ಗ್ರಾಮಗಳ ಕಡೆ ಅಧಿಕಾರಿಗಳ ನಡೆ ಎಂಬ ಅಭಿಯಾನ ಆರಂಭಿಸಿದ್ದೇನೆ. ಬೆಳಿಗ್ಗೆ ೬ ರಿಂದ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಜೊತೆ ಸಂವಾದ ನಡೆಸುತ್ತೇನೆ. ಪ್ರತಿದಿನ ಜಿಲ್ಲೆಯ ಮೂರು-ನಾಲ್ಕು ಗಾಪಂಗಳನ್ನು ಭೇಟಿ ಮಾಡುತ್ತೇನೆ. ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಗ್ರಾಮಗಳ ಕಡೆ ಅಧಿಕಾರಿಗಳ ನಡೆ ಎಂಬ ಅಭಿಯಾನ ಆರಂಭಿಸಿದ್ದೇನೆ. ಬೆಳಿಗ್ಗೆ ೬ ರಿಂದ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಜೊತೆ ಸಂವಾದ ನಡೆಸುತ್ತೇನೆ. ಪ್ರತಿದಿನ ಜಿಲ್ಲೆಯ ಮೂರು-ನಾಲ್ಕು ಗಾಪಂಗಳನ್ನು ಭೇಟಿ ಮಾಡುತ್ತೇನೆ. ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.

ಗಾಮಗಳಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಕಳಪೆ ಹಿನ್ನೆಲೆ ಮಾಹಿತಿ ತಿಳಿದು ಗ್ರಾಪಂ ಪಿಡಿಒಗಳ ತಿಳಿಸದೆ ಏಕಾ ಏಕಿ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದರು.

ತಾಲೂಕಿನ ಹಾಲೇಕಲ್ಲು, ಬಿಳಿಚೋಡು, ಪಲ್ಲಾಗಟ್ಟೆ ವ್ಯಾಪ್ತಿಯ ಗ್ರಾಮಗಳ ಜೆಜೆಎಂ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿ ವೀಕ್ಷಿಸಲು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಂಗಳವಾರ ಬೆಳಿಗ್ಗೆ ೬ ಗಂಟೆಗೆ ಗ್ರಾಮಗಳಲ್ಲಿದ್ದು ಚಳಿಯಿಂದ ಗಾಢ ನಿದ್ರೆಯಲ್ಲಿ ಮಲಗಿದ್ದ ಅಧಿಕಾರಿಗಳನ್ನು ಎಚ್ಚರಿಸಿದರು.

ಜೆಜೆಎಂ ಕಾಮಗಾರಿ ಕಳಪೆ ಹಿನ್ನೆಲೆ ಮಾಹಿತಿ ತಿಳಿದು, ಗ್ರಾಪಂ ಪಿಡಿಒಗಳ ತಿಳಿಸದೆ ಏಕಾ ಏಕಿ ಗ್ರಾಮಗಳಿಗೆ ಭೇಟಿ ನೀಡಿದರು. ಸಿಇಒ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಧಿಕಾರಿಗಳು ಧಾವಂತದಲ್ಲೇ ಬಂದರು. ಹಾಲೇಕಲ್ಲು, ಬಿಳಿಚೋಡು ಗ್ರಾಮದಲ್ಲಿ ಮನೆ ಮನೆ ಗಂಗೆ ಯೋಜನೆ, ಶಾಲೆ, ಅಂಗನವಾಡಿ, ಸಾರ್ವಜನಿಕ ಆಸ್ಪತ್ರೆ, ಗ್ರಂಥಾಲಯ ಮತ್ತು ಗ್ರಾಪಂ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಜೆಜೆಎಂ ಯೋಜನೆ ಸರಿದಾರಿಗೆ ತರಲು ಕ್ರಮಗೊಳ್ಳುತ್ತೇನೆ. ಇಲಾಖೆಗಳಲ್ಲಿ ನ್ಯೂನ್ಯತೆಗಳು ಕಂಡು ಬಂದರೆ ಸ್ಥಳದಲ್ಲೇ ಪರಿಹಾರ ಕಲ್ಪಿಸುತ್ತೇನೆ. ರಾಜ್ಯದಲ್ಲೇ ದಾವಣಗೆರೆ ಜೆಜೆಎಂ ಮಾದರಿಯಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.

ಆಸ್ಪತ್ರೆಗೆ ಭೇಟಿ:

ಪಲ್ಲಾಗಟ್ಟೆ ಆರೋಗ್ಯ ಕೇಂದ್ರದಕ್ಕೆ ಭೇಟಿ ನೀಡಿದ ಸಿಇಒ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಸವಂತ್ಕುಮಾರ್ ಬಳಿ ಮಾಹಿತಿ ಪಡೆದು ಔಷಧಿ ಗುಣಮಟ್ಟ ಮತ್ತು ಟೆಲಿ ಮೆಡಿಸಿನ್ ಬಗ್ಗೆ ಮಾಹಿತಿ ಪಡೆದರು. ಹಾವು ಮತ್ತು ನಾಯಿ ಕಡಿತಕ್ಕೆ ಒಳಗಾದ ರೋಗಿಗಳಿಗೆ ಔಷಧ ದಾಸ್ತಾನು ಮಾಡಿಕೊಳ್ಳಿ. ಏನೇ ಸಮಸ್ಯೆಯಾದರೂ ಗಮನಕ್ಕೆ ತನ್ನಿ ಎಂದರು.

ಮಕ್ಕಳ ಜತೆ ಮಗುವಾದ ಸಿಇಒ:

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ, ಚಿಕ್ಕಮಕ್ಕಳ ಜೊತೆ ಕಾಲ ಕಳೆದರು. ಗೋಡೆ ಮೇಲೆ ಬರೆದಿದ್ದ ಚಿತ್ರಗಳನ್ನು ತೋರಿಸಿ ವಿವರಿಸಿದರು. ಮಗುವೊಂದು ಗೋಡೆ ಮೇಲೆ ಬರೆದಿದ್ದ ಭಾರತದ ರುಪಾಯಿಯ ಬಗ್ಗೆ ವಿವರಿಸಿದ್ದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ನಂತರ ಅಂಗನವಾಡಿ ಟೀಚರ್ ಕರೆದು ಪೌಷ್ಟಿಕಾಂಶಯುಕ್ತ ಆಹಾರ ಪೊಟ್ಟಣ ಪರಿಶೀಲಿಸಿ ಅವಧಿ ಮುಗಿಯುವ ಮುನ್ನವೇ ನೀಡಿ, ಮಕ್ಕಳಿಗೆ ಸರಿಯಾಗಿ ಮೊಟ್ಟೆ ವಿತರಿಸಲು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸಿಇಒ:

ಪಲ್ಲಾಗಟ್ಟೆಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಿಇಒ, ವಿದ್ಯಾರ್ಥಿಗಳಿಗೆ ಕೆಲವೊತ್ತು ಶಿಕ್ಷಕರಾದರು. ವಿದ್ಯಾರ್ಥಿಯ ಹೆಸರನ್ನು ಇಂಗ್ಲಿಷ್ನಲ್ಲಿ ಬರೆಸಿದರು. ನಂತರು ಹೆಣ್ಣು ಮಕ್ಕಳಿಗೆ ಬೋಧಿಸಿ ದಾವಣಗೆರೆ, ಕರ್ನಾಟಕ, ಮೀಝೋರಾಮ್ ಹೆಸರುಗಳನ್ನು ಬೋರ್ಡ್ ಮೇಲೆ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಬರೆಸಿದರು.

ಜೆಜೆಎಂ ಎಕ್ಸಿಕಿಟ್ಯೂವ್ ಎಂಜಿನಿಯರ್ ಸೋಮ್ಲಾನಾಯ್ಕ್, ಪಿಡಿಒ ರಾಘವೇಂದ್ರ, ಎಇಇ ಸಾದಿಕ್ವುಲ್ಲಾ, ಎಇ ಮರಿಯಪ್ಪ, ಮಹಾಂತೇಶ್, ಸಚಿನ್, ಮಂಜುನಾಥ್ನಾಯ್ಕ್, ಗೋಡೆ ಪ್ರಕಾಶ್ ಅನೇಕರು ಇದ್ದರು.