ಕಾಂಗ್ರೆಸ್ ಸಭೆಯಲ್ಲಿ ಗಲಾಟೆ ಪ್ರಕರಣ: ನಾಲ್ವರ ಅಮಾನತು

| Published : Oct 09 2024, 01:43 AM IST

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳು ಒಂದಾಗುವುದಿಲ್ಲ ಎಂಬ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಸರಿಯಲ್ಲ, ಪಕ್ಷದ ಕಾರ್ಯಕರ್ತರಿಗೆ ಶಾಸಕರು ದಾರಿ ತಪ್ಪಿಸುವ ಕೆಲಸ ಮಾಡಬಾರದು, ಇವರ ಕಾಟಕ್ಕೆ ಬೇಸತ್ತು ಪಕ್ಷದ ಚಟುವಟಿಕೆಗಳಿಂದ ದೂರವಿರುವ ಪಕ್ಷದ ಕಾರ್ಯಕರ್ತರನ್ನು ಮತ್ತೆ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಲಾಗುವುದು

----ಶಾಸಕರ ನಾಲ್ವರು ಬೆಂಬಲಿಗರ ಅಮಾನತು

----ಇತ್ತೀಚೆಗೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ ನಡೆದ ಗಲಾಟೆ ಹಿನ್ನೆಲೆ

----ಪಕ್ಷದ ಜಿಲ್ಲಾಧ್ಯಕ್ಷರನ್ನೇ ವೇದಿಕೆಯಿಂದ ತಳ್ಳಿದ ಘಟನೆ

------ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ನೇರಿದಂತೆ ನಾಲ್ವರು ಅಮಾತು

ಕನ್ನಡಪ್ರಭ ವಾರ್ತೆ ಕೋಲಾರಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ ನಡೆಸಿದ ಆರೋಪದ ಮೇಲೆ ನಾಲ್ವರು ಮುಖಂಡರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಪಕ್ಷದಿಂದ ಅಮಾನತು ಮಾಡಿದ್ದಾರೆ..ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಲಕ್ಷ್ಮೀನಾರಾಯಣ ಅ‍ವರು, ಎಂಎಲ್ಸಿ ಅನಿಲ್ ಕುಮಾರ್ ಮತ್ತು ಶಾಸಕ ಕೊತ್ತೂರು ಮಂಜುನಾಥ್ ಅವರ ನಾಲ್ವರು ಬೆಂಬಲಿಗರನ್ನು ಅಮಾನತು ಮಾಡಲಾಗಿದೆ. ಕಳೆದ ವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ತಮ್ಮನ್ನು ಹಾಗೂ ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಎಳೆದಾಡಿ ವೇದಿಕೆಯಿಂದ ಹೊರಹಾಕಿದ ಘಟನೆಯನ್ನು ವಿವರಿಸಿದರು.

ಅಮಾನತುಗೊಂಡ ಮುಖಂಡರು

ಅಂದು ಗಲಾಟೆ ನಡೆಸಿದ ನಗರಸಭೆ ಸದಸ್ಯ ಅಂಬರೀಶ್, ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡ್ಲಹಳ್ಳಿ ಮುರುಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಚೌಡೇರೆಡ್ಡಿರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.ಸಭೆಯಲ್ಲಿ ಆಶಿಸ್ತು ತೋರಿದವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ, ಎಂಎಲ್ಸಿ ಅನಿಲ್ ಕುಮಾರ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದಿಲ್ಲ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಗಲಾಟೆ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆದಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಅ‍ವರು ಹೇಳಿದರು.ದಾರಿ ತಪ್ಪಿಸಬೇಡಿ:

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳು ಒಂದಾಗುವುದಿಲ್ಲ ಎಂಬ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಸರಿಯಲ್ಲ, ಪಕ್ಷದ ಕಾರ್ಯಕರ್ತರಿಗೆ ಶಾಸಕರು ದಾರಿ ತಪ್ಪಿಸುವ ಕೆಲಸ ಮಾಡಬಾರದು, ಇವರ ಕಾಟಕ್ಕೆ ಬೇಸತ್ತು ಪಕ್ಷದ ಚಟುವಟಿಕೆಗಳಿಂದ ದೂರವಿರುವ ಪಕ್ಷದ ಕಾರ್ಯಕರ್ತರನ್ನು ಮತ್ತೆ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಲಾಗುವುದು ಎಂದು ಹೇಳಿದರು.

ಮುಬಾರಕ್ ಪಕ್ಷದ ಶಕ್ತಿ

ಈ ಮೂಲಕ ದುಷ್ಟ ಕೂಟಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ, ನಗರಸಭೆ ಸದಸ್ಯ ಮುಬಾರಕ್ ಅವರು ಪಕ್ಷದಿಂದ ಅಮಾನತು ಮಾಡಿಲ್ಲ, ಅವರು ಪಕ್ಷದ ಶಕ್ತಿ ದೊಡ್ಡ ಕಾರ್ಯಕರ್ತರ ಪಡೆ ಅವರ ಜೊತೆಯಲ್ಲಿದೆ, ಇಂದಿನಿಂದ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ ಎಂದು ಅಧ್ಯಕ್ಷ ಲಕ್ಷಿನಾರಾಯಣ್ ಹೇಳಿದರು.