ಸಾರಾಂಶ
ಜಿಪಂ ಸಿಇಓ ಅವರು, ಹೇಮನೂರು ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯವನ್ನು ಪರಿಶೀಲಿಸಿ ಮಕ್ಕಳ ಶಿಕ್ಷಣ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಪ್ರೌಢಶಾಲೆಯ ಪ್ರಾಂಶುಪಾಲರಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಹೇಮನೂರು ಗ್ರಾಮ ಪಂಚಾಯ್ತಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು.ಗ್ರಾಮ ಪಂಚಾಯತ್ ಕೇಂದ್ರ ಹೇಮನೂರು ಸೇರಿದಂತೆ ಶಖಾಪುರ ಎಸ್.ಹೆಚ್., ಹಾಲಗೇರಿ, ಲಿಂಗದಳ್ಳಿ ಎಸ್.ಹೆಚ್.ಗಳ ಜನರು ತಮ್ಮ ಗ್ರಾಮದಲ್ಲಿರುವ ಸಮಸ್ಯೆಗಳ ಹೂರಣವನ್ನು ತೆಗೆದಿಟ್ಟರು. ಕೆಲ ವರ್ಷಗಳಿಂದ ಚರಂಡಿ ಹೂಳೆತ್ತಿಲ್ಲ. ಗ್ರಾಮಗಳ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಶಾಲಾ ಶೌಚಾಲಯ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಸಮುದಾಯ ಶೌಚಾಲಯ ಇಲ್ಲದಿರುವ ಬಗ್ಗೆ ಜನರು ಜಿಪಂ ಸಿಇಓ ಅವರ ಗಮನಕ್ಕೆ ತಂದರು. ಶೀಘ್ರದಲ್ಲೇ ಜನರು ನೀಡಿರುವ ದೂರುಗಳನ್ನು ಬಗೆಹರಿಸಿ ವರದಿ ಸಲ್ಲಿಸಬೇಕು ಎಂದು ಪಿಡಿಓಗೆ ಸೂಚಿಸಿದರು.
ಬಳಿಕ ಜಿಪಂ ಸಿಇಓ ಅವರು, ಹೇಮನೂರು ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯವನ್ನು ಪರಿಶೀಲಿಸಿ ಮಕ್ಕಳ ಶಿಕ್ಷಣ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಪ್ರೌಢಶಾಲೆಯ ಪ್ರಾಂಶುಪಾಲರಿಗೆ ಸೂಚಿಸಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಗ್ರಾಪಂ ಅಧ್ಯಕ್ಷೆ ಶರಣಮ್ಮ ಮಲ್ಲಪ್ಪ, ಸದಸ್ಯರಾದ ದೇವೇಮದ್ರಪ್ಪ ಮಕಾಶಿ, ಮಲಕಣ್ಣ ದೇಶಾಯಿ, ಮೌನೇಶ ದಳಪತಿ, ವೆಂಕಮ್ಮ ಗಣಪತಿ, ಗ್ರಾಮ ಮುಖಂಡರು ರವಿಗೌಡ, ಪಿಡಿಒ ಬಲಭೀಮರಾವ್ ಕುಲಕರ್ಣಿ, ಪ್ರಾಥಮಿಕ ಆರೋಗ್ಯದ ಕೇಂದ್ರದ ಪ್ರೌಢಾಶಾಲೆ ಪ್ರಾಂಶುಪಾಲರು, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರು, ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.