ಜೋಯಿಡಾ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

| Published : Feb 24 2024, 02:35 AM IST

ಜೋಯಿಡಾ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಾ. 2ರಂದು ನಡೆಯಲಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ಬಿಡುಗಡೆ ಮಾಡಿದರು.

ಜೋಯಿಡಾ:

ತಾಲೂಕಿನ ರಾಮನಗರದಲ್ಲಿ ಮಾ. 2ರಂದು ನಡೆಯಲಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಶ್ರೀಮಂತ ಸಂಸ್ಕೃತಿ ಇದೆ. ಗಡಿ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ. ಇದನ್ನು ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಆಚರಿಸಲಾಗುತ್ತದೆ ಎಂದರು.

ತಾಪಂ ಇಒ ಎನ್. ಭಾರತಿ ಮಾತನಾಡಿ, ನಾಡಹಬ್ಬ ಯಶಸ್ವಿಯಾಗಿ ಆಚರಿಸಬೇಕಾಗಿದೆ. ಪೂರ್ವ ಸಿದ್ಧತೆಗಳು ಸಮಗ್ರವಾಗಿ ನಡೆಸಿಕೊಳ್ಳಬೇಕು, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಅಂತೋನಿ ಜಾನ್ ಮಾತನಾಡಿ, ತಾಲೂಕಿನ ಸಂಸ್ಕೃತಿ, ಭೌಗೋಳಿಕ ಪರಿಸರದ ಚಿತ್ರಣದ ಜತೆ, ಸೂಪಾವನ್ನು ನೆನಪಿಸುವ ಧಾರ್ಮಿಕ ಕುರುಹುಗಳನ್ನು ಲಾಂಚನ ಒಳಗೊಂಡಿರುವುದು ಹೆಮ್ಮೆಯ ಸಂಗತಿ. ಇದು ಸೂಪಾ ನಿರಾಶ್ರಿತರ ಅಸ್ಮಿತೆಯ ಪ್ರತೀಕ ಎಂದರು.

ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ, ಗಡಿಯಲ್ಲಿ ಕನ್ನಡದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸೋಣ ಎಂದರು.ವೇದಿಕೆಯಲ್ಲಿ ಸುಭಾಷ ಗಾವಡಾ, ಅರುಣ ಕಾಮರೆಕರ, ಸಂತೋಷ ಸಾವಂತ ಪ್ರೇಮಾನಂದ ವೇಳಿಪ, ತುಳಸಿದಾಸ್ ವೆಳಿಪ, ಯಶವಂತ್ ನಾಯಕ, ಮಾದೇವ ಹಳದನಕರ, ಜಿ.ವಿ. ಭಟ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.