗಂಗಯ್ಯ ಹೊಲತಾಳು. ಪರಿಸರ ಕ್ಷೇತ್ರದಿಂದ ಬಿ.ವಿ. ಗುಂಡಪ್ಪ, ತಳ ಸಮುದಾಯ ಸಂಘಟನೆಯಿಂದ ಹಂದಿ ಜೋಗಿ ರಾಜಣ್ಣ, ಸುಡುಗಾಡು ಸಿದ್ದ ವೆಂಕಟೇಶಯ್ಯ, ಶಾಂತರಾಜು. ಸಂಘ ಸಂಸ್ಥೆ, ಕನ್ನಡ ಪರ ಟಿ.ಎಂ. ಮಹೇಶ ಕುಮಾರ್, ಸಿ.ಬಿ. ರೇಣುಕಾಸ್ವಾಮಿ, ದೊಡ್ಡಯ್ಯ ಸಿ, ರಾಜೇಶ್ ಈ, ರಾಜೇಶ್ ಜಿ.ಎಲ್. ಕನ್ನಡ ಪ್ರಕಾಶ್. ಛಾಯಾಗ್ರಹಣದಿಂದ ಎನ್. ವೆಂಕಟೇಶ್, ಸಂಘ ಸಂಸ್ಥೆ ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಶಾಖೆ.