ಪ್ರತಿಮೆ ವೀಕ್ಷಿಸಲು ಭಕ್ತರ ಕಾಯುವಿಕೆ ಅನಿವಾರ್ಯ
KannadaprabhaNewsNetwork | Published : Nov 03 2023, 12:30 AM IST
ಪ್ರತಿಮೆ ವೀಕ್ಷಿಸಲು ಭಕ್ತರ ಕಾಯುವಿಕೆ ಅನಿವಾರ್ಯ
ಸಾರಾಂಶ
ಬೆಟ್ಟದ ಮಹದೇಶ್ವರನ ಪ್ರತಿಮೆಯನ್ನು ವೀಕ್ಷಿಸಲು ಭಕ್ತರು ಇನ್ನೂ ಆರೇಳು ತಿಂಗಳು ಕಾಯಬೇಕು. ಪ್ರತಿಮೆ ನಿರ್ಮಾಣಕ್ಕಾಗಿ ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು. ಮಹದೇಶ್ವರನ ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಆರೇಳು ತಿಂಗಳಾಗುತ್ತದೆ.ಪ್ರತಿಮೆಯ ಕೆಳಗೆ ಮ್ಯುಸಿಯಂ ಕಾಮಗಾರಿ ಇನ್ನೂ ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಬೆಟ್ಟದ ಮಹದೇಶ್ವರನ ಪ್ರತಿಮೆಯನ್ನು ವೀಕ್ಷಿಸಲು ಭಕ್ತರು ಇನ್ನೂ ಆರೇಳು ತಿಂಗಳು ಕಾಯಬೇಕು. ಪ್ರತಿಮೆ ನಿರ್ಮಾಣಕ್ಕಾಗಿ ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು. ಮಹದೇಶ್ವರನ ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಆರೇಳು ತಿಂಗಳಾಗುತ್ತದೆ.ಪ್ರತಿಮೆಯ ಕೆಳಗೆ ಮ್ಯುಸಿಯಂ ಕಾಮಗಾರಿ ಇನ್ನೂ ನಡೆಯುತ್ತಿದೆ. ರಸ್ತೆಯ ತಡೆಗೋಡೆ ಕುಸಿದಿದೆ. ಇದೆಲ್ಲಾ ಕಾಮಗಾರಿ ಮುಗಿಯಲು ಸಮಯ ಬೇಕು ಎಂದು ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದ್ದರು. ಸ್ವಲ್ಪ ದಿನದಲ್ಲೇ ತಡೆಗೋಡೆ ಕುಸಿತ ಕಂಡಿತ್ತು.