ಸಾರಾಂಶ
ಕಾರಣಾಂತರಗಳಿಂದ ತಮಗೆ ಸಚಿವ ಸ್ಥಾನ ತಪ್ಪಿರಬಹುದು. ಆದರೆ ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಗುವ ಭರವಸೆ ನನಗೆ ಇದೆ. ಯಾವುದೇ ಕಾರಣಕ್ಕೂ ತಾವು ಬೀಜ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಪೂರ್ಣಾವಧಿ ಮುಂದುವರಿಯುವುದಿಲ್ಲ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಮುಂದಿನ ದಿನಗಳಲ್ಲಿ ಖಚಿತವಾಗಿ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಂದ ಭರವಸೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷದಿಂದ ನನಗೆ ಸಚಿವ ಸ್ಥಾನದ ಅವಕಾಶ ಸಿಗದಿದ್ದರೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷರಾಗಿ ನೇಮಕಗೊಂಡಿರುವ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.ಶನಿವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು ಹಲವು ಕಾರಣಾಂತರಗಳಿಂದ ತಮಗೆ ಸಚಿವ ಸ್ಥಾನ ತಪ್ಪಿರಬಹುದು. ಆದರೆ ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಗುವ ಭರವಸೆ ನನಗೆ ಇದೆ ಎಂದರು.
ನಿಗಮ, ಮಂಡಳಿಗೆ ಲಾಬಿ ಮಾಡಿಲ್ಲನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಾವು ಲಾಬಿ ಮಾಡಿಲ್ಲ, ಅವರಾಗಿಯೇ ಬೀಜ ನಿಗಮಮದ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಆದರೆ ನಾನು ಇದಕ್ಕೂ ಮೊದಲೇ ನಿಗಮ ಮಂಡಳಿಯಲ್ಲಿ ನನಗೆ ಯಾವುದೇ ಹುದ್ದೆ ಬೇಡ ಎಂದು ಸಿಎಂ, ಡಿಸಿಎಂಗೆ ಪತ್ರ ಬರೆದಿರುವುದಾಗಿ ತಿಳಿದರು.
ನಿಗಮ ಮಂಡಳಿಗಳಿಂದ ನಮ್ಮ ಭಾಗಕ್ಕೆ ಹಾಗೂ ಜನರಿಗೆ ಅಭಿವೃದ್ದಿ ಕೆಲಸ ಇಲ್ಲ, ನನಗೆ ಜನರ ಸೇವೆ ಮತ್ತು ಅಭಿವೃದ್ದಿ ಮಾಡುವಂತಹ ಇಲಾಖೆ ಬೇಕೇ ವಿನಃ ಅಲಂಕಾರಿಕ ಹುದ್ದೆ ಬೇಕಾಗಿಲ್ಲ. ಯಾವುದೇ ಕಾರಣಕ್ಕೂ ತಾವು ಬೀಜ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲ್ಲ ಸ್ಪಷ್ಟಪಡಿಸಿದರು.ನನಗೆ ಸಚಿವ ಸ್ಥಾನ ನೀಡಬೇಕು
ಪಕ್ಷ ನಿಷ್ಠೆ ನೋಡಿ ಪಕ್ಷ ನನ್ನನ್ನು ಗುರ್ತಿಸಿ ನನಗೆ ಸಚಿವ ಸ್ಥಾನ ನೀಡಬೇಕೆ ಹೊರತು ನಾನು ಯಾವುದೇ ಕಾರಣಕ್ಕೂ ಹುದ್ದೆ ನೀಡುವಂತೆ ಲಾಬಿ ಮಾಡುವ ಕೆಲಸ ಮಾಡಿಲ್ಲ ಮಾಡುವುದು ಇಲ್ಲ, ಪಕ್ಷದ ಮುಖಂಡರ ವಿರುದ್ದ ನನಗೆ ಯಾವುದೆ ಅಸಮಾಧಾನವಿಲ್ಲ ಎಂದರು.ನೀವು ನಿಗಮ ಅಧ್ಯಕ್ಷ ಸ್ಥಾನ ನಿರಾಕರಿಸಿರುವವ ಹಾಗೂ ಸಚಿವ ಸ್ಥಾನಕ್ಕೆ ಪಟ್ಟುಹಿಡಿದಿರುವ ಹಿನ್ನಲೆಯಲ್ಲಿ ನಿಮಗೆ ಹೈಕಮಾಂಡ್ ಮನವೊಲಿಕೆ ಪ್ರಯತ್ನ ಮಾಡಿದ್ದೇಯೆ ಎಂಬ ಪ್ರಶ್ನೆಗೆ ಸಿಎಂ ಮತ್ತು ಡಿಸಿಎಂ ರವರು ಮುಮದಿನ ದಿನಗಳಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದರು.
27ಬಿಜಿಪಿ-1: ಎಸ್.ಎನ್.ಸುಬ್ಬಾರೆಡ್ಡಿ ಭಾವಚಿತ್ರ.